Business Idea : ಪಶುಸಂಗೋಪನೆ ಮಾಡೋ ಮೊದಲು ಯಾವುದು ಲಾಭದಾಯಕ ಎಂಬುದನ್ನು ತಿಳ್ಕೊಳ್ಳಿ

By Suvarna NewsFirst Published Jan 31, 2023, 3:31 PM IST
Highlights

ರೈತರು ವರ್ಷವಿಡಿ ದುಡಿದ್ರೂ ಕೊನೆಯಲ್ಲಿ ಸಿಗೋದಿ ಅತ್ಯಲ್ಪ ಮಾತ್ರ. ಅರ್ಧ ಬೆಳೆ ಹಾಳಾಗುತ್ತೆ, ಉಳಿದ ಬೆಳೆಗೆ ಸರಿಯಾದ ಬೆಲೆ ಸಿಗೋದಿಲ್ಲ. ಹಾಗಾಗಿ ಒಂದನ್ನೇ ನಂಬಿ ಕುಳಿತ್ರೆ ಜೀವನ ಸಾಗೋದಿಲ್ಲ. 
 

ರೈತರು ಬರಿ ಗೋಧಿ, ಅಕ್ಕಿ, ತೆಂಗು, ಅಡಿಕೆ ಹೀಗೆ ಬೇಸಾಯ ನಂಬಿ  ಬದುಕಿದ್ರೆ ಸಾಲೋದಿಲ್ಲ. ರೈತರ ಆದಾಯ ಹೆಚ್ಚಿಸಲು ಬೇರೆ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ರೈತರ ಆದಾಯಕ್ಕೆ ಉತ್ತಮ ಮೂಲವೆಂದ್ರೆ ಜಾನುವಾರುಗಳು. ಪಶುಸಂಗೋಪನೆ ಅನೇಕ ಪ್ರದೇಶಗಳಲ್ಲಿ ಜೀವನೋಪಾಯದ ಮುಖ್ಯ ಮೂಲವಾಗಿದೆ. ಹಸು, ಎಮ್ಮೆ, ಮೇಕೆ, ಕುರಿ, ಒಂಟೆ, ಬಾತುಕೋಳಿ, ಕೋಳಿ,  ಮೀನು, ರೇಷ್ಮೆ ಹುಳು, ಜೇನುನೊಣ ಇತ್ಯಾದಿಗಳನ್ನು ಶತಮಾನಗಳಿಂದ ನಮ್ಮ ದೇಶದಲ್ಲಿ ಸಾಕಲಾಗುತ್ತಿದೆ. ಅನೇಕರು ಹಿಂದಿನಿಂದ ನಡೆದು ಬಂದ ನಿಯಮದಂತೆ ಇವುಗಳ ಪಾಲನೆ ಮಾಡ್ತಿರುವ ಕಾರಣ ಕಡಿಮೆ ಆದಾಯ ಗಳಿಸ್ತಿದ್ದಾರೆ. ಮತ್ತೆ ಕೆಲವರು ಪಶುಸಂಗೋಪನೆ ಬಿಡ್ತಿದ್ದಾರೆ. ಅನೇಕ ರೈತರಿಗೆ  ಹೆಚ್ಚು ಲಾಭದಾಯಕ ಜಾನುವಾರು ಯಾವುದು ಎಂಬುದೇ ಗೊತ್ತಿಲ್ಲ. ನಾವಿಂದು ಯಾವ ಜಾನುವಾರು ನಿಮ್ಮ ಆದಾಯ ಹೆಚ್ಚಿಸುತ್ತೆ ಎಂಬುದನ್ನು ಹೇಳ್ತೆವೆ.

ರೈತರ (Farmers) ಆದಾಯ ಹೆಚ್ಚಿಸುವ ಪಶುಸಂಗೋಪನೆ (Animalhusbandry) ಯಾವುದು ಗೊತ್ತಾ? :  

ಹೈನುಗಾರಿಕೆ (Dairy) : ಹಾಲು ಉತ್ಪಾದನೆಗಾಗಿ ನಮ್ಮ ದೇಶದಲ್ಲಿ ಹಸು-ಎಮ್ಮೆಗಳನ್ನು ಹಿಂದಿನ ಕಾಲದಿಂದಲೂ ಸಾಕುತ್ತ ಬಂದಿದ್ದಾರೆ. ಹಾಲು ಮಾತ್ರವಲ್ಲ ಹಾಲಿನಿಂದ ಮೊಸರು, ಪನೀರ್, ತುಪ್ಪ ಹೀಗೆ ಅನೇಕ ಉತ್ಪನ್ನವನ್ನು ತಯಾರಿಸಬಹುದು. ಈಗ ಬಹುತೇಕ ಎಲ್ಲ ಹಳ್ಳಿಗಳಲ್ಲಿ ಡೈರಿಯಿದೆ. ನೀವು ಹಾಲು ಮಾರಾಟ ಮಾಡಿ ಇಲ್ಲವೆ ಹಾಲಿನ ಉತ್ಪನ್ನ ತಯಾರಿಸಿ ಅದನ್ನು ಮಾರಾಟ ಮಾಡಿ ಉತ್ತಮ ಆದಾಯವನ್ನೂ ಪಡೆಯಬಹುದು. ಇದರೊಂದಿಗೆ ಈಗ ಸಾವಯವ ಕೃಷಿಯ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ ಹಸುವಿನ ಸಗಣಿಗೂ ಬೇಡಿಕೆ ಹೆಚ್ಚಾಗತೊಡಗಿದೆ. ನೀವೂ ಕೂಡ ಹೈನುಗಾರಿಕೆ ಶುರು ಮಾಡಿ, ಅದ್ರ ಜೊತೆ ಸಗಣಿ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು.

