ಬೆಂಗಳೂರು ಲಾಯರ್ ಹೊಸ ಐಡಿಯಾ; ಕಾರಿನ ಮೇಲೆ ಮಿನಿ ಗಾರ್ಡನ್!

By Web Desk  |  First Published Oct 8, 2019, 6:54 PM IST

ಗಾರ್ಡನ್ ಸಿಟಿ ಬೆಂಗಳೂರು ಹಿಂದಿನಿಂದ ಹಸಿರಾಗಿಲ್ಲ. ಬೆಂಗಳೂರನ್ನು ಮತ್ತೆ ಹಸಿರುಮಯ ಮಾಡಲು ಕರ್ನಾಟಕ ಹೈಕೋರ್ಟ್ ವಕೀಲರಾದ ಕೆ ಸುರೇಶ್ ಹೊಸ ಪ್ಲಾನ್ ಮಾಡಿದ್ದಾರೆ. ಇಷ್ಟೇ ಅಲ್ಲ ವಾಹನ ಮಾಲೀಕರು ಈ ಯೋಜನೆ ಜಾರಿ ಮಾಡಿದರೆ ಬೆಂಗಳೂರಿನ ಬಹುತೇಕ ಸಮಸ್ಯೆ ದೂರವಾಗಲಿದೆ ಎಂದಿದ್ದಾರೆ. ಸುರೇಶ್ ಹೊಸ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
 


ಬೆಂಗಳೂರು(ಅ.08):  ಮರಗಳ ಮಾರಣಹೋಮ, ಬೆಳೆಯುತ್ತಿರುವ ಕಾಂಕ್ರೀಟ್ ಕಾಡು, ಹೆಚ್ಚಾಗುತ್ತಿರುವ ವಾಹನ, ಮಾಲಿನ್ಯಗಳಿಂದ ಗಾರ್ಡನ್ ಸಿಟಿ ಬೆಂಗಳೂರು ಈಗ ಹಿಂದಿನಂತೆ ಕೂಲ್ ಆಗಿ ಉಳಿದಿಲ್ಲ. ಬೆಂಗಳೂರಿನಲ್ಲಿ ಓಡಾಡೋ ಜನರು ಉರಿಬಿಸಿಲಿನಿಂದ ಬಳಲುತ್ತಿದ್ದಾರೆ. ಕಳೆದ ಬೇಸಗೆಯಲ್ಲಿ ತಾಪಮಾನ ಹೆಚ್ಚಳದಿಂದ ಕಾರು ಮಾಲೀಕರು ಸೆಗಣಿ ಲೇಪಿಸಿ ಪ್ರಯಾಣ ಮಾಡಿದ ಘಟನೆ ನಡೆದಿದೆ. ಇದೀಗ ಬೆಂಗಳೂರಿನ ಲಾಯರ್ ತಮ್ಮ ಕಾರಿನ ಮೇಲೆ ಮಿನಿ ಗಾರ್ಡನ್ ನಿರ್ಮಿಸಿ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಮಾಲೀಕನ ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!

Latest Videos

undefined

ಕರ್ನಾಟಕ ಹೈಕೋರ್ಟ್‌ನಲ್ಲಿನ ಲಾಯರ್ ಕೆ ಸುರೇಶ್ ತಮ್ಮ ಟಾಟಾ ನ್ಯಾನೋ ಕಾರಿನ ಮೇಲೆ ಮಿನಿ ಗಾರ್ಡನ್  ನಿರ್ಮಿಸಿದ್ದಾರೆ. ಪರಿಸರದ ಮಹತ್ವ ಸಾರಿ ಹೇಳಲು ವಕೀಲರಾದ ಸುರೇಶ್ ಹೊಸ ಪ್ಲಾನ್ ಮಾಡಿದ್ದಾರೆ. ಬೆಂಗಳೂರಿಗೆ ಹಸಿರು ಕೊಡುಗೆ ನೀಡಲು ಮುಂದಾದ ಸುರೇಶ್, ತಮ್ಮ ಗೆಳೆಯರು ಹಾಗೂ ಸಂಬಂದಿಕರ ಬಳಿ ಈ ಕುರಿತು ಚರ್ಚಿಸಿದ್ದಾರೆ. ಆದರೆ ಸುರೇಶ್ ಯೋಜನೆ ಎಲ್ಲರಿಗೂ ನಗು ತರಿಸಿತ್ತು. ಇಷ್ಟೇ ಅಲ್ಲ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

