Antidumping duty:ಚೀನಾದ 5 ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಭಾರತ

By Suvarna NewsFirst Published Dec 27, 2021, 2:47 PM IST
Highlights

*ಚೀನಾದಿಂದ ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಆಮದಾಗುತ್ತಿದ್ದಈ ಐದು ಉತ್ಪನ್ನಗಳು
*ಈ ಉತ್ಪನ್ನಗಳಿಂದ ದೇಶೀಯ ಉತ್ಪಾದಕರಿಗೆ ಹಾನಿ
*ಐದು ವರ್ಷಗಳ ಅವಧಿಗೆ ಹೆಚ್ಚುವರಿ ಸುಂಕ ವಿಧಿಸಿದ ಸರ್ಕಾರ

ನವದೆಹಲಿ (ಡಿ.27): ನೆರೆರಾಷ್ಟ್ರದ ಅಗ್ಗದ ಉತ್ಪನ್ನಗಳಿಂದ ಸ್ಥಳೀಯ ಉತ್ಪಾದಕರನ್ನು ರಕ್ಷಿಸೋ ಉದ್ದೇಶದಿಂದ ಚೀನಾದ(China) ಐದು ಉತ್ಪನ್ನಗಳ(products) ಮೇಲೆ ಕೇಂದ್ರ ಸರ್ಕಾರ (Central government) ಐದು ವರ್ಷಗಳ ಅವಧಿಗೆ ಆ್ಯಂಟಿ ಡಂಪಿಂಗ್‌ ( antidumping duties) ವಿಧಿಸಿದೆ. ನಿರ್ದಿಷ್ಟ ಅಲ್ಯಮೀನಿಯಂ ಉತ್ಪನ್ನಗಳು( aluminium products), ಸೋಡಿಯಂ ಹೈಡ್ರೋಸಲ್ಫೇಟ್ (ಡೈ ಉದ್ಯಮದಲ್ಲಿ ಬಳಸಲಾಗುತ್ತದೆ), ಸಿಲಿಕಾನ್ ಸೀಲಂಟ್ (ಸೌರ ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಉಪಕರಣಗಳಲ್ಲಿ ಬಳಸಲಾಗುತ್ತದೆ), ರೆಫ್ರಿಜರೇಟ್ ತಯಾರಿಕೆಯಲ್ಲಿ ಬಳಸೋ ಹೈಡ್ರೋಫ್ಲೋರೋ ಕಾರ್ಬನ್ ( (HFC) ಕಾಂಪೋನಂಟ್‌-32(component R-32)  ಮತ್ತು ಹೈಡ್ರೋಫ್ಲೋರೋಕಾರ್ಬನ್‌ ಮಿಶ್ರಣಗಳ (hydrofluorocarbon blends ) ಮೇಲೆ ಸುಂಕಗಳನ್ನು(Taxes) ವಿಧಿಸಿರೋದು  ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿ (CBIC) ಹೊರಡಿಸಿರೋ ಪ್ರತ್ಯೇಕ ಅಧಿಸೂಚನೆಗಳಲ್ಲಿ (Notifications) ದೃಢಪಟ್ಟಿದೆ. 

ವಾಣಿಜ್ಯ ಸಚಿವಾಲಯದ(Finance Ministry) ತನಿಖಾ ಸಂಸ್ಥೆಯಾಗಿರೋ ವ್ಯಾಪಾರ ವ್ಯಾಜ್ಯ ಪರಿಹಾರಗಳ ಮಹಾನಿರ್ದೇಶನಾಲಯದ (DGTR) ಶಿಫಾರಸ್ಸುಗಳ (Recommendations) ಆಧಾರದಲ್ಲಿ ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಈ ಐದು ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ಚೀನಾ ಭಾರತದ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿರೋದು DGTR ತನಿಖೆಯಲ್ಲಿ ದೃಢಪಟ್ಟಿತ್ತು. ಈ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಭಾರತಕ್ಕೆ ತಂದು ಸುರಿಯಲಾಗುತ್ತಿರೋ ( dumping) ಕಾರಣ ಇದಕ್ಕೆ ಸಂಬಂಧಿಸಿದ ದೇಶೀಯ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ದೇಶೀಯ ಉತ್ಪನ್ನಗಳಿಗೆ ಬೇಡಿಕೆ ತಗ್ಗಿದೆ ಎಂದು DGTR ತಿಳಿಸಿದೆ.

ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!

ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿ (CBIC) ಚೀನಾದಿಂದ ಆಮದಾಗೋ(Import) ವಾಹನ ಬಿಡಿಭಾಗವಾದ ಅಕ್ಸಲ್ (Axle) ಮೇಲೆ ಕೂಡ ಸುಂಕ ವಿಧಿಸಿದೆ. ಚೀನಾ ಈ ಉತ್ಪನ್ನವನ್ನು ಕೂಡ ಕಡಿಮೆ ಬೆಲೆಗೆ ಭಾರತಕ್ಕೆ ರಫ್ತು(Export) ಮಾಡುತ್ತಿದ್ದು,ಇದ್ರಿಂದ ದೇಶೀಯ ಉತ್ಪಾದಕರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. 

ಜಿಪ್ಸ್ಂ ಪೌಡರ್(gypsum powder) ಆಮದಿನ ಮೇಲೆ ಸುಂಕ ಕಡಿತ 
ಇರಾನ್(Iran), ಒಮನ್(Oman) , ಸೌದಿ ಅರೇಬಿಯಾ(Saudi Arabia) ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ((UAE)ಜಿಪ್ಸ್ಂ ಪೌಡರ್(gypsum powder)ಆಮದಿನ ಮೇಲೆ ಐದು ವರ್ಷಗಳ ಅವಧಿಗೆ CBIC ಸುಂಕ(Duty) ಕಡಿತಗೊಳಿಸಿದೆ. ಸಾಮಾನ್ಯವಾಗಿ ಯಾವ ವಸ್ತುವಿನ ಮೇಲೆ ಎಷ್ಟು ಸುಂಕ ವಿಧಿಸಬೇಕೆಂದು  DGTR ಶಿಫಾರಸ್ಸು ಮಾಡುತ್ತದೆ. ಅದರ ಅನ್ವಯ ಹಣಕಾಸು ಸಚಿವಾಲಯ(finance ministry)ಸುಂಕ ವಿಧಿಸುತ್ತದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಳ್ಳುತ್ತಿರೋ ಉತ್ಪನ್ನಗಳಿಂದ ದೇಶೀಯ ಕೈಗಾರಿಕೆಗಳಿಗೆ ಹಾನಿಯಾಗುತ್ತಿದೆಯೇ ಎಂಬ ಕುರಿತು ತನಿಖೆ ಕೈಗೊಳ್ಳಲಾಗಿದೆ. ಈ ತನಿಖೆಯಲ್ಲಿ ದೇಶೀಯ ಕೈಗಾರಿಕೆಗಳಿಗೆ ನಷ್ಟವುಂಟು ಮಾಡುತ್ತಿರೋ ಉತ್ಪನ್ನಗಳು(Products)  ಕಂಡುಬಂದ್ರೆ ಅವುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿ ಸ್ಥಳೀಯ ಉತ್ಪಾದಕರನ್ನು ರಕ್ಷಿಸೋ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

RBI action against RBL Bank : ಮುಂಬೈ ಮೂಲದ ಬ್ಯಾಂಕ್ ವಿರುದ್ಧ ಆರ್ ಬಿಐ ಹಠಾತ್ ಕ್ರಮ, ಕಾರಣವೇನು?

ನ್ಯಾಯಬದ್ಧ ವ್ಯಾಪಾರ ಹಾಗೂ ದೇಶೀಯ ಉದ್ಯಮಿಗಳಿಗೆ ರಕ್ಷಣೆ ಒದಗಿಸೋ ಉದ್ದೇಶದಿಂದ ಕಡಿಮೆ ಬೆಲೆ ಸರಕುಗಳ ರಫ್ತಿನ(Import) ಮೇಲೆ ನಿರ್ಬಂಧ ವಿಧಿಸೋ ಕ್ರಮವನ್ನು ಜಗತ್ತಿನ ಅನೇಕ ರಾಷ್ಟ್ರಗಳು ಆಗಾಗ ಕೈಗೊಳ್ಳುತ್ತಿರುತ್ತವೆ. ಭಾರತ ಹಾಗೂ ಚೀನಾ ಎರಡೂ ವಿಶ್ವ ವ್ಯಾಪಾರ ಸಂಸ್ಥೆ((WTO) ಸದಸ್ಯ ರಾಷ್ಟ್ರಗಳಾಗಿದ್ದು, ಇಲ್ಲಿ ಚೀನಾದ ವಿರುದ್ಧ ಅತ್ಯಧಿಕ anti-dumping ಪ್ರಕರಣಗಳನ್ನು ದಾಖಲಿಸಿದೆ ರಾಷ್ಟ್ರ ಭಾರತವಾಗಿದೆ. 2017ರಲ್ಲಿ ಚೀನಾದ ಟೆಂಪರ್ಡ್‌ ಗ್ಲಾಸ್‌ಗಳ ಆಮದಿನ ಮೇಲೆ ಭಾರತ ಆ್ಯಂಟಿ ಡಂಪಿಂಗ್‌(Antidumping) ಸುಂಕ(duty) ಹೇರಿತ್ತು.

click me!