2 ಲಕ್ಷಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಿದ ಹೊಂಡಾ 2 ವ್ಹೀಲರ್ ಇಂಡಿಯಾ!

By Suvarna NewsFirst Published Dec 3, 2020, 5:26 PM IST
Highlights

ಕೋವಿಡ್-19 ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ರೂಪದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣದ ಅರಿವು ವಿಸ್ತರಿಸಿದ ಹೋಂಡಾ 2 ವೀಲರ್ಸ್ ಇಂಡಿಯಾ /6 ತಿಂಗಳಲ್ಲಿ ದೇಶದಾದ್ಯಂತ 185ಕ್ಕೂ ಹೆಚ್ಚು ನಗರಗಳಿಗೆ ತಲುಪಿದ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’

ನವದೆಹಲಿ(ಡಿ.03):  ರಸ್ತೆ ಸುರಕ್ಷತೆಗೆ ಸಂಬಂಧಿಸಿದ ತನ್ನ ಡಿಜಿಟಲ್ ಆಂದೋಲನ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’  6 ತಿಂಗಳಲ್ಲಿ ದೇಶದಾದ್ಯಂತ 2 ಲಕ್ಷಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆಯ ತಿಳಿವಳಿಕೆ ನೀಡಿದೆ ಎಂದು ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೇಳಿದೆ.

20ನೇ ವರ್ಷದ ಸಂಭ್ರಮದಲ್ಲಿ ಹೊಂಡಾ ಆ್ಯಕ್ಟೀವಾ; ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ!.

2020ರ ಮೇ ತಿಂಗಳಲ್ಲಿ ಆರಂಭಿಸಿದ್ದ  ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’ ಕಾರ್ಯಕ್ರಮವು, ಹೊಸ ಸಹಜ ಬದುಕಿನಲ್ಲಿ ಜನರು ತಮ್ಮ, ತಮ್ಮ ಮನೆಯಲ್ಲಿ ಕುಳಿತುಕೊಂಡೇ ರಸ್ತೆಯಲ್ಲಿ ಸಂಚರಿಸುವಾಗ ಹೇಗೆ ಸುರಕ್ಷಿತವಾಗಿರಬೇಕು ಎನ್ನುವುದನ್ನು ಡಿಜಿಟಲ್ ವಿಧಾನದಲ್ಲಿ ಖಾತರಿಪಡಿಸಿದೆ. 5 ವರ್ಷದ ಮಗುವಿನಿಂದ ಹಿಡಿದು ವಾಹನ ಚಾಲನಾ ಅನುಮತಿ ಪತ್ರಕ್ಕೆ ಅರ್ಜಿ ಹಾಕಿರುವ 18 ವರ್ಷದವರು, 30 ವಯಸ್ಸಿನ ಗೃಹಿಣಿ, ಕಾರ್ಪೊರೇಟ್ ಉದ್ಯೋಗಿ ಅಥವಾ ದ್ವಿಚಕ್ರ ವಾಹನ ಸವಾರ ಒಳಗೊಂಡಂತೆ ಎಲ್ಲ ವಯೋಮಾನದವರು, ಹೋಂಡಾದ ನೆರವಿನಿಂದ ರಸ್ತೆ ಸುರಕ್ಷತೆಯ ಮಹತ್ವದ ಸಂಗತಿಗಳನ್ನು ಡಿಜಿಟಲ್ ರೂಪದಲ್ಲಿ ಕಲಿತಿದ್ದಾರೆ.  

ಸುಧೀರ್ಘ ಎಂಜಿನ್ ಬಾಳ್ವಿಕೆ, ಸುರಕ್ಷತೆಯ ಹೊಂಡಾ ರೆಪ್‌ಸೋಲ್ ಎಂಜಿನ್ ಆಯಿಲ್ ಬಿಡುಗಡೆ!..

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಸುರಕ್ಷಿತ ವಾಹನ ಚಾಲನೆಗೆ ಉತ್ತೇಜನ ನೀಡುವ ಉದ್ದೇಶಕ್ಕೆಂದೇ ಮೀಸಲಾಗಿರುವ ತಂಡವು ಕೇವಲ 6 ತಿಂಗಳಲ್ಲಿ ಉತ್ತರದಲ್ಲಿನ ಉನಾದಿಂದ ಹಿಡಿದು ದಕ್ಷಿಣದ ವಿಜಯವಾಡಾ ಮತ್ತು ಪೂರ್ವದ ಮುಜಫರ್‍ಪುರನಿಂದ ಪಶ್ಚಿಮದ ಠಾಣೆವರೆಗಿನ 185 ಪಟ್ಟಣ ಮತ್ತು ನಗರಗಳಿಗೆ ಈ ತಿಳಿವಳಿಕೆ ಕಾರ್ಯಕ್ರಮವನ್ನು ತಲುಪಿಸಿದೆ. 

