ಬೆಂಗಳೂರಿನ ಶಾಲೆ ಫೀ ಪ್ಯಾಂಪ್ಲೆಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇಂದು ಬೆಂಗಳೂರಿನಲ್ಲಿ ಮಗುವನ್ನು ಶಾಲೆಗೆ ಕಳಿಸೋದೇ ದೊಡ್ಡ ಕಷ್ಟವಾಗಿದೆ. ತಂದೆ-ತಾಯಿ ಇಬ್ಬರೂ ದುಡಿಯುತ್ತಿದ್ದರೆ, ಆ ಮಗುವನ್ನು ಡೇ ಕೇರ್‌ಗೋ ಅಥವಾ ಶಾಲೆಗೆ ಕಳಿಸಲು ಒದ್ದಾಡುತ್ತಿದ್ದಾರೆ. ಮನೆ ಬಾಡಿಗೆಗಿಂತ ಜಾಸ್ತಿ ಶಾಲೆ ಫೀ ಕಟ್ಟಬೇಕಾಗುತ್ತದೆ. ಬೆಂಗಳೂರಿನ ಶಾಲೆಯಲ್ಲಿನ ಫೀ ರಿಸಿಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಸ್ಕೂಲ್ ಫೀ ಯಾವ ತರಗತಿಗೆ ಎಷ್ಟು ಫೀ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನರ್ಸರಿಗೆ ಟ್ಯೂಷನ್‌ಫೀ, ಅಡ್ಮಿಷನ್‌ಫೀ, ಇನ್‌ಸ್ಟಿಟ್ಯೂಶನ್ ಫೀ, ಕಾಶನ್ ಡೆಪೋಸಿಟ್ ಎಲ್ಲವೂ ಸೇರಿ 2,51,000 ರೂಪಾಯಿ ಆಗಿದೆ.
ಎಲ್‌ಜೆಜಿ, ಯುಕೆಜಿಗೋಸ್ಕರ 2,72,400 ರೂಪಾಯಿ ಆಗುವುದು.
ಇನ್ನು 1ರಿಂದ 2ನೇ ತರಗತಿವರೆಗೆ 2,91,000 ರೂಪಾಯಿ ಆಗುವುದು.
ಮೂರನೇ ತರಗತಿಯಿಂದ ಐದನೇ ತರಗತಿವರೆಗೆ 3,22,550 ರೂಪಾಯಿ ಆಗುವುದು.
ಬೆಂಗಳೂರಿನಲ್ಲಿ ಎಷ್ಟೆಲ್ಲ ಖರ್ಚು ಇರುವುದು?
ಸಾಮಾನ್ಯವಾಗಿ ಒಂದು ದಂಪತಿ ತಿಂಗಳಿಗೆ ಸಾಮಾನ್ಯವಾಗಿ ಒಂದೂವರೆ ಲಕ್ಷ ರೂಪಾಯಿ ದುಡಿಯುತ್ತಿರಬಹುದು. ಮನೆಗೆ ರೇಶನ್, ಅನಾರೋಗ್ಯ, ಮನೆ ಬಾಡಿಗೆ, ಫೋನ್ ಬಿಲ್, ಕರೆಂಟ್ ಬಿಲ್, ನೀರಿನ ಬಿಲ್ ಎಂದು ಒಂದಷ್ಟು ಖರ್ಚುಗಳು ಇರುತ್ತವೆ. ಇದರ ಮಧ್ಯೆ ಏನೇನೋ ಖರ್ಚುಗಳು ಇರುತ್ತವೆ. ಇದರ ಮಧ್ಯೆ ಸೇವಿಂಗ್ಸ್ ಮಾಡೋದು ಕಷ್ಟ. ಅಂಥಹದರಲ್ಲಿ ಮಗುವಿನ ಆಟ ಪಾಠಕ್ಕೆ ಖರ್ಚು ಮಾಡಬೇಕಾಗುವುದು.
ಮಗು ನೋಡಿಕೊಳ್ಳೋದು ಸವಾಲು!
ಒಂದು ಮನೆಯಲ್ಲಿ ದಂಪತಿ ಮಾತ್ರ ಇದ್ದರೆ ಆ ಮಗು ನೋಡಿಕೊಳ್ಳೋದು ಕೂಡ ಕಷ್ಟ. ಸ್ಕೂಲ್ ಮುಗಿದ ನಂತರ ಆ ಮಗುವನ್ನು ಮನೆಯಲ್ಲಿ ಬಿಡೋದು ಕೂಡ ಸುಲಭ ಅಲ್ಲ, ಹೀಗಾಗಿ ಡೇ ಕೇರ್‌ಗೆ ಬಿಡಬೇಕಾಗುವುದು ಅಥವಾ ಆ ಮಗುವಿನ ಆರೈಕೆಗೆಂದು ಕೆಲಸದವರನ್ನು ಕೂಡ ನೇಮಕ ಮಾಡಿಕೊಳ್ಳಬೇಕಾಗಿ ಬರುವುದು.
