ಕೋತಿ ಬಿದ್ದ ರಭಸಕ್ಕೆ ಮುರಿದ ಕಾರಿನ ಸನ್‌ರೂಫ್: ವೀಡಿಯೋ ವೈರಲ್

By Anusha Kb  |  First Published Nov 23, 2024, 9:43 AM IST

ವಾರಣಾಸಿಯಲ್ಲಿ ಕೋತಿಯೊಂದು ಮರದಿಂದ ಬಿದ್ದು ಕಾರಿನ ಸನ್‌ರೂಫ್ ಮುರಿದ ಘಟನೆ ನಡೆದಿದೆ. ಕೋತಿಗೆ ಯಾವುದೇ ಗಾಯಗಳಾಗಿಲ್ಲ, ಆದರೆ ಕಾರಿನ ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕೋತಿಯೊಂದು ಮರದ ಮೇಲಿಂದ ಬಿದ್ದ ರಭಸಕ್ಕೆ ಕಾರಿನ ಸನ್‌ರೂಫ್‌ ಮುರಿದು ಸಂಪೂರ್ಣ ಹಾನಿಯಾದಂತಹ ಘಟನೆ ನಡೆದಿದೆ. ಆದರೆ ಕೋತಿ ಯಾವುದೇ ಗಾಯಗಳಿಲ್ಲದೇ ಪಾರಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದವರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಕೋತಿಯ ಬಗ್ಗೆ ಕಾಳಜಿ ವಹಿಸಿ ಕೋತಿಗೆ ಏನು ಆಗಿಲ್ಲವೇ ಎಂದು ಕೇಳಿದರೆ ಮತ್ತೆ ಕೆಲವರು ಈ ಸನ್‌ ರೂಫ್ ಸರಿಪಡಿಸುವುದಕ್ಕೆ ಎಷ್ಟು ಹಣ ತಗುಲುವುದು ಎಂದು ಪ್ರಶ್ನೆ ಮಾಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ ಕಾಣಿಸುತ್ತಿರುವಂತೆ  ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕೋತಿಯೊಂದು ಎತ್ತರದಿಂದ ಕೆಳಗೆ ಹಾರಿದೆ. ಸೀದಾ ಬಂದು ಅದು ಕಾರಿನ ಸನ್‌ರೂಪ್ ಮೇಲೆ ಬಿದ್ದಿದ್ದು, ಸನ್‌ ರೂಫ್ ಮುರಿದು ಕೋತಿ ಕಾರಿನ ಒಳಗೆ ಬಿದ್ದಿದೆ. ಕೂಡಲೇ ಕೋತಿ ಸನ್ ರೂಪ್ ಮುರಿದ ಜಾಗದಿಂದಲೇ ಕಾರೊಳಗಿನಿಂದ ಮೇಲೇರಿ ಬಂದು ಅಲ್ಲಿಂದ ಓಡಿದೆ. ಘಟನೆಯಲ್ಲಿ ಕೋತಿಗೇನು ಹಾನಿಯಾಗಿಲ್ಲ, ಆದರೆ ಕಾರಿನ ಸನ್‌ರೂಫ್ ಮುರಿದಿದ್ದರಿಂದ ಕಾರಿನ ಮಾಲೀಕನಿಗೆ ಮಾತ್ರ ಸಾವಿರಾರು ರೂಪಾಯಿಗಳ ವೆಚ್ಚ ಬಂದಿದೆ. 

Tap to resize

Latest Videos

undefined

10 ಸೆಕೆಂಡ್‌ಗಳ ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾನಿಯನ್ನು ಸರಿಪಡಿಸಲು ಮಾಲೀಕರಿಗೆ ಎಷ್ಟು ಹಣ ಬೇಕಕಾಗಬಹುದು ಎಂದು ಪ್ರಶ್ನೆ ಕೇಳಿದರೆ ಮತ್ತೊಬ್ಬರು ಗೊತ್ತಿಲ್ಲ ಆದರೂ ಕಡಿಮೆಯಲ್ಲಿ 30ರಿಂದ 40 ಸಾವಿರ ವೆಚ್ಚ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಈ ತೊಂದರೆಗೆ ಇನ್ಶ್ಯುರೆನ್ಸ್ ಕಂಪನಿಗಳು ವಿಮೆ ನೀಡುತ್ತವೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಒಬ್ಬರು ಇನ್ಸ್ಯುರೆನ್ಸ್ ಸಂಸ್ಥೆಯ ಮನವೊಲಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಸಹೋದರ ಏನು ಆಗೇ ಇಲ್ಲ ಎಂಬಂತೆ ಹೊರಟು ಹೋದ ಎಂದು ಮತ್ತೊಬ್ಬರು ಕೋತಿಯ ಬಗ್ಗೆ ಹೇಳಿದ್ದಾರೆ. 

ಹಾಗೆಯೇ ಮತ್ತೆ ಕೆಲವು ಬಳಕೆದಾರರು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಆ ಕಾರಿನ ಮಾಲೀಕನ ತಾಯಿ ಈಗ ಹೀಗೆ ಹೇಳ್ಬಹುದು, 'ನಾನು ಮೊದಲೇ ಹೇಳಿದ್ದೆ, ಸನ್‌ರೂಫ್ ಇಲ್ಲದ ಕಾರು ತೆಗೆದುಕೋ ಎಂದು ಈಗ ಅನುಭವಿಸು' ಎಂದು ಹೇಳಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಕೋತಿಯ ಬಗ್ಗೆ ಕಾಳಜಿ ವಹಿಸಿದ್ದು,  ಪರವಾಗಿಲ್ಲ, ಕೋತಿ ಯಾವುದೇ ಗಾಯಗಳಿಲ್ಲದೇ ಪಾರಾಗಿದೆ ಧನ್ಯವಾದ ದೇವರೆ ಎಂದು ಕಾಮೆಂಟ್ ಮಾಡಿದ್ದಾರೆ.  ಕಳೆದ ಮಂಗಳವಾರ ವಾರಣಾಸಿಯ ಮಾರುಕಟ್ಟೆಯೊಂದರಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ಅಲ್ಲಿದ್ದವರನ್ನು ಅಚ್ಚರಿಗೀಡುಮಾಡಿತ್ತು. ಅನೇಕರು ಈ ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ले बे ये गया तेरा सन रूफ 😭😭 pic.twitter.com/n82LOoJKO4

— Raja Babu (@GaurangBhardwa1)

 

click me!