ಮೆಟ್ರೋ ದರ ಏರಿಕೆ, ಫ್ಲಾಟ್‌ಫಾರ್ಮ್ ಒಳಗಿನ ಅಂಗಡಿ ಮುಚ್ಚಲು ಚಿಂತನೆ!

Published : Apr 26, 2025, 11:46 AM ISTUpdated : Apr 26, 2025, 12:05 PM IST
ಮೆಟ್ರೋ ದರ ಏರಿಕೆ, ಫ್ಲಾಟ್‌ಫಾರ್ಮ್ ಒಳಗಿನ ಅಂಗಡಿ ಮುಚ್ಚಲು ಚಿಂತನೆ!

ಸಾರಾಂಶ

ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರ ಇಳಿಕೆಯಾಗಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಆರ್ಥಿಕ ಹೊಡೆತ ಬಿದ್ದಿದೆ. ಮಾರಾಟ ಕುಸಿತದಿಂದ ಅಂಗಡಿಗಳು ಮುಚ್ಚುತ್ತಿವೆ. ಬಾಡಿಗೆ ಹೊರೆಯೂ ಹೆಚ್ಚಿದ್ದು, ವ್ಯಾಪಾರಿಗಳಿಗೆ ಬಿಕ್ಕಟ್ಟು ತಂದೊಡ್ಡಿದೆ. ಬಿಎಂಆರ್‌ಸಿಎಲ್ ಪರಿಸ್ಥಿತಿ ಸ್ಥಿರವಾಗುತ್ತಿದೆ ಎಂದಿದ್ದರೂ, ವ್ಯಾಪಾರಿಗಳಿಗೆ ದೀರ್ಘಕಾಲೀನ ಪರಿಹಾರ ಅಗತ್ಯವಾಗಿದೆ.

ಬೆಂಗಳೂರು ಮೆಟ್ರೋ ಸೇವೆಯ ದರ ಏರಿಕೆಯ ಪರಿಣಾಮಗಳು ಈಗಾಗಲೇ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವ ಮೂಲಕ ಕಾಣಿಸಿಕೊಂಡಿದ್ದರೂ, ಇದರ ಆರ್ಥಿಕ ಹೊರೆ ಚಿಲ್ಲರೆ ವ್ಯಾಪಾರಿಗಳ ಮೇಲೆ ಹೊಡೆತ ಬಿದ್ದಿದೆ. ದಿನನಿತ್ಯ ತಮ್ಮ ಬದುಕಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ವ್ಯಾಪಾರ ನಡೆಸುತ್ತಿರುವ ಸಾವಿರಾರು ವ್ಯಾಪಾರಿಗಳು ಈಗ ಸಂಕಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂದಿರಾನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ಬನಶಂಕರಿ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳಿಗೆ ಇತ್ತೀಚೆಗೆ ಬಿಸಿ ಮುಟ್ಟಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಪರಿಣಾಮವಾಗಿ ಮಾರಾಟ ತೀವ್ರವಾಗಿ ಕುಸಿದಿದೆ.  ಆಮದು ವೆಚ್ಚಗಳನ್ನು ಸಮರ್ಥಿಸಿಕೊಳ್ಳಲಾಗದೆ ಹಲವು ಅಂಗಡಿಗಳು ತಮ್ಮ ಶಾಖೆಗಳನ್ನು ಮುಚ್ಚಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿವೆ.

GO DESi ಎಂಬ  ಆಹಾರ ಉತ್ಪನ್ನಗಳ ಬ್ರಾಂಡ್, ತನ್ನ ನಾನಾ ಶಾಖೆಗಳಲ್ಲಿ ಮಾರಾಟದ ಗಂಭೀರ ಕುಸಿತವನ್ನು ಅನುಭವಿಸುತ್ತಿದೆ. "ಕಳೆದ ಎರಡು ತಿಂಗಳುಗಳಲ್ಲಿ ನಮ್ಮ ಮಾರಾಟ 15-20% ಇಳಿದಿದೆ. ನಾಗಸಂದ್ರ ಶಾಖೆ ಒಂದರಲ್ಲೇ  40% ರಷ್ಟು ಆದಾಯ ಕುಸಿತ ಕಂಡು ಬಂದ ಕಾರಣ, ಅದನ್ನು ಮುಚ್ಚಬೇಕಾಯಿತು," ಎಂದು ಕಂಪನಿಯ ಕಾರ್ಯಾಚರಣೆ ವ್ಯವಸ್ಥಾಪಕ ಶರತ್ ಜಿ ಬೇಸರ ವ್ಯಕ್ತಪಡಿಸಿದ್ದಾರೆ.

