
ಬೆಂಗಳೂರು (ನ.18): ಉದ್ಯಾನನಗರಿ ಬೆಂಗಳೂರು ಅಂತಿಂಥ ಸಿಟಿಯಲ್ಲ. ಇದು ಸ್ಟಾರ್ಟ್‌ಅಪ್‌ಗಳ ರಾಜಧಾನಿ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ತೀರಾ ವಿಶೇಷವಾದ ಕಲ್ಪನೆಯೊಂದಿಗೆ ಬರುವ ಉದ್ಯಮಿಗೆ ಬೆಂಗಳೂರು ಮುಕ್ತಕೈಗಳಿಂದ ಅಪ್ಪಿಕೊಂಡಿದೆ. ಬೆಂಗಳೂರಿನ ಸ್ಟಾರ್ಟ್‌ಅಪ್ ಕಲ್ಪನೆ ಎಲ್ಲಿಯವರೆಗೆ ಹೋಗಿ ಮುಟ್ಟಿದೆ ಎಂದರೆ, ಪದವಿ ಓದಿರುವ ಆಟೋಡ್ರೈವರ್ ಒಬ್ಬ ಅತ್ಯಂತ ವಿಶಿಷ್ಟವಾಗಿ ಪ್ರಯಾಣಿಕರ ಎದುರು ತಮ್ಮ ಸ್ಟಾರ್ಟ್‌ಅಪ್ ಕಲ್ಪನೆಯನ್ನು ತಿಳಿಸಿದ್ದಾರೆ. ಪದವೀಧರನಾಗಿರುವ ಸ್ಯಾಮ್ಯುಯೆಲ್ ಕ್ರಿಸ್ಟಿ, ದಿನನಿತ್ಯದ ಜೀವನಕ್ಕಾಗಿ ಆಟೋ ಓಡಿಸುತ್ತಾರೆ. ಹಾಗಂತ ಅದು ಅವರ ಇಷ್ಟದ ಕೆಲಸವಲ್ಲ. ಅವರ ಆಟೋದಲ್ಲಿರುವ ಅಪರೂಪದ ಪೋಸ್ಟರ್‌ಅನ್ನು ರೆಡಿಟ್ ಯೂಸರ್ ಒಬ್ಬರು ಪೋಸ್ಟ್ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಡ್ರೈವರ್ ಸೀಟ್‌ನ ಹಿಂಭಾಗದಲ್ಲಿ ಈ ಪೋಸ್ಟರ್‌ಅನ್ನು ಅಂಟಿಸಲಾಗಿದೆ. 'ಪ್ರಯಾಣಿಕರೇ ಹಾಯ್. ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನೊಬ್ಬ ಪದವೀಧರ. ನನ್ನ ಸ್ಟಾರ್‌ಅಪ್ ಬ್ಯುಸಿನೆಸ್ ಐಡಿಯಾಗೆ ಫಂಡ್ ರೈಸ್ ಮಾಡುವ ಉದ್ದೇಶ ಹೊಂದಿದ್ದೇನೆ. ನೀವು ಆಸಕ್ತಿ ಹೊಂದಿದ್ದರೆ, ನನ್ನೊಂದಿಗೆ ಮಾತನಾಡಬಹುದು' ಎಂದು ಬರೆಯಲಾಗಿದೆ.
ಪ್ರತಿಕ್ರಿಯೆ ಹೇಗಿದೆ?: ಆಟೋ ಡ್ರೈವರ್‌ನಿಂದ ವಿಶಿಷ್ಟವಾದ ನಿಧಿಸಂಗ್ರಹಣೆ ವಿಧಾನವು ರೆಡ್ಡಿಟ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಂತಹ ಉದ್ಯಮಶೀಲ ಪ್ರಯತ್ನಗಳ ಬಗ್ಗೆ ಬೆಂಗಳೂರಿನ ಮಿಶ್ರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಸ್ಟಾರ್ಟ್‌ಅಪ್ ಏನೇ ಇರಲಿ, ಆಟೋ ಡ್ರೈವರ್‌ನ ಪ್ರಯತ್ನವನ್ನು ಯೂಸರ್‌ಗಳು ಶ್ಲಾಘನೆ ಮಾಡಿದ್ದಾರೆ. 'ನನ್ನ ಪ್ರಕಾರ ಇದೊಂದಿಗೆ ಅತ್ಯುತ್ತಮ ಪ್ರಯತ್ನ.ಅವರು ಏನಾದರೂ ಒಳ್ಳೆಯದ್ದನ್ನು ಈಗ ಮಾಡುತ್ತಿರಬಹುದು. ಅವರು ಯಶಸ್ವಿಯಾಗಲಿ ಎನ್ನುವ ನಂಬಿಕೆ ನನಗಿದೆ' ಎಂದು ಬರೆದಿದ್ದಾರೆ.
