ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?

By Web Desk  |  First Published Nov 10, 2019, 7:50 AM IST

ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಾಗದ ಹಕ್ಕು ಪಡೆದಿದ್ದ ನಿರ್ಮೋಹಿ, ಸುನ್ನಿ ವಕ್ಫ್ ಮಂಡಳಿಗೆ ಸುಪ್ರೀಂ ಆಘಾತ | ವಿವಾದಿತ ಜಾಗದಲ್ಲಿ ಮೂರನೇ ಒಂದು ಭಾಗ ಪಡೆದಿದ್ದ ರಾಮಲಲ್ಲಾಗೀಗ ಪೂರ್ಣ ಜಮೀನು|


ಬೆಂಗಳೂರು[ನ.10]: ಶತಮಾನಗಳ ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಕೊನೆಗೂ ಇತಿಶ್ರೀ ಹಾಡಿದೆ. ಇದೇ ಪ್ರಕರಣ ಕುರಿತು ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶ ವಜಾಗೊಳಿಸಿರುವ ಸುಪ್ರೀಂಕೋರ್ಟ್, ಪ್ರಕರಣ ಕುರಿತು ಸಂಪೂರ್ಣ ಭಿನ್ನ ತೀರ್ಪುನೀಡಿದೆ. ಹಾಗಿದ್ದರೆ, ಈ ಪ್ರಕರಣದ ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಏನೇನು ಸಿಕ್ಕಿದೆ, ಏನೇನು ಕೈತಪ್ಪಿದೆ ಎಂಬುದರ ಮಾಹಿತಿ ಇಲ್ಲಿದೆ.

1. ರಾಮ್ ಲಲ್ಲಾ ವಿರಾಜ್‌ಮಾನ್‌

Latest Videos

undefined

ವಿಶ್ವ ಹಿಂದೂ ಪರಿಷತ್ ಸದಸ್ಯರಲ್ಲೊಬ್ಬರಾದ ತ್ರಿಲೋಕ್ ನಾಥ್ ಪಾಂಡೆ ಎಂಬುವರು ವಿವಾದಿತ ಬಾಬ್ರಿ ಮಸೀದಿ ಇರುವ ಜಮೀನು ರಾಮಲಲ್ಲಾಗೆ ಸೇರಿದ್ದು ಎಂದು ಪ್ರತಿಪಾದಿಸಿದರು. ಏತನ್ಮಧ್ಯೆ, ಅಲಹಾಬಾದ್‌ನ ನಿವೃತ್ತ ಜಡ್ಜ್ ದೇವಕಿ ನಂದನ್ ಅಗರ್‌ವಾಲ್ ಎಂಬುವರು 1989 ರಲ್ಲಿ ರಾಮಲಲ್ಲಾ ಮತ್ತು ರಾಮ ಜನ್ಮಭೂಮಿ ಹೋರಾಟವನ್ನುಮುಂದುವರಿಸಿದರು. 2002 ರಲ್ಲಿ ಅಗರ್‌ವಾಲ್ ನಿಧನದ ನಂತರ ಪಾಂಡೆ ಹೋರಾಟದ ನೇತೃತ್ವ ವಹಿಸಿಕೊಂಡರು. ಅಲಹಾಬಾದ್‌ ಹೈಕೋರ್ಟ್ ರಾಮ್‌ಲಲ್ಲಾಗೆ ವಿವಾದಿತ ಜಾಗದ ಪೈಕಿ ಮೂರನೇ ಒಂದು ಭಾಗನೀಡಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್‌ಪೂರ್ಣ ವಿವಾದಿತ ಜಾಗವನ್ನು ರಾಮ್‌ಲಲ್ಲಾಗೆ ನೀಡಿದೆ.

ಫೇಸ್‌ಬುಕ್, ಟ್ವಿಟರ್‌ ಮೇಲೆ ಇನ್ನೂ ಕೆಲ ದಿನ ಕಣ್ಣು..!