Namma Metro: ಡೆಡ್‌ಲೈನ್‌ ಮೀರಿದ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ: ಸೇವೆ ಇನ್ನಷ್ಟು ತಡ

ಮತ್ತೊಂದೆಡೆ, ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಆಭರಣ ಅಂಗಡಿ ಮಾಲೀಕ ನವೀನ್ ಗೌಡ, ಬಾಡಿಗೆ ದುಬಾರಿ ಆಗಿರುವುದರಿಂದ ತಮ್ಮ ಸಂಪಾದನೆಯ 70% ಕೇವಲ ಬಾಡಿಗೆಗೇ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ದಿನದ ಮಾರಾಟದಲ್ಲಿ ಈಗ 20% ಕುಸಿತ ಇದೆ. ಸರ್ಕಾರ ಬಾಡಿಗೆ ಕಡಿತಗೊಳಿಸದಿದ್ದರೆ, ಉಳಿಯುವುದು ಕಷ್ಟ," ಎಂದು ಹೇಳಿದರು.

ಬನಶಂಕರಿ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ರಾಸ್ ಕಾಫಿ ಹೌಸ್ ಕೂಡ ಇದೇ ತರಹದ ಸಂಕಷ್ಟ ಎದುರಿಸುತ್ತಿದೆ. "ಪ್ರಯಾಣಿಕರೇ ನಮ್ಮ ಮುಖ್ಯ ಗ್ರಾಹಕರು. ಇತ್ತೀಚಿನ ದರ ಏರಿಕೆಯಿಂದ ಅನೇಕರು ಇತರ ಸಾರಿಗೆ ಮಾರ್ಗಗಳನ್ನು ಆರಿಸಿಕೊಂಡಿದ್ದಾರೆ. ಇದರಿಂದ ಮಾರಾಟ 30% ಕುಸಿತವಾಗಿದೆ," ಎಂದು ವ್ಯವಸ್ಥಾಪಕ ಬಾಲು ಎಂ ಹೇಳಿದರು.

ಚಿಂತೆ ಮೂಡಿಸುತ್ತಿರುವ ಮತ್ತೊಂದು ಅಂಶವೆಂದರೆ,  ಜನಸಂದಣಿ ಕಡಿಮೆಯಾದರೂ ಬಿಎಂಆರ್‌ಸಿಎಲ್ ವಿಧಿಸುವ ಬಾಡಿಗೆಗಳನ್ನು ತಗ್ಗಿಸುವ ಸ್ಥಿತಿಯಲ್ಲಿಲ್ಲ. ವ್ಯಾಪಾರಿಗಳಿಗೆ ಇದು ಮತ್ತೊಂದು ಬಿಕ್ಕಟ್ಟಿನ ಮೂಲವಾಗಿದೆ. ಹಲವರು ಈಗ ತಮ್ಮ ದೀರ್ಘಕಾಲೀನ ಅಂಗಡಿಗಳನ್ನು ಮುಂದುವರೆಸಬೇಕೆ ಎಂಬುದರ ಬಗ್ಗೆ ಪುನರ್‌ ಆಲೋಚನೆ ಮಾಡುತ್ತಿದ್ದಾರೆ.

ಆದರೆ, ಬಿಎಂಆರ್‌ಸಿಎಲ್ ಈ ಸಮಸ್ಯೆಯನ್ನು ತಾತ್ಕಾಲಿಕ ಎಂದು ಪರಿಗಣಿಸುತ್ತಿದೆ. "ಆರಂಭದಲ್ಲಿ ದರ ಏರಿಕೆಯಿಂದ ಪ್ರಯಾಣಿಕರು ಕಡಿಮೆಯಾಗಿದ್ದರು. ಆದರೆ ಈಗ ಪರಿಸ್ಥಿತಿ ಮತ್ತೆ ಸ್ಥಿರವಾಗುತ್ತಿದೆ. ವ್ಯಾಪಾರಿಗಳು ಸ್ಪರ್ಧಾತ್ಮಕ ತಂತ್ರಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕು," ಎಂದು ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎ.ಎಸ್ ಹೇಳಿದರು.

ದರ ಏರಿಕೆಯಿಂದ ಇಳಿಕೆಯಾಗಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತೆ ಹೆಚ್ಚಳ! ಕಾರಣವೇನು ಗೊತ್ತಾ?

ಒಟ್ಟಾರೆಯಾಗಿ, ಮೆಟ್ರೋ ದರ ಏರಿಕೆ ಯಿಂದ, ಅದರ ಪರೋಕ್ಷ ಪರಿಣಾಮಗಳು ವ್ಯಾಪಾರಿಗಳ ಬದುಕು ಮತ್ತು ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರಿದೆ. ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವಷ್ಟು ಸಾದ್ಯವಿಲ್ಲದ ಚಿಕ್ಕ ಚಿಲ್ಲರೆ ವ್ಯಾಪಾರಿಗಳಿಗೆ ಇದು ಬದುಕಿನ ಪ್ರಶ್ನೆಯಾಗುತ್ತಿದೆ. ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಮತ್ತಷ್ಟು ಜವಾಬ್ದಾರಿ ವಹಿಸಿ, ಜನಸಾಮಾನ್ಯರ ಹಾಗೂ ವ್ಯಾಪಾರಿಗಳನ್ನು ಪರಿಗಣನೆ ತೆಗೆದುಕೊಂಡು ಹೊಸ ನೀತಿಗಳನ್ನು ರೂಪಿಸಬೇಕಾಗಿದೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು