ಲಿಸ್ಟಿಂಗ್‌ ವೇಳೆ ನಷ್ಟ ಕಂಡಿದ್ದ ಸ್ಟಾಕ್‌ ಇಂದು ಮಲ್ಟಿಬ್ಯಾಗರ್‌!

By Santosh Naik  |  First Published Nov 23, 2024, 4:05 PM IST

Inox Green Energy Services ಶೇರುಗಳು ಲಿಸ್ಟಿಂಗ್ ದಿನದಂದು ಹೂಡಿಕೆದಾರರಿಗೆ 9% ನಷ್ಟ ಉಂಟು ಮಾಡಿದ್ದರು. ನಂತರ 120% ರಷ್ಟು ದೊಡ್ಡ ಲಾಭವನ್ನು ನೀಡಿದೆ. ಇದರ 52 ವಾರಗಳ ಗರಿಷ್ಠ ಬೆಲೆ ₹224 ರೂಪಾಯಿ.


ಬೆಂಗಳೂರು (ನ.23): ಹೂಡಿಕೆದಾರರನ್ನು ಐಪಿಒ ನಂತರದ ಲಿಸ್ಟಿಂಗ್‌ನಲ್ಲಿ ನಿರಾಶೆಗೊಳಿಸಿದ ಹಲವಾರು ಶೇರುಗಳು ಷೇರು ಮಾರುಕಟ್ಟೆಯಲ್ಲಿವೆ. ಆದರೆ, ನಂತರ ಅದೇ ಶೇರುಗಳು ಹೂಡಿಕೆದಾರರಿಗೆ ದೊಡ್ಡ ಮಟ್ಟದ ಲಾಭವನ್ನು ನೀಡಿದ ದೃಷ್ಟಾಂತಗಳೂ ಇವೆ. ಐಆರ್‌ಎಫ್‌ಸಿ ಇದಕ್ಕೆ ಉದಾಹರಣೆ. ಅದೇ ರೀತಿಯ ಇನ್ನೊಂದು ಷೇರು Inox Green Energy Services. ಷೇರು ಮಾರುಕಟ್ಟೆಗೆ ಲಿಸ್ಟಿಂಗ್‌ ಆಗುವ ವೇಳೆ ಇದು ನೆಗೆಟಿವ್‌ ಲಿಸ್ಟಿಂಗ್‌ ಆಗಿತ್ತು. ಪ್ರತಿ ಷೇರಿನ ಮೇಲೆ 6 ರೂಪಾಯಿ ಕಡಿಮೆ ಬೆಲೆಗೆ ಪಟ್ಟಿಯಾಗಿತ್ತು. ಷೇರು ಹೂಡಿಕೆ ಮಾಡಿದವರು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದರು. ಈಗ ಅದೇ ಷೇರು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.

ಲಿಸ್ಟಿಂಗ್ ದಿನದಂದು 9% ಕ್ಕಿಂತ ಹೆಚ್ಚು ನಷ್ಟ: Inox Green Energy Services ನ ಷೇರಿನ ಐಪಿಒ ಬೆಲೆ ₹65 ಆಗಿತ್ತು. ಆದರೆ, ಲಿಸ್ಟಿಂಗ್‌ ದಿನದಂದು ಪ್ರತಿ ಷೇರಿಗೆ 59 ರೂಪಾಯಿಯಂತೆ ಲಿಸ್ಟ್‌ ಆಗಿತ್ತು. ಅಂದರೆ, ಪ್ರತಿ ಷೇರಿಗೆ 6 ರೂಪಾಯಿ ನಷ್ಟವಾಗಿತ್ತು. ಇನ್ನು ಲಿಸ್ಟಿಂಗ್‌ ಡೇ ದಿನದ ಲಾಭದ ಬಗ್ಗೆ ಮಾತನಾಡೋದಾದರೆ, ಇದು ಹೂಡಿಕೆದಾರರಿಗೆ ಶೇ. 9ರಷ್ಟು ನಷ್ಟ ಉಂಟು ಮಾಡಿತ್ತು.

Tap to resize

Latest Videos

ಲಿಸ್ಟಿಂಗ್ ನಂತರ 120% ಲಾಭ:  Inox Green Energy Services ನ ಐಪಿಒ 2022ರ ನವೆಂಬರ್ 11 ರಿಂದ 15 ರ ನಡುವೆ ಬಂದಿತ್ತು. 2022ರ  ನವೆಂಬರ್‌ 23ರಂದು ಕಂಪನಿ ಮಾರುಕಟ್ಟಡಯಲ್ಲಿ ಲಿಸ್ಟ್‌ ಆಗಿತ್ತು. ಅಂದಿನಿಂದ, ಈ ಶೇರು ಹೂಡಿಕೆದಾರರಿಗೆ ಒಟ್ಟಾರೆಯಾಗಿ 120% ಲಾಭವನ್ನು ನೀಡಿದೆ. ಪ್ರಸ್ತುತ ಈ ಷೇರಿನ ಬೆಲೆ ₹142.18 ರೂಪಾಯಿ ಆಗಿದೆ.

