ಭರ್ತಿ 3,000 ಎಕರೆಯಲ್ಲಿದೆ ಅನಂತ್ ಅಂಬಾನಿ ಪ್ರಾಣಿ ಆಶ್ರಯ ಕೇಂದ್ರ 'ವಂತರಾ', ಇಲ್ಲಿರೋ ಆನೆಗಳ ಸಂಖ್ಯೆ ಇಷ್ಟೊಂದಾ?

By Vinutha Perla  |  First Published Apr 27, 2024, 1:12 PM IST

ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ, ಪ್ರಾಣಿಗಳ ಬಗ್ಗೆ ಹೆಚ್ಚು ಮುತುವರ್ಜಿಯನ್ನು ಹೊಂದಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಬರೋಬ್ಬರಿ 3,000 ಎಕರೆಯಲ್ಲಿ ಅನಂತ್ ಅಂಬಾನಿ ಪ್ರಾಣಿ ಆಶ್ರಯ ಕೇಂದ್ರ 'ವಂತರಾ'ವನ್ನು ನಿರ್ಮಿಸಿದ್ದಾರೆ. ಇಲ್ಲಿರೋ ಆನೆಗಳ ಸಂಖ್ಯೆಯೆಷ್ಟು ಗೊತ್ತಾ?


ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲಿಯನೇರ್ ಮುಕೇಶ್ ಅಂಬಾನಿ ಯಾವಾಗಲೂ ಲಕ್ಸುರಿಯಸ್ ಲೈಫ್‌ಸ್ಟೈಲ್‌ ಫಾಲೋ ಮಾಡುತ್ತಾರೆ. ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಸಹ ಜೀವನಶೈಲಿ ಸಹ ಅತಿ ಐಷಾರಾಮಿತನದಿಂದ ಕೂಡಿದೆ. ಇದರ ಜೊತೆಗೆ ಅಂಬಾನಿ ಮಕ್ಕಳು ಸಮಾಜ ಮುಖಿ ಕಾರ್ಯಗಳಲ್ಲೂ ಮುಂದಿದ್ದಾರೆ. ಯಾವಾಗಲೂ ಪರೋಪಕಾರಿ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ, ಪ್ರಾಣಿಗಳ ಬಗ್ಗೆ ಹೆಚ್ಚು ಮುತುವರ್ಜಿಯನ್ನು ಹೊಂದಿದ್ದಾರೆ. 

ಬಗುಜರಾತ್‌ನ ಜಾಮ್‌ನಗರದಲ್ಲಿ ಬರೋಬ್ಬರಿ 3,000 ಎಕರೆಯಲ್ಲಿ ಅನಂತ್ ಅಂಬಾನಿ ಪ್ರಾಣಿ ಆಶ್ರಯ ಕೇಂದ್ರ 'ವಂತರಾ'ವನ್ನು ನಿರ್ಮಿಸಿದ್ದಾರೆ. ಗಾಯಗೊಂಡ ಪ್ರಾಣಿಗಳಿಗೆ ವಿಶ್ವ ದರ್ಜೆಯ ಸೌಲಭ್ಯವನ್ನು ಸೃಷ್ಟಿಸುವುದು ಅನಂತ್ ಅಂಬಾನಿಯವರ ಉದ್ದೇಶವಾಗಿದೆ. ಇಲ್ಲಿ ಬರೋಬ್ಬರಿ ಇನ್ನೂರು ಆನೆಗಳಿವೆ. ಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಯೋಜನೆಯಾದ 'ವಂತರಾ', ಆನೆಗಳಿಗಾಗಿಯೇ ವಿಶೇಷವಾದ ಅಡುಗೆ ಕೋಣೆಯನ್ನು ಹೊಂದಿದೆ. ಅಲ್ಲಿನ ಬಾಣಸಿಗರು ಆನೆಗಳಿಗೆ ಔಷಧೀಯ ಲಡ್ಡುಗಳನ್ನು ತಯಾರಿಸುತ್ತಾರೆ. ಆನೆಗಳಿಗಾಗಿ ವಿಶೇಷವಾಗೊ ಆಹಾರ ಪದಾರ್ಥಗಳಾದ ಲಡ್ಡು, ಕಲ್ಲಂಗಡಿ ಜ್ಯೂಸ್ ಮತ್ತು ಖಿಚಡಿಯನ್ನು ಬೇಯಿಸಲಾಗುತ್ತದೆ.