ರಸ್ತೆ ಸುರಕ್ಷತೆಯು ಹೋಂಡಾದ ಕೇಂದ್ರ ಬಿಂದುವಾಗಿದೆ.  ಸುರಕ್ಷತೆಗೆ ಸಂಬಂಧಿಸಿದ ಈ ಧೋರಣೆಯಿಂದಾಗಿ ಹೋಂಡಾ, ಹೊಸ ಸಹಜ ಬದುಕಿನ ಸವಾಲಿನ ಸಂದರ್ಭದಲ್ಲಿ ರಸ್ತೆಯಲ್ಲಿ ಜನರ ಸುರಕ್ಷತೆಗೆ ಕೈಗೊಳ್ಳಬೇಕಾದ ಹೊಸ ಮತ್ತು ನಾವೀನ್ಯತಾ ಮಾರ್ಗೋಪಾಯಗಳ ಬಗ್ಗೆ ಹುಡುಕಾಟ ನಡೆಸಿ, ಡಿಜಿಟಲ್ ತರಬೇತಿಗೆ ಚಾಲನೆ ನೀಡಿತ್ತು.  6 ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ವಯಸ್ಕರಲ್ಲಿ ಈ ಕುರಿತ ಅರಿವು ಮೂಡಿಸಿರುವುದಕ್ಕೆ ನಮಗೆ ಅತೀವ ಸಂತೋಷ ಆಗುತ್ತಿದೆ. ರಸ್ತೆ ಸುರಕ್ಷತೆಯ ಪಾಠಗಳ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ವರ್ಚುವಲ್ ವೇದಿಕೆ ಬಳಸುವುದನ್ನು ನಾವು ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ರ್ಯಾಂಡ್ ಮತ್ತು ಸಂವಹನ ವಿಭಾಗದ ಉಪಾಧ್ಯಕ್ಷ ಪ್ರಭು ನಾಗರಾಜ್ ಹೇಳಿದರು.

ಹೋಂಡಾ ರಸ್ತೆ ಸುರಕ್ಷತೆ ‘ಇ-ಗುರುಕುಲ’ದ ಮುಖ್ಯಾಂಶಗಳು:
ಕಲಿಕಾ ಮಾದರಿಗಳ ವೈಜ್ಞಾನಿಕ ವಿನ್ಯಾಸ: ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಲ್ಲಿ ರಸ್ತೆ ಸುರಕ್ಷತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲು ಹೋಂಡಾದ ಸುರಕ್ಷಿತ ಚಾಲನಾ ತಂಡವು ವಿವಿಧ ಪ್ರದೇಶಗಳ ಜನರು ಮತ್ತು ವಿವಿಧ ವಯೋಮಾನದವರಿಗೆ ಸರಿಹೊಂದುವ ಬಗೆಯಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲಿ ಸೂಕ್ತ ಕಲಿಕಾ ಮಾದರಿಗಳ ವಿನ್ಯಾಸ ರೂಪಿಸಿತ್ತು.

ಯುವಜನರಲ್ಲಿ ಸುರಕ್ಷಿತ ರಸ್ತೆ ಬಳಕೆ ಮನೋಭಾವ ಬೆಳೆಸುವುದು: ಹೋಂಡಾ ರಸ್ತೆ ಸುರಕ್ಷತೆಯ ಮಾರ್ಗದರ್ಶಕರು 6 ತಿಂಗಳಲ್ಲಿ, 497 ಶಾಲೆಗಳ 76,000ಕ್ಕೂ ಹೆಚ್ಚು ಮಕ್ಕಳಲ್ಲಿ ಅರಿವು ಮೂಡಿಸಿದ್ದರು.  ಮಕ್ಕಳಿಗೆ ರಸ್ತೆ ಸುರಕ್ಷತೆಯ ಮೂಲ ಪಾಠಗಳಾದ ಸಂಚಾರ ನಿಯಂತ್ರಣ ದೀಪಗಳ ವ್ಯವಸ್ಥೆ, ರಸ್ತೆ ಹೇಗೆ ದಾಟಬೇಕು, ಸೈಕಲ್ ಸವಾರಿ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳೇನು ಮತ್ತಿತರ ಸಂಗತಿಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು.