2. ನಿರ್ಮೋಹಿ ಅಖಾಡ

2010 ರಲ್ಲಿ ಅಲಹಾಬಾದ್ ಹೈ ಕೋರ್ಟ್‌ತೀರ್ಪಿನಲ್ಲಿ ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಅದರಲ್ಲಿ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಿತ್ತು. ಆದರೆ ಶನಿವಾರ ಸುಪ್ರೀಂ ಕೋರ್ಟ್ ನಿರ್ಮೋಹಿ ಅಖಾಡದ ಅರ್ಜಿಯನ್ನು ತಳ್ಳಿ ಹಾಕಿದೆ. ಯಾವುದೇ ಆಸ್ತಿ ಮೇಲೆ ಹಕ್ಕು ಚಲಾಯಿಸಬೇಕಾದರೆ ಆರು ವರ್ಷದ ಒಳಗಾಗಿ ತಕರಾರು ಅರ್ಜಿ ಸಲ್ಲಿಸಬೇಕು. ಆದರೆ 1949 ರಲ್ಲಿ ಪ್ರಕರಣ ಸಂಬಂಧ ಸಲ್ಲಿಸಲಾದ ಅರ್ಜಿಯನ್ನುನ್ಯಾಯಾಲಯ ವಜಾ ಮಾಡಿದ 10 ವರ್ಷದ ಬಳಿಕ, ಇಡೀ ಆಸ್ತಿ ನನಗೆ ಸೇರಿದ್ದು ಎಂದು ನಿರ್ಮೋಹಿ ಅಖಾಡ ವಾದಿಸಿತ್ತು. ಹಾಗಾಗಿ ನಿರ್ಮೋಹಿ ಅಖಾಡದ ವಾದ, ಪ್ರಕರಣದ ವ್ಯಾಪ್ತಿಗೆ ಮೀರಿದ್ದು ಎಂದು ಅವರ ಅರ್ಜಿಯನ್ನು ತಳ್ಳಿ ಹಾಕಿದೆ.

3. ಸುನ್ನಿ ವಕ್ಫ್‌ಬೋರ್ಡ್‌

ಪ್ರಕರಣದಲ್ಲಿ ಮುಸ್ಲಿಂ ಪರ ಅರ್ಜಿದಾರರಾದ ಉತ್ತರಪ್ರದೇಶ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿ ನ್ಯಾಯಬದ್ದವಾಗಿದ್ದರೂ, ತನ್ನ ವಾದಕ್ಕೆ ಅಗತ್ಯವಾದ ಸಾಕ್ಷ್ಯವನ್ನು ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಲು ವಿಫಲವಾಗಿದ್ದರಿಂದ ವಿವಾದಿತ ಭೂಮಿ ರಾಮ್ ಲಲ್ಲಾ ಪಾಲಾಗಿದೆ. ಆದರೆ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲೇ  5 ಎಕರೆ ಸೂಕ್ತ ಹಾಗೂ ಪ್ರಮುಖ ಸ್ಥಳ ನೀಡಬೇಕು ಎಂದು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 1857ಕ್ಕೆ ಮುಂಚಿತವಾಗಿ ಒಳಾಂಗಣ ತಮ್ಮ ಸ್ವಾಧೀನದಲ್ಲಿತ್ತು ಎನ್ನುವುದನ್ನು ಸಾಬೀತು ಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ. 1949ರ ಡಿಸೆಂಬರ್ 22 ಹಾಗೂ 23 ರಂದು ಮಸೀದಿಯನ್ನು ಅಪವಿತ್ರಗೊಳಿಸಿದ ನಂತರ ಮುಸ್ಲಿಮರನ್ನು ಹೊರ ಹಾಕಲಾಯಿತು, ಅದು ಅಂತಿಮವಾಗಿ 6 ಡಿಸೆಂಬರ್ 1992 ರಂದು ಕೆಡವಲಾಯ್ತು. ಹಾಗಾಗಿ ಮುಸ್ಲಿಮರಿಗೆ ಭೂಮಿ ಹಂಚಿಕೆ ಮಾಡುವುದು ಅವಶ್ಯಕವಾಗಿದೆ ಎಂದು ಸುಪ್ರೀಂ ಹೇಳಿದೆ.

ಕೂಡಿ ಬಾಳುವ ಸಂದೇಶ: ದೇಶಕ್ಕೆ ಮೋದಿ ಅಮೂಲ್ಯ ಉಪದೇಶ!

4. ಶಿಯಾ ವಕ್ಫ್‌ಬೋರ್ಡ್‌

ನಿರ್ಮೋಹಿ ಅಖಾಡದಂತೆ, ಶಿಯಾವಕ್ಫ್ ಬೋರ್ಡ್ ಕೂಡ ತನ್ನತಕರಾರು ದಾವೆಯನ್ನು ಸಲ್ಲಿಸುವಲ್ಲಿ ವಿಳಂಬ ಮಾಡಿದ್ದರಿಂದ, ಶಿಯಾವಕ್ಫ್ ಮಂಡಳಿಯ ಅರ್ಜಿಯನ್ನು ಸಪ್ರೀಂ ಕೋರ್ಟ್ ವಜಾ ಮಾಡಿದೆ. 1949 ಮಾರ್ಚ್ 30 ರ ಫೈಜಾಬಾದ್‌ ಸಿವಿಲ್ ನ್ಯಾಯಾಲಯದ ತೀರ್ಪಿನ ಬಳಿಕ, ತಕಾರರು ಅರ್ಜಿ ಸಲ್ಲಿಸುವಲ್ಲಿ ಉತ್ತರ ಪ್ರದೇಶ ಶಿಯಾ ವಕ್ಫ್‌ಬೋರ್ಡ್ 24964  ದಿನಗಳ ವಿಳಂಬಮಾಡಿದೆ. ಆದರೆ ಅದಕ್ಕೆ ಸೂಕ್ತ ಕಾರಣಗಳನ್ನು ವಿವರಿಸಲಾಗಿಲ್ಲಎಂದು ಸುಪ್ರೀಂ ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನುಅಮಾನ್ಯಗೊಳಿಸಿದೆ.

5. ಫಾರೂಖ್‌ ಅಹಮದ್‌

ಪ್ರಕರಣದಲ್ಲಿ ಇವರ ತಂದೆ ಮೂಲ ಅರ್ಜಿದಾರರಾಗಿದ್ದು, 1949 ರಲ್ಲಿ ಬಾಬ್ರಿ ಮಸೀದಿಯ ಒಳಗಡೆ ಅಕ್ರಮವಾಗಿ ರಾಮ ಹಾಗೂ ಇತರವಿಗ್ರಹಗಳನ್ನು ಇಡಲಾಗಿತ್ತು ಎಂದು ವಾದಿಸಿದ್ದರು. ಈಅರ್ಜಿಯಲ್ಲಿ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನೇ ಎತ್ತಿ ಹಿಡಿದಿದೆ. ಮಸೀದಿಯಒಳಗೆ ವಿಗ್ರಹ ಇಡಲಾಗಿದೆ ಎನ್ನುವ ವಾದವನ್ನುಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿಗ್ಬತ್ ಖಾನ್ ಹಾಗೂ ಧರಮ್‌ವೀರ ಶರ್ಮಾ ಒಪ್ಪಿಕೊಂಡಿದ್ದರು. ಆದರೆ ಮತ್ತೊಬ್ಬ ನ್ಯಾಯಮೂರ್ತಿಸುಧೀರ್ ಅಗರ್‌ವಾಲ್1949 ಡಿ. 22 ಕ್ಕೂ ಮುನ್ನ ಅಲ್ಲಿವಿಗ್ರಹಗಳಿತ್ತು ಎನ್ನುವ ವಾದವನ್ನು ಪುರಸ್ಕರಿಸಿದ್ದರು. ಈವಿಚಾರದಲ್ಲಿ ಸುಪ್ರೀಂ, ಅಲಹಾಬಾದ್ ಹೈ ಕೋರ್ಟ್‌ತೀರ್ಪನ್ನೇ ಮಾನ್ಯ ಮಾಡಿದೆ. 2014 ಡಿಸೆಂಬರ್ ರಲ್ಲಿಅಹ್ಮದ್ ಸಾವಿನ ಬಳಿಕ ಅವರ ಪುತ್ರ ಮೊಹಮ್ಮದ್‌ ಉಮಾ ಪ್ರಕರಣವನ್ನು ಮುಂದುವರಿಸಿದ್ದರು.

