ನಾಡು ಕಂಡ ಮಹಾನ್ ಸಂತ, ಶ್ರೇಷ್ಠ ಮಹಾತ್ಮ ಪೇಜಾವರ ಶ್ರೀಗಳು ಅಸ್ತಂಗತರಾಗಿದ್ದು, ಹಿಂದೂ ಧರ್ಮ ಮಹಾನ್ ಪುರುಷನನ್ನು ಕಳೆದುಕೊಂಡಿದ್ದು ಇದಕ್ಕೆ ನಾಡಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಉಡುಪಿ [ಡಿ.29] ‘ ನಾಡಿನ ಯತಿ ಶ್ರೇಷ್ಠ ಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ದೈವಾದೀನರಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮೂಲಕ ಹಲವು ಗಣ್ಯರು ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ ನಾಡಿನ ಶ್ರೇಷ್ಟ ಯತಿಯೋರ್ವರನ್ನು ಕಳೆದುಕೊಂಡಿದ್ದೇವೆ. ಸದಾ ಸಮಾಜದ ಒಳಿತಿನ ಬಗ್ಗೆ ಕಾಳಜಿ ತೋರುತ್ತಿದ್ದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಹಿಂದೂ ಧರ್ಮಕ್ಕೆ ಸ್ಪೂರ್ತಿ ತುಂಬುತ್ತಿದ್ದ ಸೆಲೆಯಾಗಿದ್ದರು. ಇನ್ನು ಶ್ರೀಗಳ ನೆನಪೇ ನಮಗೆ ಬೆಳಕು ತೋರಬೇಕು ಎಂದಿದ್ದಾರೆ. 

Scroll to load tweet…
Scroll to load tweet…
Scroll to load tweet…

ಇನ್ನು ಶಿವಮೊಗ್ಗ ಸಂಸದರಾದ ಬಿವೈ ರಾಘವೇಂದ್ರ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಿದ್ದಾರೆ. 

ಜೆಡಿಎಸ್ ಮುಖಂಡರಾದ ಜಿಟಿ ದೇವೇಗೌಡ ಅವರೂ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮಹಾನ್ ಸಂತರನ್ನು ಕಳೆದುಕೊಂಡಿದ್ದೇವೆ ಎಂದರು. 

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಟ್ವೀಟ್ ಮಾಡಿದ್ದು, ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದ್ದಾರೆ. 

Scroll to load tweet…

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಯತಿ ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

Scroll to load tweet…

"

ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದು. ಗುರುಗಳ ಅಗಲಿಕೆ ಅನಾಥರನ್ನಾಗಿಸಿದೆ ಎಂದು ತಮ್ಮ ಸಂತಾಪ ಸೂಚಿಸಿದ್ದಾರೆ. 

Scroll to load tweet…
Scroll to load tweet…