ನಟಿ ತಾರಾ ದುಬಾರಿ ಬೆಲೆಯ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ವಿಶೇಷ ಅಂದರೆ ತಾರಾ ಮನೆಯಲ್ಲಿ ಎಲ್ಲರೂ ಇದೇ ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ತಾರಾ ಖರೀದಿಸಿದ ದುಬಾರಿ ಈ ಕಾರಿನಲ್ಲಿನ ವಿಶೇಷತೆ ಏನು?
ಬೆಂಗಳೂರು(ನ.25) ಕನ್ನಡದ ಹಿರಿಯ ನಟಿ ತಾರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ತಾರಾ ದುಬಾರಿ ಬೆಲೆಯ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಅತ್ಯಾಕರ್ಷಕ ಕಾರನ್ನು ತಾರಾ ಕುಟುಂಬ ಸಮೇತ ಅನಾವರಣ ಮಾಡಿದ್ದಾರೆ. ಅಷ್ಟಕ್ಕೂ ತಾರಾ ಖರೀದಿಸಿದ ಕಾರು ಬಿವೈಡಿ ಸೀಲ್. ಇದು ಸೆಡಾನ್ ಎಲೆಕ್ಟ್ರಿಕ್ ಕಾರು. ಅತ್ಯಂತ ಆಕರ್ಷಕ ವಿನ್ಯಾಸ ಹಾಗೂ ಐಷಾರಾಮಿ ಕಾರು ಇದಾಗಿದೆ. ಹೊಸ ಕಾರು ಡೆಲಿವರಿ ಪಡೆದಿರುವ ತಾರಾ, ಸಂತಸ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತಾರ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಹಳ ದಿನದಿಂದ ಕಾದ ಹೊಸ ಅತಿಥಿ ನಮ್ಮ ಮನೆಗೆ ಬಂದಾಯಿತು ನಾವೆಲ್ಲರೂ ಮನಸಾರ ಮನೆ ತುಂಬಿಸಿಕೊಂಡಿದ್ದು ಆಯಿತು. ಆ ಭಗವಂತನ ದಯದಿಂದ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮೆಲ್ಲರ ಒಳ್ಳೆಯ ಮನಸ್ಸಿನ ಆರೈಕೆಗಳೊಂದಿಗೆ ಇಂದು ಎಂದು ತಾರಾ ಪೋಸ್ಟ್ ಮಾಡಿದ್ದಾರೆ. ಹೊಸ ಕಾರಿಗೆ ಶೋ ರೂಂನಲ್ಲೇ ಕಾರಿಗೆ ಪೂಜೆ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
undefined
ಬ್ಲಾಕ್ ಸೀರೆಯಲ್ಲಿ ಮಿಂಚಿದ ನಟಿ ತಾರಾ; ಚೆಂದುಳ್ಳಿ ಚೆಲುವೆನೇ ಎಂದು ಕಾಮೆಂಟ್ ಮಾಡಿದ ಅಂಕಲ್!
ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರಿನ ಬೆಲೆ 41 ಲಕ್ಷ ರೂಪಾಯಿಯಿಂದ 53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇಲ್ಲಿ ತಾರಾ ಖರೀದಿಸಿದ ಕಾರು ಬಿವೈಡಿ ಸೀಲ್ ಟಾಪ್ ಮಾಡೆಲ್ ಎನ್ನಲಾಗುತ್ತಿದೆ. ಇದರ ಎಕ್ಸ್ ಶೋ ರೂಂ ಬೆಲೆ 53 ಲಕ್ಷ ರೂಪಾಯಿ. ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಐಷಾರಾಮಿ ಕಾರಿಗೆ ಭಾರಿ ಬೇಡಿಕೆ ಇದೆ. ಕಾರಣ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 580 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ. ಮತ್ತೊಂದು ವಿಶೇಷ ಅಂದರೆ ಕೇವಲ 15 ನಿಮಿಷ ಚಾರ್ಜ್ ಮಾಡಿದರೆ ಸಾಕು 200 ಕಿ.ಮೀ ಪ್ರಯಾಣ ಮಾಡಲು ಸಾಧ್ಯವಿದೆ.