ಹೊಸ, ಭವಿಷ್ಯದ ಮತ್ತು ಹಾಲಿ ಸವಾರರಲ್ಲಿ ಸುರಕ್ಷಿತ ರೀತಿಯಲ್ಲಿ ರಸ್ತೆ ಬಳಸುವ ಪ್ರವೃತ್ತಿ ರೂಢಿಸುವುದು: 402 ಕಾಲೇಜ್‍ಗಳು ಮತ್ತು 373 ಕಾರ್ಪೊರೇಟ್‍ಗಳ 1.36 ಲಕ್ಷಕ್ಕೂ ಹೆಚ್ಚು ವಯಸ್ಕರು  ಹೋಂಡಾದ ಡಿಜಿಟಲ್ ತರಬೇತಿ ಕಾರ್ಯಕ್ರಮದ ಭಾಗವಾಗಿದ್ದರು. ರಸ್ತೆಯಲ್ಲಿ ವಾಹನ ಓಡಿಸುವಾಗ   ಸುರಕ್ಷತಾ ನಿಯಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಪಾಲಿಸುವುದರ ಮಹತ್ವವನ್ನು ಅವರಿಗೆಲ್ಲ ಮನವರಿಕೆ ಮಾಡಿಕೊಡಲಾಗಿತ್ತು.  ರಸ್ತೆ ಚಿಹ್ನೆ, ಎದುರಿಗಿನ ವಾಹನ ಹಿಂದಿಕ್ಕಿ ಮುಂದೆ ಸಾಗುವಾಗ (ಓವರ್‍ಟೇಕ್) ಅನುಸರಿಸಬೇಕಾದ ಕ್ರಮಗಳು, ರಸ್ತೆಗಳು ಕೂಡುವ ಸ್ಥಳದಲ್ಲಿ ತಿರುವು ಪಡೆಯುವ, ಮುಂದೆ ಸಾಗುವ ವಿಧಾನದ ಬಗ್ಗೆ ತಿಳಿವಳಿಕೆ ನೀಡಲಾಗಿದೆ.

ಆನ್‍ಲೈನ್ ವಿಶೇಷ ಕಲಿಕಾ ಕಾರ್ಯಕ್ರಮಗಳು: ಮಹಿಳೆಯರ ಸುರಕ್ಷತೆಗಾಗಿ ಮತ್ತು ಅವರು ಸುರಕ್ಷಿತವಾಗೊ ಮತ್ತು ಸ್ವತಂತ್ರವಾಗಿ ವಾಹನ ಸವಾರಿ ಮಾಡಲು ಹೋಂಡಾ, ಅವರಿಗಾಗಿ   ಪ್ರತ್ಯೇಕ ಆನ್‍ಲೈನ್ ಕಾರ್ಯಕ್ರಮ ಆಯೋಜಿಸಿತ್ತು.  ‘ಕೋವಿಡ್-19’ರ ಮುಂಚೂಣಿ ಸಮರ ವೀರರು, ಎನ್‍ಸಿಸಿ ಕ್ಯಾಡೆಟ್ ಮತ್ತು ಎನ್‍ಎಸ್‍ಎಸ್ ಸ್ವಯಂ ಸೇವಕರಿಗೆ 6 ತಿಂಗಳ ಅವಧಿಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನೂ ಹೋಂಡಾ ಹಮ್ಮಿಕೊಂಡಿತ್ತು.
 
