ಪತಿ ಬಿಟ್ಟ, ಸಾಲ ಮೈಮೇಲೆ ಬಂತು.. ಧೈರ್ಯ ಕಳೆದ್ಕೊಳ್ಳದೆ 165 ಕೋಟಿ ಆಸ್ತಿ ಮಾಡಿದ ಮಹಿಳೆ!

By Suvarna News  |  First Published Apr 27, 2024, 3:06 PM IST

ಸಮಸ್ಯೆ ಇದೆ ಅಂತಾ ಬಾಯಲ್ಲಿ ಹೇಳ್ತಾ ಕೈಕಟ್ಟಿ ಕುಳಿತ್ರೆ ಏನೇನೂ ಸಾಧಿಸೋಕೆ ಸಾಧ್ಯ ಇಲ್ಲ. ಕಷ್ಟವನ್ನು ಒಪ್ಪಿಕೊಳ್ಬೇಕು, ಸುಖವನ್ನು ಅಪ್ಪಿಕೊಳ್ಳಲು ಮುಂದೆ ಸಾಗ್ಬೇಕು. ಆಗ್ಲೇ ಯಶಸ್ಸು, ಐಶ್ವರ್ಯ ನಿಮ್ಮದಾಗೋದು. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ.
 


ಸೋಲೆ ಗೆಲುವಿಗೆ ಮೆಟ್ಟಿಲು ಎನ್ನುವ ಮಾತಿದೆ. ಜೀವನದುದ್ದಕ್ಕೂ ಗೆಲ್ಲುತ್ತಲೇ ಹೋದವನು ಒಮ್ಮೆಲೆ ಬಿದ್ದಾಗ ಕಂಗಾಲಾಗುತ್ತಾನೆ. ಅದೇ ಜೀವನ ಪರ್ಯಂತ ಆಗಾಗ ಬೀಳೋನು, ಅದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಮುಂದೊಂದು ದಿನ ಸೋಲಿಲ್ಲದ ಗೆಲುವು ಸಾಧಿಸ್ತಾನೆ.  ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ. ಬಡ ಕುಟುಂಬದಲ್ಲಿ ಹುಟ್ಟಿ, ನಾನಾ ಸಮಸ್ಯೆಗಳನ್ನು ಎದುರಿಸಿ, ಇನ್ನೇನು ಜೀವನ ಸರಿದಾರಿಯಲ್ಲಿ ಹೋಗ್ತಿದೆ ಎನ್ನುವ ಸಮಯದಲ್ಲಿ ಮತ್ತೆ ಕುಸಿದು ಬಿದ್ದ ಮಹಿಳೆ ಈಗ ಎದ್ದು ನಿಂತಿದ್ದಾಳೆ. ಬರೀ ನಿಂತಿಲ್ಲ, ಪ್ರೈವೆಟ್ ಜೆಟ್ ನಲ್ಲಿ ಪ್ರಯಾಣ ಬೆಳೆಸುವಷ್ಟು ಐಷಾರಾಮಿ ಜೀವನ ನಡೆಸುತ್ತಿದ್ದಾಳೆ. ಹಿಂದೆ ಹಾಕಿಕೊಳ್ಳಲು ಒಂದು ಬಟ್ಟೆ ಇರದ ಹುಡುಗಿಗೆ ಈಗ ಇರುವ ಬಟ್ಟೆಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುವಷ್ಟು ಆಸ್ತಿ ಇದೆ. 36 ಲಕ್ಷ ಸಾಲ ಮೈಮೇಲೆ ಹಾಕಿಕೊಂಡು, ವಿಚ್ಛೇದನ ಪಡೆದು, ಎರಡು ಮಕ್ಕಳ ಜವಾಬ್ದಾರಿ ಜೊತೆ ವ್ಯಾಪಾರ ಶುರು ಮಾಡಿದ ಈ ಮಹಿಳೆ ಏಳೇ ವರ್ಷದಲ್ಲಿ 165 ಕೋಟಿ ರೂಪಾಯಿಯ ಒಡತಿಯಾಗಿದ್ದಾಳೆ. ಆಕೆ ಸಾಧನೆ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ.

