ಫೋರ್ಡ್ ಇದೀಗ ಭಾರತದಲ್ಲಿ ವಿಶೇಷ ಆಫರ್ ಘೋಷಿಸಿದೆ. ಫೋರ್ಡ್ ಕಂಪನಿಯ ಯಾವುದೇ ಕಾರು ಖರೀದಿಸುವ ಗ್ರಾಹಕರಿಗೆ 5 ಲಕ್ಷ ರೂಪಾಯಿ ಮಿಡ್‌ನೈಟ್ ಸರ್ಪ್ರೈಸ್ ಗೆಲ್ಲೋ ಅವಕಾಶ ನೀಡಲಾಗಿದೆ. ಈ ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ದೆಹಲಿ(ಡಿ.03): ಪ್ರತಿವರ್ಷದಂತೆ ಫೋರ್ಡ್ ಭಾರತದಾದ್ಯಂತ ತನ್ನ ಗ್ರಾಹಕರಿಗೆ ಡಿಸೆಂಬರ್ 4ರಿಂದ ಡಿಸೆಂಬರ್ 6, 2020ರವರೆಗೆ ತನ್ನ ವಿಶಿಷ್ಟ ಬೃಹತ್ ಮಾರಾಟ ಅಭಿಯಾನ `ಮಿಡ್‍ನೈಟ್ ಸಪ್ರ್ರೈಸ್’ ಘೋಷಿಸಿದೆ.
ಅಪರಿಮಿತ ಡೀಲ್‍ಗಳು ಮತ್ತು 5 ಲಕ್ಷ ರೂ.ವರೆಗೆ ನಿಶ್ಚಿತ ಉಡುಗೊರೆಗಳನ್ನು ಒದಗಿಸುವ ಮಿಡ್‍ನೈಟ್ ಸಪ್ರ್ರೈಸ್ ಫೋರ್ಡ್‍ನ ಇಡೀ ಉತ್ಪನ್ನಗಳ ವ್ಯಾಪ್ತಿಗೆ ಲಭ್ಯವಿದ್ದು ಅದರಲ್ಲಿ ಫೋರ್ಡ್ ಫಿಗೊ, ಫೋರ್ಡ್ ಆಸ್ಪೈರ್, ಫೋರ್ಡ್ ಫ್ರೀಸ್ಟೈಲ್, ಫೋರ್ಡ್ ಇಕೊಸ್ಪೋರ್ಟ್ ಮತ್ತು ಫೋರ್ಡ್ ಎಂಡೆವರ್ ಸೇರಿವೆ.
undefined
ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!
ಈ ಮೂರು ದಿನಗಳ ಅಭಿಯಾನದಲ್ಲಿ ಯಾವುದೇ ಫೋರ್ಡ್ ಕಾರುಗಳನ್ನು ಬುಕಿಂಗ್ ಮಾಡಲು ಬಯಸುವ ಎಲ್ಲ ಗ್ರಾಹಕರು ಡಿಜಿಟಲ್ ಸ್ಕ್ರಾಚ್ ಕಾರ್ಡ್ ಪಡೆಯುತ್ತಾರೆ, ಅದರಿಂದ ಅವರಿಗೆ ನಿಶ್ಚಿತ ಉಡುಗೊರೆ ದೊರೆಯುತ್ತದೆ. ಮಿಡ್‍ನೈಟ್ ಸಪ್ರ್ರೈಸ್ ಅವಧಿಯಲ್ಲಿ ಮಾಡಲಾಗುವ ಬುಕಿಂಗ್‍ಗಳಿಗೆ ನೀಡಲಾಗುವ ಉಡುಗೊರೆಗಳಲ್ಲಿ ಎಲ್‍ಇಡಿ ಟಿ.ವಿ.ಗಳು, ಡಿಶ್-ವಾಶರ್, ಏರ್ ಪ್ಯೂರಿಫೈಯರ್, ಮೈಕ್ರೊವೇವ್ ಓವನ್‍ಗಳು, ಅತ್ಯಾಧುನಿಕ ಜನರೇಷನ್ ಐಪ್ಯಾಡ್, ಐಫೋನ್ 11, ಬ್ರಾಂಡೆಡ್ ಬೈಸಿಕಲ್, ಫಿಟ್‍ನೆಸ್ ಸ್ಮಾರ್ಟ್‍ವಾಚ್‍ಗಳು, ರೂ.25000ವರೆಗೆ ಗಿಫ್ಟ್ ಕಾರ್ಡ್‍ಗಳಿಂದ 3ಗ್ರಾಂ ಮತ್ತು 5ಗ್ರಾಂ ಚಿನ್ನದ ನಾಣ್ಯಗಳು ಮತ್ತು 1 ಲಕ್ಷ ರೂ.ವರೆಗೆ ಗೋಲ್ಡ್ ವೋಚರ್ ಲಭ್ಯ. ಇದನ್ನು ಮತ್ತಷ್ಟು ಉತ್ಸಾಹಕರವಾಗಿಸುವ ನಿಟ್ಟಿನಲ್ಲಿ ಡಿಸೆಂಬರ್‍ನಲ್ಲಿ ಡೆಲಿವರಿಗಳನ್ನು ತೆಗೆದುಕೊಳ್ಳುವ ಗ್ರಾಹಕರು 5 ಲಕ್ಷ ರೂ. ಬಂಪರ್ ಬಹುಮಾನಕ್ಕೂ ಅರ್ಹತೆ ಪಡೆಯುತ್ತಾರೆ.