ಪಟ್ಟು ಬಿಡುದ ಸುರೇಶ್ ಲಾಲ್ ಬಾಗ್ ಉದ್ಯಾನವನದ ಮಾಜಿ ತೋಟಗಾರ ಲಿಂಗಪ್ಪ ಅವರನ್ನು ಭೇಟಿಯಾಗಿ ತಮ್ಮ ಯೋಜನೆ ಕುರಿತು ವಿವರಿಸಿದ್ದಾರೆ. 2018ರಲ್ಲಿ ಈ ಯೋಜನೆ ಕುರಿತು ಲಿಂಗಪ್ಪ ಅವರಲ್ಲಿ ವಿವರಿಸಲಾಗಿತ್ತು. ತಮ್ಮ ಹೊಸ ಪ್ಲಾನ್‌ಗೆ ಸ್ಪಂದಿಸಿದ ಲಿಂಗಪ್ಪ, ನ್ಯಾನೋ ಕಾರಿನ ರೂಫ್‌ಟಾಪ್ ಮೇಲೆ ಸಣ್ಮ ಗಾರ್ಡನ್ ನಿರ್ಮಿಸಿಕೊಟ್ಟಿದ್ದಾರೆ.

ಇದೇ ರೀತಿ ಬೆಂಗಳೂರಿಗರು ತಮ್ಮ ವಾಹನದ ಮೇಲೆ ಮಿನಿ ಗಾರ್ಡನ್ ನಿರ್ಮಿಸಿದರೆ, ಸಂಪೂರ್ಣ ಬೆಂಗಳೂರು ಹಸಿರಾಗಲಿದೆ. ಇದಕ್ಕಾಗಿ ಕೆ ಸುರೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ವಿಶೇಷವಾಗಿ ಸಾರ್ವಜನಿಕ ವಾಹನಗಳಾದ ಬಸ್, ರೈಲುಗಳಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ಮಿನಿ ಗಾರ್ಡನ್ ಅಳವಡಿಸಿಕೊಂಡರೆ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಿಂತ ದೊಡ್ಡದಾದ ಗಾರ್ಡನ್ ನಿರ್ಮಾಣವಾಗಲಿದೆ. ಇದರಿಂದ ಬೆಂಗಳೂರೇ ಹಸೀಕರಣವಾಗಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ಕಿರಿಕಿರಿ: ಜಂಕ್ಷನ್ ಕ್ಲಿಯರ್‌ಗೆ ಕಮಿಷನರ್ ಸಲಹೆ ಕೇಳ್ಯಾರ್ ರೀ!

ಕಾರಿನ ಮೇಲಿನ ಸಣ್ಣ ಗಾರ್ಡನ್ ನಿರ್ವಹಣೆಗೆ ಪ್ರತಿ ದಿನ ಹೆಚ್ಚೆಂದರೆ 5 ನಿಮಿಷ ಸಾಕು. ತಿಂಗಳಿಂದ ಒಂದು ಬಾರಿ ಮಣ್ಮು ಹಾಗೂ ಸಾವಯವ ಗೊಬ್ಬರ ಹಾಕುತ್ತೇನೆ. ಮನೆಯಿಂದ ಕೋರ್ಟ್ ವರೆಗೆ ಪ್ರಯಾಣಿಸುವ ದಾರಿ ಮಧ್ಯ ನನ್ನ ಕಾರು ಹಲವರಿಗೆ ಆಕರ್ಷಣೆಯಾಗಿದೆ. ಹಲವು ಪರಿಸರ ಪ್ರೇಮಿಗಳು ಮಾಹಿತಿ ಕೇಳಿದ್ದಾರೆ. ಬೆಂಗಳೂರಿನಲ್ಲಿರು ಹಲವರಿಗೆ ಮಿನಿ ಗಾರ್ಡನ್ ಮಾಡಲು ಸ್ಥಳವಕಾಶವಿರುವುದಿಲ್ಲ. ಆದರೆ ತಮ್ಮ ಕಾರಿನಲ್ಲಿ ಈ ರೀತಿ ಮಾಡಿ ಪರಿಸರ ಉಳಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ. 
 

click me!