ಬಿವೈಡಿ ಸೀಲ್ ಕಾರಿನ ಪರ್ಫಾಮೆನ್ಸ್ ಕೂಡ ಉತ್ತಮವಾಗಿದೆ. 0-100 ಕಿ.ಮೀ ವೇಗವನ್ನು ಕೇವಲ 3.3 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಕಾರಿನ ಟಾಪ್ ಸ್ಪೀಡ್ 180 ಕಿಲೋಮೀಟರ್ ಪ್ರತಿ ಗಂಟೆಗೆ. 1.25 ಲಕ್ಷ ರೂಪಾಯಿ ನೀಡಿ ಹೊಸ ಕಾರು ಬುಕ್ ಮಾಡಿಕೊಳ್ಳಬಹುದು. ಸೀಲ್ ಕಾರಿನಲ್ಲಿ ಹೆಚ್ಚಿನ ಸ್ಥಳಾವಕಾಶವಿದೆ. ಆರಾಮದಾಯಕ ಪ್ರಯಾಣ ನೀಡುತ್ತದೆ. 4,800 mm ಉದ್ದ, 1,875 mm ಅಗಲ, 2,920 mm ವ್ಹೀಲ್ ಬೇಸ್ ಹೊಂದಿದೆ. ಇನ್ನು 145 mm ಗ್ರೌಂಡ್ ಕ್ಲೀಯರೆನ್ಸ್ ನೀಡಲಾಗಿದೆ.
82.56 kWh ಬ್ಯಾಟರಿ ಪ್ಯಾಕ್ ಹೊಂದಿರುವ ಬಿವೈಡಿ ಸೀಲ್, 308 bhp ಪವರ್ ಹಾಗೂ 670 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಮಂದಿಗೆ ಆರಾಮವಾಗಿ ಪ್ರಯಾಣ ಮಾಡಬಲ್ಲ ಬಿವೈಡಿ ಸೀಲ್ ಕಾರಿನಲ್ಲಿ 400 ಲೀಟರ್ ಬೂಟ್‌ಸ್ಪೇಸ್ ನೀಡಲಾಗಿದೆ. ಬ್ಯಾಟರಿ ವಾರೆಂಟಿ 8 ವರ್ಷ ಅಥಾವ 1.6 ಲಕ್ಷ ಕಿಲೋಮೀಟರ್ ನೀಡಲಾಗಿದೆ. 8 ವರ್ಷ ಅಥವಾ 1.5 ಲಕ್ಷ ಕಿಲೋಮೀಟರ್ ಮೋಟರ್ ವಾರೆಂಟ್ ನೀಡಲಾಗಿದೆ. 1.5 ಲಕ್ಷ ಕಿಲೋಮೀಟರ್ ಅಥವಾ 6 ವರ್ಷ ಡಿಸಿ ಹಾಗೂ ಎಲೆಕ್ಟ್ರಾನಿಕ್ಸ್ ಅಸೆಂಬ್ಲಿ ವಾರೆಂಟಿ ನೀಡಲಾಗಿದೆ.
ಹಾಗಂತ ಇದು ತಾರ ಅವರ ಮನೆಗೆ ಬಂದ ಮೊದಲ ಎಲೆಕ್ಟ್ರಿಕ್ ಕಾರಲ್ಲ. ಇದಕ್ಕೂ ಮೊದಲು ತಾರಾ ಮನೆಯ ಸದಸ್ಯರೊಬ್ಬರು ಇದೇ ಬಿವೈಡಿ ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಬಿವೈಡಿ ಇಮ್ಯಾಕ್ಸ್ 7 ಕಾರು ಖರೀದಿಸಿದ್ದಾರೆ. ಬಿವೈಡಿ ಇ ಮ್ಯಾಕ್ಸ್ ಕಾರಿಗೆ ಪೂಜೆ ಮಾಡಿದ ತಾರ ಸಂತಸ ಹಂಚಿಕೊಂಡಿದ್ದರು.