ರಸ್ತೆ ಸುರಕ್ಷತೆ ಉತ್ತೇಜಿಸುವಲ್ಲಿನ ಹೋಂಡಾದ ಪರಂಪರೆ 
1970ರಲ್ಲಿ, ಸುರಕ್ಷಿತ ವಾಹನ ಚಾಲನೆಯ ಚಟುವಟಿಕೆಗಳನ್ನು ಉತ್ತೇಜಿಸುವ ಬಗ್ಗೆ ಕಾರ್ಯಪ್ರವೃತ್ತವಾದ ಮೊದಲ ವಾಹನ ತಯಾರಿಕಾ ಸಂಸ್ಥೆ ಇದಾಗಿದೆ. ಅಲ್ಲಿಂದಾಚೆಗೆ ಹೋಂಡಾ, ಸವಾರರಿಗಷ್ಟೇ ಸುರಕ್ಷತಾ ಶಿಕ್ಷಣ ನೀಡಲು ಬದ್ಧವಾಗಿರದೆ, ರಸ್ತೆಗಳನ್ನು ಬಳಸುವ ಪ್ರತಿಯೊಬ್ಬರಿಗೂ ತಿಳಿವಳಿಕೆ ನೀಡುತ್ತಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಜಾಗತಿಕ ಘೋಷಣೆಯಾಗಿರುವ ‘ಪ್ರತಿಯೊಬ್ಬರಿಗೂ ಸುರಕ್ಷತೆ’ಯಡಿ  ಹೋಂಡಾ, ವಿಶ್ವದಾದ್ಯಂತ 41 ದೇಶಗಳಲ್ಲಿ ತನ್ನ ರಸ್ತೆ ಸುರಕ್ಷತೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮವನ್ನು ವಿಸ್ತರಿಸಿದೆ.

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ಹೋಂಡಾ ತನ್ನ ವಹಿವಾಟು ಆರಂಭಿಸಿದ 2001ರಿಂದಲೇ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಶಿಕ್ಷಣ ಆರಂಭಿಸಿದೆ. ಭಾರತದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ದ್ವಿಚಕ್ರ ವಾಹನ ತಯಾರಿಸುವ ಕಂಪನಿಗಳ ಪೈಕಿ, ಹೋಂಡಾ  ಮೊದಲನೇಯದಾಗಿದೆ. 20 ವರ್ಷಗಳಲ್ಲಿ ಹೋಂಡಾ, ತನ್ನ ಮೂರು ಆಧಾರ ಸ್ತಂಭಗಳಡಿ, ಸುರಕ್ಷಿತ ಚಾಲನೆಯ ಶಿಕ್ಷಣ ಮತ್ತು ತರಬೇತಿಯನ್ನು  38 ಲಕ್ಷಕ್ಕೂ ಹೆಚ್ಚು ಜನರಿಗೆ ಒದಗಿಸಿದೆ.  ಹೋಂಡಾದ 14 ಸಂಚಾರ ತರಬೇತಿ ಪಾಕ್ರ್ಸ್‍ಗಳು (ಟಿಟಿಪಿ), ಪ್ರತಿ ದಿನವೂ ಮಕ್ಕಳು ಮತ್ತು ವಯಸ್ಕರಿಗೆ ತರಬೇತಿ ಕಾರ್ಯಕ್ರಮ ನಡೆಸುತ್ತಿವೆ.  ಭಾರತದಾದ್ಯಂತ ಇರುವ ಹೋಂಡಾದ 6 ಸುರಕ್ಷತಾ ಚಾಲನಾ ಶಿಕ್ಷಣ ಕೇಂದ್ರಗಳು (ಎಸ್‍ಡಿಇಸಿ)  ವಾಹನ ಚಾಲನಾ ಕಲಿಕಾರ್ಥಿಗಳಿಗೆ ಮತ್ತು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ತರಬೇತಿ ಒದಗಿಸುತ್ತಿವೆ. ಹೋಂಡಾ, ದೇಶದಾದ್ಯಂತ ಇರುವ  ತನ್ನ 1,000ಕ್ಕೂ ಹೆಚ್ಚು ಡೀಲರಶಿಪ್‍ಗಳಲ್ಲೂ ಹೊಸ ಗ್ರಾಹಕರಿಗೆ ವಾಹನ ವಿತರಿಸುವ ಮುನ್ನ,  ವರ್ಚುವಲ್ ಸಿಮ್ಯುಲೇಟರ್ ಮೂಲಕ ರಸ್ತೆ ಸುರಕ್ಷತೆಯ ತರಬೇತಿ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಹೋಂಡಾದ ಪರಿಣತ ಸುರಕ್ಷತಾ ಮಾರ್ಗದರ್ಶಕರು  ಶಾಲೆ, ಕಾಲೇಜ್, ಸಮುದಾಯ ಮತ್ತು ಕಾರ್ಪೊರೇಟ್‍ಗಳಲ್ಲಿ ನಿಯಮಿತವಾಗಿ ಡಿಜಿಟಲ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆಯ ಸಂದೇಶವನ್ನು ತಲುಪಿಸುತ್ತಿದ್ದಾರೆ.

click me!