₹224 ವರೆಗಿನ ಪ್ರಯಾಣ: Inox Green Energy Services ನ ಷೇರಿನ 52 ವಾರಗಳ ಗರಿಷ್ಠ ಮಟ್ಟ ₹224.65. ಅದರ 52 ವಾರಗಳ ಕನಿಷ್ಠ ಮಟ್ಟದ ಬಗ್ಗೆ ಮಾತನಾಡುವುದಾದರೆ, ಅದು ತನ್ನ ಐಪಿಒ ಬೆಲೆಯ ಸಮೀಪ ಅಂದರೆ ₹67 ಕ್ಕೆ ಕುಸಿದಿದೆ. ಹಾಗಿದ್ದರೂ ಇದರ ಸಾರ್ವಕಾಲಿಕ ಕನಿಷ್ಠ ಮಟ್ಟ ಐಪಿಒ ಬೆಲೆಗಿಂತ ಕಡಿಮೆ ಅಂದರೆ ₹38.40. ಗುರುವಾರ, 2024ರ ನವೆಂಬರ್ 21 ರಂದು, ಷೇರಿನಲ್ಲಿ ಸುಮಾರು 5% ಕುಸಿತ ಕಂಡುಬಂದಿದೆ ಮತ್ತು ಅದು ₹7.44 ರಷ್ಟು ಕುಸಿದು ₹142 ಕ್ಕೆ ಮುಕ್ತಾಯವಾಯಿತು. ದಿನದ ವಹಿವಾಟಿನ ಸಮಯದಲ್ಲಿ ಒಂದು ಸಮಯದಲ್ಲಿ ಈ ಷೇರು ₹140.81 ಕ್ಕೆ ಕುಸಿದಿತ್ತು. ನಂತರ ಸ್ವಲ್ಪ ಚೇತರಿಕೆ ಕಂಡುಬಂದಿದೆ.

₹5200 ಕೋಟಿಗೂ ಹೆಚ್ಚು ಕಂಪನಿಯ ಮಾರುಕಟ್ಟೆ ಬಂಡವಾಳ: Inox Green Energy Services ನ ಷೇರಿನ ಬಗ್ಗೆ ಮಾತನಾಡುವುದಾದರೆ, ಅದರ ಷೇರಿನ ಮುಖಬೆಲೆ ₹10. ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ ಪ್ರಸ್ತುತ ₹5,218 ಕೋಟಿ. Inox Green Energy Services Limited (IEGSL) ಭಾರತದಲ್ಲಿ ಪವನ ಶಕ್ತಿ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ. ಇದು ಪವನ ಶಕ್ತಿ ಫಾರ್ಮ್ ಯೋಜನೆ, ಪವನ ಟರ್ಬೈನ್ ಜನರೇಟರ್‌ಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ. ಇದು Inox Wind Limited ನ ಅಂಗಸಂಸ್ಥೆಯಾಗಿದ್ದು, ಇದು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತದೆ.

(ಹಕ್ಕುತ್ಯಾಗ: ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಎಲ್ಲಾ ಅಪಾಯಗಳಿಗೆ ಒಳಪಟ್ಟಿರುತ್ತದೆ. ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮೊದಲು ಉತ್ತಮ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.)

ಇದನ್ನೂ ನೋಡಿ: ನಿಖಿಲ್‌ ಪಾಲಿಗೆ ಇನ್ನೂ ಮುಗಿದಿಲ್ಲ ಕುರುಕ್ಷೇತ್ರದ ಶಾಪ, ಅಭಿಮನ್ಯುಗೆ ಇನ್ನೆಷ್ಟು ದಿನ ವನವಾಸ!

ಇದನ್ನೂ ನೋಡಿ:  Viral Video: 'ನನ್ನ ಚಪ್ಪಲಿ ಸೈಜ್‌ 41..' ಪ್ರಖ್ಯಾತ ಹೀರೋಗೆ ಹೇಗೆ ಹೇಳಿದ್ಯಾಕೆ ನಟಿ ಖುಷ್ಭು ಸುಂದಂರ್‌!

click me!