
ಸುದ್ದಿ ಮಾಡಿ ಬೆಳಗಾಗುವುದರೊಳಗೆ ಮನೆ ಬಾಗಿಲಿಗೆ ಔಷಧಿ: ಕುಟುಂಬದ ಅಂತರಾಳದ ಮಾತು ಹೀಗಿತ್ತು..!
ಕಿಡ್ನಿ ಕಸಿಮಾಡಿಕೊಂಡಿದ್ದ ಮಹಿಳೆ ಔಷಧಿಗಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಸೂಕ್ತ ಔಷಧಿ ಆಕೆಯ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ, (ಏ.11): ಕಿಡ್ನಿ ಕಸಿಮಾಡಿಕೊಂಡಿದ್ದ ಮಹಿಳೆ ಔಷಧಿಗಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಸೂಕ್ತ ಔಷಧಿ ಆಕೆಯ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾನವೀಯತೆ ಮೆರೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಕರೆ; ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಆದ್ರೆ, ಲಾಕ್‌ಡೌನ್‌ನಿಂದ ಔಷಧಿಗಾಗಿ ಪರದಾಡುತ್ತಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸದಲ್ಲದೇ ಸಿಎಂ ಮಾಧ್ಯಮ ಸಲಹೆಗಾರರ ಮುಖಾಂತರ ಯಡಿಯೂರಪ್ಪನವರ ಗಮನಕ್ಕೆ ತರಲಾಗಿತ್ತು.
ಇದರ ಬೆನ್ನಲ್ಲೇ ಸಿಎಂ ಡಿಸಿ ಮೂಲಕ ಬೆಳಗಾಗುವುದರೊಳಗೆ ಆ ಮನೆಗೆ ಔಷಧಿ ತಲುಪಿಸಿದ್ದಾರೆ. ಇನ್ನು ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕುಟುಂಬಸ್ಥರು, ಸುವರ್ಣ ನ್ಯೂಸ್ ಜತೆ ಪ್ರತಿಕ್ರಿಯಿಸಿದ್ದು ಹೀಗೆ