ಶತ್ರು ದಮನಕ್ಕೆ ಭಾರತ ಕಂಕಣ- ಯುದ್ಧ ಸಾರುತ್ತಾರಾ ಮೋದಿ? - ಭವಿಷ್ಯ ನುಡಿದ ಜ್ಯೋತಿಷಿ

Published : Apr 26, 2025, 04:35 PM ISTUpdated : Apr 26, 2025, 05:17 PM IST
ಶತ್ರು ದಮನಕ್ಕೆ ಭಾರತ ಕಂಕಣ- ಯುದ್ಧ ಸಾರುತ್ತಾರಾ ಮೋದಿ? -  ಭವಿಷ್ಯ ನುಡಿದ ಜ್ಯೋತಿಷಿ

ಸಾರಾಂಶ

2025 ರ ವರ್ಷದ ಫೆಬ್ರವರಿ ಯಿಂದ ಜೂನ್ ವರೆಗೂ ಕೆಡುಗಾಲ, ಪಾಶ್ಚಾತ್ಯ ಪ್ರಭಾವ ಅತ್ಯಧಿಕವಾಗಿ ಹರಡುವುದು ಮತ್ತು ಭಯೋತ್ಪಾದನೆ ಚಿತ್ರ ವಿಚಿತ್ರ ಸಂಚುಗಳಿಂದ ಹರಡುವುದು ಎಂದಿದ್ದಾರೆ ದೈವಜ್ಞ ಹರೀಶ್ ಕಾಶ್ಯಪ

ಮೀನ ರಾಶಿಯಲ್ಲಿ ಪ್ರಕ್ಷುಬ್ದ ಗ್ರಹಯೋಗ ಇದೆ, ಸದ್ಯ ಮೂರುದಿನ ಪ್ರದೋಷ ನಡೆಯುತ್ತಿದ್ದು, ಪಂಚಕ ದೋಷವೂ ಇದ್ದು, ಚಂದ್ರನು ಶನಿ ರಾಹುಗಳ ಬೆರೆವುದು ಈಗಲೇ (ಗ್ರಹಣದೋಷ)
ಅಲ್ಲಿ ನೀಚ ಬುಧನೂ ಸೇರಿ ಭೂ ಜಲ ಮನಸು ಶ್ರದ್ಧೆ ಎಲ್ಲವೂ ಕೆಟ್ಟುಹೋಗುವುದು. ಕುಜನೂ ನೀಚನಿದ್ದು, ಅಗಣಿತ ದುಃಖಕೆ ಕಾರಣವಾಗುತ್ತದೆ.

ಪಾಕಿಸ್ತಾನದ ನಾಶಕೆ ಇದು ಬಹುದೊಡ್ಡ ಆಘಾತ ಆರಂಭ ಮಾತ್ರ, ಹಾಗಂತ ನಮಗೆ ಮೇಲು ಸುಖ ಅಂತ ಅರ್ಥವಲ್ಲ. 2024 ರ ಆಗಸ್ಟ್ ನಲ್ಲೆ ಪೋಸ್ಟ್ ನಲ್ಲಿ, ಈ 2025 ರ ವರ್ಷದ ಫೆಬ್ರವರಿ ಯಿಂದ ಜೂನ್ ವರೆಗೂ ಕೆಡುಗಾಲವಿದೆ ಎಂದಿದ್ದೆ. ಪಾಶ್ಚಾತ್ಯ ಪ್ರಭಾವ ಅತ್ಯಧಿಕವಾಗಿ ಹರಡುವುದು ಮತ್ತು ಭಯೋತ್ಪಾದನೆ ಚಿತ್ರ ವಿಚಿತ್ರ ಸಂಚುಗಳಿಂದ ಹರಡುವುದು ಅಂತ ಸ್ಪಷ್ಟವಾಗಿ ಹೇಳಿದ್ದೆ. ಈಗ ಅದರದೇ ತುದಿಯಲ್ಲಿ ನಿಂತಿದ್ದೇವೆ

ದೇವಗುರು , ಸೂರ್ಯನ ಅನುಕೂಲ ಒಳ್ಳೆದಿದೆ, ಅನ್ನೋದು ಪ್ಲಸ್ ಪಾಯಿಂಟ್ ಆಗಿದೆ. ಕುಜನ ನೀಚ ಚಾರ ನಮಗೆ ಒಳ್ಳೆಯದೇ. ಯುದ್ಧವಾಗಲ್ಲ, ಯಾವುದೇ ಯುದ್ಧವಾಗಬೇಕಾದರೆ, ಪಾಪರು ಯುತಿ,  ಪರಸ್ಪರ ಕೇಂದ್ರ, ಗ್ರಹಣಗಳು, ಶುಭಹೀನವಾಗಿ ಕುಜನ ಸಾಥ್ ಇದ್ದರೆ ಮಾತ್ರ ರಣರಂಗ ಏರ್ಪಡುವುದು. ಸೇನಾಪತಿಯೇ ಕುಜನು, ಅವನ ಸಾಥ್ ಇಲ್ಲದ "ಯುದ್ಧಕಾರ್ಮೋಡ" ನಿರ್ಮಾಣವಾಗಿದೆ ಅಷ್ಟೇ...ಯುದ್ಧವಾಗದು. ಆದರೆ ಪ್ರಾಕೃತಿಕ ವಿಕೋಪಗಳ ಭಯವಿದೆ