Tap to resize

Latest Videos

ಅನಂತ್ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ವೆಚ್ಚ ಭರ್ತಿ 1200 ಕೋಟಿ, ಮದುವೆಗೆ ಖರ್ಚು ಮಾಡ್ತಿರೋದೆಷ್ಟು?

ಆನೆಗಳಿಗಾಗಿ ಪೌಷ್ಟಿಕ ತಜ್ಞರಿಂದ ತಯಾರಾಗುತ್ತೆ ವಿಶೇಷ ಆಹಾರ
250 'ಆನೆ ಲಡ್ಡು'ಗಳನ್ನು ಪ್ರತಿದಿನ ಬೆಲ್ಲ, ಕಪ್ಪು ಉಪ್ಪು ಮತ್ತು ತುಪ್ಪವನ್ನು ಇತರ ಪದಾರ್ಥಗಳೊಂದಿಗೆ ಬಳಸಿ ವಂತಾರದಲ್ಲಿ ತಯಾರಿಸಲಾಗುತ್ತದೆ. ಅವುಗಳು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಪದಾರ್ಥಗಳನ್ನು ಹೊಂದಿರುತ್ತವೆ ಎಂದು ವಂತರಾದ ಬಾಣಸಿಗರು ಹೇಳಿದ್ದಾರೆ. ವಂತಾರವು ಪ್ರಾಣಿಗಳ ಆಹಾರದ ಬಗ್ಗೆ ಕಾಳಜಿ ವಹಿಸುವ ಪೌಷ್ಟಿಕತಜ್ಞರ ತಂಡವನ್ನು ಸಹ ಹೊಂದಿದೆ.

ಕಿಚನ್ ಸೌಲಭ್ಯವು ಕಲ್ಯಾಣ ಟ್ರಸ್ಟ್‌ನಲ್ಲಿ ಪ್ರತಿ ಆನೆಯ ಆಹಾರದ ಅಗತ್ಯತೆಗಳಿಗೆ ಸೂಕ್ತವಾದ ಊಟವನ್ನು ರಚಿಸುವ ತಜ್ಞರನ್ನು ಹೊಂದಿದೆ. ಆನೆಯು ಒಂದು ದಿನದಲ್ಲಿ 130 ಕೆಜಿಯಷ್ಟು ಆಹಾರವನ್ನು ತಿನ್ನುತ್ತದೆ, ಆದ್ದರಿಂದ ಇದು ತಯಾರಿಸುವುದು ಸವಾಲಿನ ಕೆಲಸವಾಗಿದೆ. ವಂತರಾ ಇನ್‌ಸ್ಟಾಗ್ರಾಮ್ ಖಾತೆಯು ಹೆಣ್ಣು ಆನೆ ಲೀಲಾವಲಿಯ ಊಟದ ಮಾಹಿತಿಯ ಮೆನುವನ್ನು ಹಂಚಿಕೊಂಡಿದೆ. ಲೀಲಾವತಿಯವರ ಉಪಹಾರದಲ್ಲಿ ಒಂದು ರಾಗಿ ಲಡ್ಡು, 10 ಕೆಜಿ ಖಿಚಡಿ, ಒಂದು ರೊಟ್ಟಿ ಮತ್ತು 1 ಕೆಜಿ ಉಂಡೆಗಳು ಸೇರಿವೆ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಗ್ರ್ಯಾಂಡ್‌ ವೆಡ್ಡಿಂಗ್ ನಡೀತಿರೋ ಸ್ಟೋಕ್‌ಪಾರ್ಕ್‌ ಹೇಗಿದೆ?

ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಮಗ, ರಾಧಿಕಾ ಮರ್ಚೆಂಟ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿಸೆಂಬರ್ 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಂಪತಿಗಳು ಜುಲೈನಲ್ಲಿ ಮದುವೆಯಾಗಲಿದ್ದಾರೆ.

click me!