ನಾವು ಹೇಳ್ತಿರುವ ಮಹಿಳೆ ಹೆಸರು ಲೀಸಾ ಜಾನ್ಸನ್. ಇಂಗ್ಲೆಂಡ್ (England) ನಿವಾಸಿ. ಲೀಸಾ ಜೀವನ ಸುಗಮವಾಗಿರಲಿಲ್ಲ. ಒಂದರ ಹಿಂದೆ ಒಂದರಂತೆ ಸಾಕಷ್ಟು ಪೆಟ್ಟು ತಿಂದಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದ ಲೀಸಾಗೆ ಧರಿಸಲು ಬಟ್ಟೆಗಳಿರುತ್ತಿರಲಿಲ್ಲ. ಶಾಲೆಗೆ ಬೇರೆಯವರು ಹಾಕಿ ಬಿಟ್ಟ ಬಟ್ಟೆ ಹಾಕಿಕೊಂಡು ಹೋಗ್ತಿದ್ದ ಕಾರಣ, ಸಹಪಾಠಿಗಳ ತಮಾಷೆಗೆ ಗುರಿಯಾಗ್ತಿದ್ದರು. ವಿದ್ಯಾಭ್ಯಾಸ ಮುಂದುವರೆಸಲು ಹಣವಿಲ್ಲ ಎನ್ನುವ ಕಾರಣಕ್ಕೆ ಶಾಲೆ ಬಿಟ್ಟ ಲೀಸಾ, ಕೆಲಸಕ್ಕೆ ಸೇರಿಕೊಂಡರು. ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡ್ತಿದ್ದ ಲೀಸಾ, ಬಂದ ಹಣದಲ್ಲಿಯೇ ಕಾನೂನು (Law) ಪದವಿ ಪಡೆದ್ರು. ನಂತ್ರ ಅವರಿಗೆ ಲಂಡನ್‌ನ ಕ್ಯಾನರಿ ವಾರ್ಫ್‌ನಲ್ಲಿ, 62 ಲಕ್ಷ ಪ್ಯಾಕೇಜ್ ಕೆಲಸ ಸಿಕ್ಕಿತು. ಇಷ್ಟು ದಿನ ಪಟ್ಟ ಶ್ರಮಕ್ಕೆ ಫಲ ಸಿಕ್ತು ಎಂದುಕೊಂಡ ಲೀಸಾ ನೆಮ್ಮದಿಯಾಗಿದ್ದರು.

Tap to resize

Latest Videos

ಮೃತ ಪತಿಯ ಆಸ್ತಿಯ ಮೇಲೆ ವಿಧವೆಯಾಗಿರುವ ಪತ್ನಿಗೆ ಸಂಪೂರ್ಣ ಹಕ್ಕು ಇಲ್ಲ; ಹೈಕೋರ್ಟ್

ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಾಗ್ಲೇ ಲೀಸಾಗೆ ಮದುವೆ (Marriage) ಫಿಕ್ಸ್ ಆಯ್ತು. ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ಲೀಸಾ 62 ಲಕ್ಷದ ಸಂಬಂ ಬಿಟ್ಟು 20 ಲಕ್ಷದ ಕೆಲಸಕ್ಕೆ ಸೇರಿಕೊಂಡ್ರು. ಆದ್ರೆ ಅಷ್ಟಕ್ಕೆ ಅವರ ಕಷ್ಟ ಅಂತ್ಯವಾಗ್ಲಿಲ್ಲ. ಮುಂದೆ ದೊಡ್ಡ ಸಂಕಷ್ಟ ಕಾದಿತ್ತು. ಪತಿ ವಿಚ್ಛೇದನ (Divorce) ನೀಡಿದ್ರು. ಮಕ್ಕಳು, ಮನೆ ಜವಾಬ್ದಾರಿ ನೋಡಿಕೊಳ್ಳುವುದು ಲೀಸಾಗೆ ಕಷ್ಟವಾಗಿತ್ತು. ಈ ಮಧ್ಯೆ ಕೆಲಸ ಬಿಟ್ಟ ಲೀಸಾ, 36 ಲಕ್ಷ ರೂಪಾಯಿ ಸಾಲ ಪಡೆದು, ವ್ಯಾಪಾರ (Business) ಶುರು ಮಾಡಿದ್ರು.

ಸಕ್ಸಸ್ ಅಂದ್ರೆ ಇದು! 2 ಕೋಟಿ ಮೌಲ್ಯದ ಚಿನ್ನ ಧರಿಸೋ ಪಾನ್‌ವಾಲಾ!

ಬ್ಯುಸಿನೆಸ್ ಬಗ್ಗೆ ಅಧ್ಯಯನ ಮಾಡಿದ ಲೀಸಾ, ಅಭ್ಯಾಸ ಮಾಡ್ತಲೇ ಜನರಿಗೆ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದ್ರು. ಇದಕ್ಕೆ ಸಂಬಂಧಿಸಿದಂತೆ ರೇಸ್ ಟು ರಿಕರಿಂಗ್ ರೆವಿನ್ಯೂ ಚಾಲೆಂಜ್ ಬ್ಯುಸಿನೆಸ್ ಕಾರ್ಯಕ್ರಮವನ್ನು ಶುರು ಮಾಡಿದ್ರು. ಲೀಸಾ ಕೈ ಕೆಳಗೆ ಕಲಿತ ಅನೇಕರು ಸ್ವಂತ ವ್ಯವಹಾರ ಶುರು ಮಾಡಿ ಯಶಸ್ವಿಯಾದ್ರು. 2017 ರ ಹೊತ್ತಿಗೆ, ಲಿಸಾ 50 ಸಾವಿರ ಹೊಸ ಉದ್ಯಮಿಗಳಿಗೆ ವ್ಯವಹಾರದ ಬಗ್ಗೆ ಸಾಕಷ್ಟು ಕಲಿಸಿದರು. ಲೀಸಾರ ಈ ಕಾರ್ಯಕ್ರಮ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇದ್ರಲ್ಲಿ ಜನರಿಗೆ ವ್ಯಾಪಾರದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಲೀಸಾ, ಬಡತನವನ್ನು ಹೇಗೆ ಗೆಲ್ಲಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದ್ದಾರೆ. 36 ಲಕ್ಷ ರೂಪಾಯಿ ಸಾಲ ತೀರಿಸಿರುವ ಲೀಸಾ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ.

click me!