ಮೋದಿ ಅವರ ರುಚಕ ಮಹಾದಶೆ, ಚಂದ್ರ ಮಂಗಳಯೋಗ, ಚಂದ್ರನಿಗೆ ನೀಚಭಂಗ ರಾಜಯೋಗ ಇಷ್ಟೂ ಈಗ ನಡೆಯುತ್ತಿದ್ದು ಇದೇ ಯೋಗಗಳ ಕಾರಣದಿಂದ ಕಡಿಮೆ ಸೀಟ್ಸ್ ಬಂದರೂ ಪುನಾ 3ನೇ ಅವಧಿಗೆ ಪ್ರಧಾನಿಯಾಗಿ ಮುಂದುವರೆದಿರುವುದು. ಇಂಥ ವಿಶೇಷ ರಾಜಯೋಗ ಇರುವ ಮೋದಿ ಅವರನ್ನು ಪಾಕಿಸ್ತಾನ ನೇರವಾಗಿ ಎದುರು ಹಾಕಿಕೊಳ್ಳದು. ಅಸಾಧ್ಯ. ಯುದ್ಧ ಅಂದರೆ ಸರ್ವನಾಶ ಅಂತಲೇ ಅರ್ಥ. ಯುದ್ಧ ಪ್ರಚೋದನೆಗೆ ಈ ಮೇಲೆ ಹೇಳಿದ ಪ್ರದೋಷಾದಿ ದೋಷಗಳು ಕುಮ್ಮಕ್ಕು ಕೊಡುತ್ತವೆ. ಆದರೆ ಗ್ರಹಚಾರ ಮತ್ತು ಮೋದಿ ಅವರ ಯೋಗ (ದೈವ) ದಿಂದ ಯುದ್ಧವಾಗದಂತೆ , ಶತ್ರುಗಳಿಗೆ ನಾನಾ ಸಂಕಷ್ಟಗಳ ಒಡ್ಡಿ ಅವರನ್ನು ನಿಸ್ತೇಜರನ್ನಾಗಿಸುವರು.

ಈ ಒಂದು ವಾರದಲ್ಲಿ ಅನೇಕ ಮಾರಣಗಳು ಆಗುತ್ತದೆ, ಮೇ 18ರ ನಂತರ ಶನಿ ರಾಹು ಭೇದವಾಗಿ ದೋಷ ತಗ್ಗುವುದು, ಜೂನ್ ಮಧ್ಯದಲ್ಲಿ ಕುಜನು ಸಿಂಹಕ್ಕೆ ಸಾಗಿ ಬಲಿಷ್ಟವಾಗುವುದು. ಇದು ಮೋದಿ ಅವರಿಗೆ ದಶೆಯ ಕೇಂದ್ರಸ್ಥಾನವಾಗಿ, ಶತ್ರು ದಮನಕ್ಕೆ ರುದ್ರನರ್ತನ ಮಾಡುವರು. ಪ್ರತೀಕಾರದ ವ್ಯಗ್ರತೆ ಈಗಲ್ಲ, ಜೂನ್ ನಿಂದ ಜಗತ್ತು ನೋಡುವುದು. 

ದೇವತಾ ರಕ್ಷೆ : ಕಾಶ್ಮೀರದಲ್ಲೇ ಎಂಟು ಕಡೆ ಪ್ರಾಚೀನ ದೇವಸ್ಥಾನ ಸ್ಥಳಗಳಲ್ಲಿ ಒಟ್ಟಿಗೇ ಶತಚಂಡಿಯಾಗ, ರುದ್ರಶಾಂತಿ , ಪ್ರತಿಬಲಿಶಾಂತಿ ಹೋಮಗಳ ಸಹಿತ ವಿಧಿವತ್ ನಾನಾ ವೈದಿಕ ಕರ್ಮಗಳ ಮಾಡಿಸಬೇಕು.
ಬರಿದೆ ಅಧಿಕಾರ, ಪೂರ್ವಪುಣ್ಯ, ಬುದ್ಧಿ, ಬಾಹುಬಲ,ಅಸ್ತ್ರ ಶಸ್ತ್ರ ತಂತ್ರಜ್ಞಾನದಿಂದಲೇ ಯಶ ಕೀರ್ತಿ ಶಾಂತಿ ಸಮೃದ್ಧಿ ಬರುವುದಿಲ್ಲ. ಪ್ರಶ್ನಶಾಸ್ತ್ರ ಜ್ಯೋತಿಷ ಪಕ್ಕಾ ಮಾರ್ಗದರ್ಶನಗಳಿಂದ ದೇವತಾ ಕಾರ್ಯಗಳ ಮಾಡಿಸಬೇಕು. ದೇವತೆಗಳು ಪ್ರಸನ್ನವಾದರೆ ಬೆಟ್ಟದಂತಹ ಭಾರವೂ ಹೂವಿನಂತೆ ಆಗುತ್ತದೆ. ಇತ್ತ ಮೋದಿ ಅವರು ಗಮನ ಕೊಡಬೇಕು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