ಅಯೋಧ್ಯೆ ಸುಪ್ರೀಂ ತೀರ್ಪು ಸ್ವಾಗತಾರ್ಹ: ಹಶೀಮ್ ಅನ್ಸಾರಿ ಪುತ್ರ!

ಮಂದಿರ ನಿರ್ಮಾಣಕ್ಕೆ ಪಕ್ಷ ಬದ್ಧ

ಸುಪ್ರೀಂ ತೀರ್ಪಿನ ಬಗ್ಗೆ ಮಾತನಾಡಿದ  ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು, ಸುಪ್ರೀಂಕೋರ್ಟ್‌ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಕ್ಷ ಬದ್ಧವಾಗಿದೆ. ಸುಪ್ರೀಂ ಪಂಚಪೀಠದ ತೀರ್ಪು ಸಮಾಜದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವ ಅಂತರ್ಗತ ದೃಷ್ಟಿಕೋನಗಳಿಗೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಅದ್ದೂರಿ ಮಂದಿರ ನಿರ್ಮಾಣ

ಅಯೋಧ್ಯೆ ಭೂ ವಿವಾದಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಾರ್ಹ. ಇನ್ನು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗುವುದು. ಮುಸ್ಲಿಮರಿಗೆ 5 ಎಕರೆ ಜಾ ಗನೀಡಿದ್ದನ್ನು ನಾವು ಮೆಚ್ಚುತ್ತೇವೆ ಎಂದು ಬಾಬಾ ರಾಮದೇವ್ ಯೋಗಗುರು ವರು ತಿಳಿಸಿದ್ದಾರೆ. 

ರಾಮಮಂದಿರಕ್ಕಾಗಿ ಕಾದಿರುವೆ

ಸುಪ್ರೀಂ ತೀರ್ಪು ಯಾರ ಸೋಲು ಅಲ್ಲ, ಗೆಲುವೂ ಅಲ್ಲ. ನಾನು ಇನ್ನುಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಎದುರು ನೋಡುತ್ತಿದ್ದೇನೆ. ಶಾಂತಿ ಕಾಪಾಡುವಲ್ಲಿ ಸರ್ಕಾರ, ಪ್ರತಿಯೊಬ್ಬರ ಕಾರ್ಯ ಶ್ಲಾಘನೀಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟಿದ್ದಾರೆ. 

ಸುವರ್ಣಾಕ್ಷರಗಳಲ್ಲಿ ಬರೆಯಿರಿ

ಹಲವು ದಶಕಗಳ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಈಗ ತಿಲಾಂಜಲಿ ಹಾಡಿದೆ. ಕೋರ್ಟ್ ನೀಡಿರುವ ತೀರ್ಪು ‘ಸುವರ್ಣಾಕ್ಷರಗಳಲ್ಲಿ ಬರೆದಿಡುವದಿನ’ವಾಗಿದೆ. ಈ ಮೂಲಕ ರಾಮಜನ್ಮಭೂಮಿ ವಿವಾದ ಇತ್ಯರ್ಥವಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ. 

ಇಡೀ ಭಾರತೀಯತೆಯ ಗೆಲುವು

ಇದು ಯಾರು ಸೋಲೂ ಅಲ್ಲ, ಗೆಲುವೂ ಅಲ್ಲ. ಇಡೀ ಭಾರತೀಯತೆಯ ಗೆಲುವು. ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ನೀಡಿರುವ ತೀರ್ಪು ಐತಿಹಾಸಿಕವಾದದ್ದು. ಭಾರತದ ಏಕತೆಯನ್ನು ಎತ್ತಿ ತೋರಿಸುವ ಹಾಗೂ ಭಾರತೀಯತೆಯ ನ್ಯಾಯ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರು ತಿಳಿಸಿದ್ದಾರೆ. 

click me!