ನ್ಯೂ ಎಂಡವರ್! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್.
“ಮಿಡ್‍ನೈಟ್ ಸಪ್ರ್ರೈಸ್ ಮತ್ತೆ ತರಲು ಮತ್ತು ಅವರು ಕೊಳ್ಳುವ ಪ್ರತಿ ಫೋರ್ಡ್‍ನಿಂದ ಹೆಚ್ಚು ಪಡೆಯುವ ಅವಕಾಶ ಒದಗಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ” ಎಂದು ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್, ಸೇಲ್ಸ್ ಅಂಡ್ ಸರ್ವೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿನಯ್ ರೈನಾ ಹೇಳಿದರು.
“ಪ್ರಸ್ತುತ ಸಾಂಕ್ರಾಮಿಕ ಸನ್ನಿವೇಶವು ಹೊಸ ಫೋರ್ಡ್ ಹೊಂದುವ ಸ್ಪೂರ್ತಿಯನ್ನು ಮಂದಗೊಳಿಸಿದೆ, ನಾವು ಈ ಅಭಿಯಾನದ ಸಮಯದಲ್ಲಿ ಡಯಲ್-ಎ-ಫೋರ್ಡ್ ಟೋಲ್ ಫ್ರೀ ಸಂಖ್ಯೆ , ವಿಶೇಷವಾದ ಆನ್‍ಲೈನ್ ಬುಕಿಂಗ್ ಪೋರ್ಟಲ್ ಮೂಲಕ ವಾಹನ ಬುಕಿಂಗ್ ಮಾಡುವ ಸುರಕ್ಷತೆ ಮತ್ತು ಅನುಕೂಲವನ್ನು ಒದಗಿಸಿದ್ದೇವೆ ವಿನಯ್ ರೈನಾ ಹೇಳಿದ್ದಾರೆ.
ಈ ಅವಧಿಯಲ್ಲಿ ದೇಶಾದ್ಯಂತ ಫೋರ್ಡ್ ಡೀಲರ್‍ಶಿಪ್‍ಗಳು ಬೆಳಿಗ್ಗೆ 9ರಿಂದ ಮಧ್ಯರಾತ್ರಿಯವರೆಗೆ ತೆರೆದಿರುವ ಮೂಲಕ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಮಾಡಲು ಮತ್ತು ಫೋರ್ಡ್ ಬುಕ್ ಮಾಡಲು ಹೆಚ್ಚು ಅನುಕೂಲ ಕಲ್ಪಸಿವೆ.
ಫೋರ್ಡ್ ಕಾರುಗಳು ಮಾಲೀಕತ್ವದ ಮೌಲ್ಯದಲ್ಲಿ ಆಶ್ಚರ್ಯಕರವಾಗಿ ನಿರ್ವಹಣೆಯ ವೆಚ್ಚಗಳು ಮತ್ತು ಇಡೀ ಜೀವನಚಕ್ರದಾದ್ಯಂತ ಗಮನಾರ್ಹ ಉಳಿತಾಯದ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸುವುದನ್ನು ಮುಂದುವರಿಸಿದೆ. ಕಂಪನಿಯು ಈಗಾಗಲೇ ತನ್ನ ಗ್ರಾಹಕರ ವಿಶ್ವಾಸವನ್ನು ಹಲವಾರು ಆವಿಷ್ಕಾರಕ ಮತ್ತು ವಿನೂತನ ಬಗೆಯ ಉಪಕ್ರಮಗಳಾದ ಸರ್ವೀಸ್ ಪ್ರೈಸ್ ಕ್ಯಾಲ್ಕುಲೇಟರ್ ಮುಂತಾದವುಗಳ ಮೂಲಕ ಗಳಿಸಿದ್ದು ಅವರಿಗೆ ಅವರ ಕಾರಿನ ಸರ್ವೀಸ್ ಮತ್ತು ಬಿಡಿಭಾಗಗಳ ವೆಚ್ಚ ಡೀಲರ್‍ಶಿಪ್‍ಗೆ ಪ್ರವೇಶಿಸುವ ಮುನ್ನವೇ ತಿಳಿಯುವಂತೆ ಮಾಡಿದೆ.