ಆರ್ಥಿಕತೆಯ ಕೆಟ್ಟಗಳಿಗೆ ಬಹುತೇಕ ಅಂತ್ಯ: ಆರ್‌ಬಿಐ| ಈ ವರ್ಷ ಜಿಡಿಪಿ ದರ ಒಟ್ಟಾರೆ ಶೇ.9.5 ಕುಸಿತ ನಿರೀಕ್ಷೆ| ಸದ್ಯಕ್ಕೆ ಬಡ್ಡಿ ದರ ಕಡಿತ ಇಲ್ಲ: ದ್ವೈಮಾಸಿಕ ಸಾಲ ನೀತಿ| ಭಾರಿ ಕುಸಿತದಿಂದ ದೂರ ಬಂದಿದ್ದೇವೆ| ಆರ್ಥಿಕ ಕ್ಷೇತ್ರದಲ್ಲಿ ಬೆಳ್ಳಿಯ ರೇಖೆಗಳು ಕಾಣಿಸುತ್ತಿವೆ: ಶಕ್ತಿಕಾಂತ ದಾಸ್
ಮುಂಬೈ(ಅ.10):: ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕತೆಗೆ ಎದುರಾಗಿದ್ದ ಕೆಟ್ಟಗಳಿಗೆ ಬಹುತೇಕ ಮುಗಿದಂತೆ ಕಾಣುತ್ತಿದೆ. ಕೊರೋನಾ ಪೂರ್ವದಲ್ಲಿದ್ದ ಅಭಿವೃದ್ಧಿ ದರದ ಕಡೆಗೆ ಆರ್ಥಿಕತೆ ನಿಧಾನವಾಗಿ ಮರಳಬಹುದು ಎಂಬ ಆಶಾವಾದವನ್ನು ನಾವು ಇಟ್ಟುಕೊಳ್ಳಬಹುದು ಎಂದು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಭರವಸೆ ವ್ಯಕ್ತಪಡಿಸಿದೆ.
undefined
ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿರುವ ಆರ್‌ಬಿಐ, ಈ ವರ್ಷ ದೇಶದ ಆರ್ಥಿಕತೆ ಒಟ್ಟಾರೆ ಶೇ.9.5ರಷ್ಟುಕುಸಿತ ಕಾಣಲಿದೆ ಎಂದು ಹೇಳಿದೆ. ಪ್ರಮುಖ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ದ್ವೈಮಾಸಿಕ ಸಾಲನೀತಿಯನ್ನು ಬಿಡುಗಡೆ ಮಾಡಿದರು. ಎಲ್ಲಾ ರೀತಿಯಿಂದಲೂ ನಾವೀಗ ಮೊದಲ ತ್ರೈಮಾಸಿಕದಲ್ಲಿ ಉಂಟಾದಂತಹ ಭಾರಿ ಕುಸಿತದಿಂದ ದೂರ ಬಂದಿದ್ದೇವೆ. ಆರ್ಥಿಕ ಕ್ಷೇತ್ರದಲ್ಲಿ ಬೆಳ್ಳಿಯ ರೇಖೆಗಳು ಕಾಣಿಸುತ್ತಿವೆ. ದೇಶದ ಗ್ರಾಮೀಣ ಪ್ರದೇಶಗಳು ಮತ್ತು ಉತ್ಪಾದನಾ ವಲಯ ಮೊದಲಿಗೆ ಚೇತರಿಸಿಕೊಳ್ಳಲಿವೆ. ನಗರ ಪ್ರದೇಶಗಳು ಮತ್ತು ಸೇವಾ ಕ್ಷೇತ್ರಗಳು ಸ್ವಲ್ಪ ತಡವಾಗಿ ಚೇತರಿಸಿಕೊಳ್ಳಲಿವೆ. ಹೂಡಿಕೆ ಮತ್ತು ರಫ್ತು ಈ ಬಾರಿ ಕಡಿಮೆಯಾಗಲಿದೆ. ಬೇರೆ ಬೇರೆ ಕ್ಷೇತ್ರಗಳು ಬೇರೆ ಬೇರೆ ಸಮಯದಲ್ಲಿ ಕೊರೋನಾಪೂರ್ವ ಸ್ಥಿತಿಗೆ ಬರಲಿವೆ. ಆರ್ಥಿಕತೆಗೆ ಸರ್ಕಾರದಿಂದ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ದೊರಕಿರುವುದರಿಂದ ದೇಶದ ಜಿಡಿಪಿ ಪಾತಾಳಕ್ಕೆ ಕುಸಿಯುವುದು ತಪ್ಪಿದೆ ಎಂದು ತಿಳಿಸಿದರು.
ಡಿಸೆಂಬರ್‌ವರೆಗೂ ಆರ್ಥಿಕತೆ ಕುಸಿಯುತ್ತಲೇ ಸಾಗಲಿದ್ದು, ಜನವರಿ-ಮಾಚ್‌ರ್ ತ್ರೈಮಾಸಿಕದಲ್ಲಿ ಕೊರೋನಾಘಾತದ ನಂತರ ಮೊದಲ ಬಾರಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.0.5ನಷ್ಟುಧನಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ.
ಲಾಕ್‌ಡೌನ್‌ನ ಪರಿಣಾಮ ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ.23.9ರಷ್ಟುಕುಸಿದಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ.9.8ರಷ್ಟುಕುಸಿದಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ.5.6ರಷ್ಟುಕುಸಿಯುವ ಸಾಧ್ಯತೆಯಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಶೇ.0.5ರಷ್ಟುಬೆಳವಣಿಗೆ ಕಾಣಲಿದೆ. ಒಟ್ಟಾರೆಯಾಗಿ 2020-21ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.9.5ರಷ್ಟುಕುಸಿತ ಕಾಣಲಿದೆ. ಈ ಕುಸಿತ ಶೇ.9.8ರ ವರೆಗೂ ಆಗಬಹುದು. ನಂತರ 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ ಶೇ.20.6ರಷ್ಟುಬೆಳವಣಿಗೆ ಕಾಣಲಿದೆ ಎಂದು ದಾಸ್ ಹೇಳಿದರು.
ಪ್ರಸಕ್ತ ಆರ್ಥಿಕ ಸನ್ನಿವೇಶಗಳನ್ನು ಗಮನದಲ್ಲಿರಿಸಿಕೊಂಡು ಈ ಬಾರಿ ಪ್ರಮುಖ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧರಿಸಿದೆ ಎಂದು ತಿಳಿಸಿದರು.
ಜಿಡಿಪಿ ಪ್ರಗತಿ ನಿರೀಕ್ಷೆ
(2020-21ರ ಆರ್ಥಿಕ ವರ್ಷ)
ಏಪ್ರಿಲ್-ಜೂನ್ -23%
ಜುಲೈ-ಸೆಪ್ಟೆಂಬರ್ -9.8%
ಅಕ್ಟೋಬರ್-ಡಿಸೆಂಬರ್ -5.6%
ಜನವರಿ-ಮಾಚ್‌ರ್ +0.5%
2021 ಏಪ್ರಿಲ್-ಜೂನ್ +20.6%