Business Ideas : ಕಲಿಸುವ ಸಾಮರ್ಥ್ಯ ನಿಮಗಿದ್ರೆ ಈ ಕೆಲಸ ಬೆಸ್ಟ್

ಮೇಕೆ (Goat)  ಸಾಕಾಣಿಕೆ: ಮೇಕೆ ಸಾಕಣೆ ರೈತರ ಆದಾಯವನ್ನು ಹೆಚ್ಚಿಸುವ ಉತ್ತಮ ಮೂಲವಾಗಿದೆ. ಮೇಕೆ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇರುತ್ತದೆ. ಇದರೊಂದಿಗೆ ಮೇಕೆ ಹಾಲು ಮಾರಾಟ ಮಾಡಿದರೂ ರೈತರು ಭಾರಿ ಆದಾಯ ಪಡೆಯಬಹುದು. ಮೇಕೆ ಹಾಲನ್ನು ಅನೇಕ ರೋಗಕ್ಕೆ ಮದ್ದು ಎನ್ನಲಾಗುತ್ತದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಮೇಕೆ ನಿರ್ವಹಣೆಯ ವೆಚ್ಚವೂ ಕಡಿಮೆ.

ಮೀನು (Fish) ಸಾಕಣೆ : ದಿನದಿಂದ ದಿನಕ್ಕೆ ಮೀನಿನ ಸೇವನೆ ಹೆಚ್ಚಾಗ್ತಿದೆ. ಸಣ್ಣ ರೈತರು ಕೂಡ ಈ ವ್ಯವಹಾರ ಶುರು ಮಾಡಿ ಉತ್ತಮ ಲಾಭ ಗಳಿಸಬಹುದು. ಮೀನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರವು ವಿವಿಧ ಯೋಜನೆಗಳನ್ನು ಸಹ ಪ್ರಾರಂಭಿಸಿದೆ. ಅಕ್ವಾಪೋನಿಕ್ ತಂತ್ರಗಳ ಮೂಲಕ  ಮೀನು ಸಾಕಣೆ ಮಾಡಿದ್ರೆ ಲಾಭ ಹೆಚ್ಚು. 

ರೇಷ್ಮೆ ಹುಳು (Silkworm) ಸಾಕಾಣಿಕೆ : ಈ ವ್ಯವಹಾರವನ್ನು ರೇಷ್ಮೆ ಕೃಷಿ ಎಂದೂ ಕರೆಯುತ್ತಾರೆ. ರೇಷ್ಮೆ ಹುಳು ಸಾಕಣೆ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ನೀಡುತ್ತದೆ. ಕೀಟಗಳ ಆಹಾರಕ್ಕಾಗಿ ಮರಗಳನ್ನು ನೆಡುವುದು, ಕೀಟಗಳನ್ನು ಸಾಕುವುದು, ರೇಷ್ಮೆಯನ್ನು ಸ್ವಚ್ಛಗೊಳಿಸುವುದು, ನೂಲು ನೂಲುವ, ನೂಲಿನಿಂದ ಬಟ್ಟೆಗಳನ್ನು ತಯಾರಿಸುವುದು ಇತ್ಯಾದಿ ಕೆಲಸವಿರುತ್ತದೆ. ಗ್ರಾಮೀಣ ಭಾಗದ ರೈತರಿಗೆ ಇದು ಉತ್ತಮ ಉದ್ಯೋಗ (employment) ದ ಮೂಲವಾಗಿದೆ.

Business Idea: ಯೋಗ ಕಲಿತು ಆರೋಗ್ಯದ ಜತೆ ಆದಾಯ ಗಳಿಸಿ

ಮುತ್ತು (Pearl) ಕೃಷಿ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ (Market) ಯಲ್ಲಿ ಮುತ್ತುಗಳ ಬೆಲೆ ಹೆಚ್ಚುತ್ತಿರುವ ಕಾರಣ ಮುತ್ತು ಕೃಷಿಯತ್ತ ಜನರು ಗಮನ ಹರಿಸುತ್ತಿದ್ದಾರೆ. ನಿಜವಾದ ಮುತ್ತುಗಳ ಬೆಲೆ ಸಾವಿರಾರು ರೂಪಾಯಿ ಇದೆ. ಸಿಂಪಿಯಿಂದ ಅನೇಕ ಅಲಂಕಾರಿಕ ವಸ್ತುಗಳು ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸಲಾಗುತ್ತದೆ. ರೈತರು ಮುತ್ತುಗಳನ್ನು ಹೊರತೆಗೆದ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಂಪಿಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. 
 

click me!