ಇನ್ನೊಬ್ಬ ಯೂಸರ್, ಆಟೋಡ್ರೈವರ್‌ಗೆ ಸಹಾಯ ಮಾಡುವ ಕಾಮೆಂಟ್ ಮಾಡಿದ್ದಾರೆ. 'ಅವರು ಆಸಕ್ತಿ ಹೊಂದಿದ್ದರೆ, ನಾನು ಅವರಿಗೆ ಒಂದು ಬೆಲೆಗೆ ಸಹಾಯ ಮಾಡುವೆ' ಎಂದಿದ್ದಾರೆ.
ಅನೇಕರು ಅವರಿಗೆ ಯಶಸ್ಸನ್ನು ಹಾರೈಸಿದರೆ, ಕೆಲವರು ಇದಕ್ಕೆ ಸಂದೇಹ ವ್ಯಕ್ತಪಡಿಸಿದ್ದಾರೆ. "ದೇವರು ಅವನನ್ನು ಆಶೀರ್ವದಿಸಲಿ" ಎಂದು ಒಂದು ಕಾಮೆಂಟ್ ಓದಿದರೆ, ಇನ್ನೊಂದು ಎಚ್ಚರಿಕೆಯ ಕಾಮೆಂಟ್ ಕೂಡ ಬಂದಿದೆ. "ಇದೊಂದು ಹಗರಣವೂ ಆಗಿರಬಹುದು, ಆಟೋ ಚಾಲಕರು ಬೆಂಗಳೂರಿನಲ್ಲಿ ದೊಡ್ಡ ವಂಚಕರು..' ಬರೆದಿದ್ದಾರೆ.
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಗಿಂತ ಈಗ ಇವರೇ ಶ್ರೀಮಂತರು, 38,500 ಕೋಟಿ ಮೌಲ್ಯ!
ನವೀನ ಆಲೋಚನೆಗಳಿಂದಲೇ ಉತ್ಸಾಹಿತವಾಗಿರುವ ನಗರದಲ್ಲಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾಷಾ ಚರ್ಚೆಗಳಿಗೆ ಸೃಜನಶೀಲ ಪರಿಹಾರಕ್ಕಾಗಿ ಇನ್ನೊಬ್ಬ ಆಟೋ ಚಾಲಕ ಇತ್ತೀಚೆಗೆ ಗಮನ ಸೆಳೆದರು. ತನ್ನ ಆಟೋದಲ್ಲಿ, ಚಾಲಕನೊಬ್ಬ "ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ" ಎಂಬ ಕರಪತ್ರವನ್ನು ಪ್ರದರ್ಶಿಸಿದ್ದು ವೈರಲ್ ಆಗಿತ್ತು. ಅದು ಇಂಗ್ಲಿಷ್‌ಗೆ ಅನುವಾದಿಸಲಾದ ಸಾಮಾನ್ಯ ಕನ್ನಡ ವಾಕ್ಯಗಳನ್ನು ಒಳಗೊಂಡಿತ್ತು. ಅನ್ಯಭಾಷಿಕರು ಪ್ರಯಾಣಿಸುವಾಗ ಸ್ಥಳೀಯ ಭಾಷೆಯನ್ನು ಕಲಿಯಲು ಸಹಾಯ ಮಾಡುವುದು ಇದರ ಉದ್ದೇಶವಾಗಿತ್ತು.
Bengaluru:'ಜನಗಣಮನ..' ಹಾಡುವ ಮೂಲಕ ಪ್ರತಿದಿನದ ಕೆಲಸ ಆರಂಭಿಸುವ ರಾಮೇಶ್ವರಂ ಕೆಫೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