ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಕಿರಿ ಸೊಸೆ ಈ ವಜ್ರದ ವ್ಯಾಪಾರಿ ಮಗಳು!

By Vinutha Perla  |  First Published Apr 27, 2024, 2:00 PM IST

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಗೌತಮ್ ಅದಾನಿ ಸಹ ಒಬ್ಬರು. ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.ಐಷಾರಾಮಿ ಜೀವನ ನಡೆಸೋ ಬಿಲಿಯನೇರ್‌ನ ಕಿರಿ ಸೊಸೆ ಯಾರು ನಿಮ್ಗೆ ಗೊತ್ತಿದ್ಯಾ?


ಫೋರ್ಬ್ಸ್ ಪ್ರಕಾರ 677520 ಕೋಟಿ ರೂಪಾಯಿಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅದಾನಿ ಗ್ರೂಪ್ ಅಡಿಯಲ್ಲಿ ಹಲವು ಕಂಪನಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. 10 ಅದಾನಿ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಸುಮಾರು 1600000 ಕೋಟಿ ರೂ.ನಷ್ಟಿದೆ.  ಜೀತ್ ಅದಾನಿ, ಗೌತಮ್ ಅದಾನಿಯ ಕಿರಿಯ ಮಗ. ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್‌ನ ಸಿಇಒ ಸ್ಥಾನವನ್ನು ಹೊಂದಿರುವ ಸಹೋದರ ಕರಣ್ ಅದಾನಿಯಂತೆ, ಜೀತ್ ಅದಾನಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜೀತ್ ಅದಾನಿ, ಅದಾನಿ ಸಮೂಹದ ಆರ್ಥಿಕ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. 

ವಿಶ್ವದ ಅತ್ಯಂತ ಶ್ರೀಮಂತ ಕಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಜೀತ್ ಅದಾನಿ ಸಹ ಒಬ್ಬರು. 26 ವರ್ಷದ ಜೀತ್‌ 2023ರಲ್ಲಿ  ಜೈಮಿನ್ ಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಮಾರ್ಚ್ 12, 2023ರಂದು ಅಹಮದಾಬಾದ್‌ನಲ್ಲಿ ಈ ಸರಳ ಸಮಾರಂಭವು ನಡೆಯಿತು. ಸಮಾರಂಭಕ್ಕೆ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.

Tap to resize

Latest Videos

ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ: ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಅಂಬಾನಿಗೆ ನಂ.1, ಅದಾನಿಗೆ ನಂ.2 ಸ್ಥಾನ!

ಗೌತಮ್ ಅದಾನಿ ಸೊಸೆ, ವಜ್ರದ ವ್ಯಾಪಾರಿಯ ಪುತ್ರಿ ಜೈಮಿನ್ ಶಾ
ಅದಾನಿ ಕಿರಿ ಸೊಸೆ ಜೈಮಿನ್ ಶಾ, ದಿನೇಶ್ ಅಂಡ್ ಕೋ-ಪ್ರೈವೇಟ್ ಲಿಮಿಟೆಡ್‌ನ ಮಾಲೀಕರಾಗಿರುವ ವಜ್ರದ ವ್ಯಾಪಾರಿಯ ಪುತ್ರಿ. ದಿನೇಶ್ ಶಾ ಮತ್ತು ಚಿನು ದೋಷಿ ಸಂಸ್ಥೆಯನ್ನು ಪ್ರಾರಂಭಿಸಿದರು. ಕಂಪನಿಯು ಜಿಗರ್ ದೋಷಿ, ಅಮಿತ್ ದೋಷಿ, ಯೋಮೇಶ್ ಷಾ ಮತ್ತು ಜೈಮಿನ್ ಶಾ ನಿರ್ದೇಶಕರನ್ನು ಹೊಂದಿತ್ತು. ದಿನೇಶ್ ಷಾ ಮತ್ತು ಚಿನು ದೋಷಿ 1976 ರಲ್ಲಿ ವಜ್ರ ತಯಾರಿಕಾ ಕಂಪನಿಯನ್ನು ಸ್ಥಾಪಿಸಿದರು, ಇದು ಸೂರತ್ ಮತ್ತು ಮುಂಬೈನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.

ಜೀತ್ ಅದಾನಿ ತಮ್ಮ ಶಿಕ್ಷಣವನ್ನು ಪೆನ್ಸಿಲ್ವೇನಿಯಾದ ಯೂನಿವರ್ಸಿಟಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಲ್ಲಿ ಪೂರ್ಣಗೊಳಿಸಿದರು. 2019 ರಲ್ಲಿ ಪದವಿ ಪಡೆದ ನಂತರ ಅದಾನಿ ಗ್ರೂಪ್‌ನಲ್ಲಿ ತಮ್ಮ ತಂದೆಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅದಾನಿ ಗ್ರೂಪ್ ವೆಬ್‌ಸೈಟ್ ಪ್ರಕಾರ, ಕಂಪನಿಯ ಸರ್ಕಾರಿ ನೀತಿ, ಬಂಡವಾಳ ಮಾರುಕಟ್ಟೆಗಳು ಮತ್ತು ಕಾರ್ಯತಂತ್ರದ ಹಣಕಾಸು ನಿರ್ವಹಣೆಯನ್ನು ಜೀತ್ ನಿರ್ವಹಿಸುತ್ತಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಹೊಸ ಸಾಧನೆ ಮಾಡಿದ ಅದಾನಿ ಕಂಪೆನಿ!

click me!