ಉದ್ಯೋಗದಲ್ಲಿ ಸಮಸ್ಯೆ!
ಇಂದು ನಗರಗಳಲ್ಲಿ ದರ ಏರಿಕೆಯಾಗುತ್ತಿದ್ದರೂ ಕೂಡ, ಸಂಬಳ ಮಾತ್ರ ಜಾಸ್ತಿ ಆಗ್ತಿಲ್ಲ. ತರಕಾರಿ, ಹಾಲು, ಬಟ್ಟೆ ಹೀಗೆ ಎಲ್ಲ ದರವೂ ಕೂಡ ಹೆಚ್ಚಾಗುತ್ತಿದೆ. ಆದರೆ ಉದ್ಯೋಗ ಸಿಗೋದು ಕಷ್ಟ ಆಗಿದೆ. ಇನ್ನು ಕಾಸ್ಟ್ ಕಟಿಂಗ್ ಕೂಡ ನಡೆಯುತ್ತಿದ್ದು, ಈ ಸಮಸ್ಯೆ ಕೂಡ ಎದುರಿಸಬೇಕಾಗಿದೆ. ಇನ್ನು ಕೆಲ ಕಂಪೆನಿಗಳು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ.
7ನೇ ತರಗತಿ ಕೇಂದ್ರೀಯ ಪಠ್ಯದಲ್ಲಿ ರಾಣಿ ಅಬ್ಬಕ್ಕನ ಕಥೆ!
ಸಾಫ್ಟ್‌ವೇರ್ ಉದ್ಯೋಗಿ ಹೇಳಿದ್ದೇನು?
ಸಾಫ್ಟ್‌ವೇರ್ ಸಂಸ್ಥೆಯ ಸೆಯೋನ್‌ನ ನಿರ್ದೇಶಕ ಹರೀಶ್ ಎಎನ್ ಎನ್ನುವವರು, ಹಾಲಿನ ದರ ಲೀಟರ್‌ಗೆ 4 ರೂ. ಹೆಚ್ಚಾಗಿದೆ, ನಂದಿನಿ ಹಾಲಿನ ಬೆಲೆ 1 ಲೀಟರ್‌ಗೆ 47 ರೂಪಾಯಿ ತಲುಪಿದೆ. ಡೀಸೆಲ್ ಬೆಲೆ 2 ರೂಪಾಯಿ ಏರಿಕೆಯಾಗಿದ್ದು, ಒಂದು ಲೀಟರ್‌ಗೆ 91.02 ರೂಪಾಯಿ ಆಗಿದೆ. ಮೆಟ್ರೋ ಟಿಕೆಟ್ ದರವು 60 ರಿಂದ 90 ರೂಪಾಯಿಗೆ ಏರಿಕೆಯಾಗಿದೆ. ವಿದ್ಯುತ್, ಕಸ ತೆರಿಗೆ, ಕಾಫಿ ಪುಡಿ ಮುಂತಾದ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಬೆಂಗಳೂರಿನ ವೈಟ್‌ಫೀಲ್ಡ್, ಕೋರಮಂಗಲದಲ್ಲಿ 2 ಬಿಎಚ್‌ಕೆ ಮನೆಗೆ ತಿಂಗಳಿಗೆ ಸುಮಾರು 40,000 ರೂಪಾಯಿ ಬಾಡಿಗೆ ಕೊಡಬೇಕು. ಪಿಜಿ, ಸಿಂಗಲ್ ರೂಮ್ ದರ ಕೂಡ ಹೆಚ್ಚಾಗಿದೆ. ಇನ್ನು ಟ್ರಾಫಿಕ್ ಬಗ್ಗೆ ಮಾತ್ರ ಮಾತಾಡೋದು ಬೇಡ" ಎಂದು ಹೇಳಿದ್ದಾರೆ.
ಮುಂಬೈ, ಹೈದರಾಬಾದ್ ಮುಂತಾದ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದ ತಿಂಗಳ ಖರ್ಚು ಜಾಸ್ತಿ ಇದೆ ಎಂದು ಇತ್ತೀಚೆಗೆ ವರದಿಯೊಂದು ಹೇಳಿತ್ತು. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬದುಕೋದು ಕಷ್ಟ ಆಗಿದೆ.