ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್| ಮನೆಯಲ್ಲಿರಲು ತಯಾರಿಲ್ಲ ಜನ| ಜನರನ್ನು ನಿಯಂತ್ರಿಸೋದೆ ಪೊಲೀಸರಿಗೆ ತಲೆ ನೋವು| ಜನರ ಹಿಡಿದಿಇಡಲು ಪೊಲೀಸರ ಐಡಿಯಾ, ಕರೆತಂದ್ರು ಜಾನಿಯನ್ನ| ಅಷ್ಟಕ್ಕೂ ಈ ಜಾನಿ ಯಾರು?
ಹಸಿದವರಿಗೆ ಆಹಾರ ಕೊಟ್ಟ ಮೇಲೆಯೇ ಊಟ ಮಾಡೋ ಪೊಲೀಸ್ ಕುಟುಂಬ: ಪೇದೆಗೊಂದು ಸಲಾಂ..!
ಹೌದು ದೇಶದಾದ್ಯಂತ ಪೊಲೀಸರು ಭಿನ್ನ ವಿಭಿನ್ನ ಯತ್ನಗಳನ್ನು ನಡೆಸುತ್ತಿದ್ದಾರೆ. ಇತ್ತ ಕರ್ನಾಟಕ ಪೊಲೀಸರು ಪ್ಲ ಕಾರ್ಡ್ ನೀಡಿ, ಹಣೆಗೆ ಸೀಲ್ ಹಾಕಿ, ಬಸ್ಕಿ ಹೊಡೆಸಿ ಯತ್ನಿಸಿದ್ದರು. ಅದ್ಯಾವುದಕ್ಕೂ ಜಗ್ಗದಾಗ ಲಾಠಿ ಪ್ರಯೋಗಿಸಿದ್ದರು. ಅತ್ತ ಚೆನ್ನೈ ಪೊಲೀಸರು ಕೊರೋನಾ ವೈರಸ್‌ನಂತೆ ಕಾಣುವ ಹೆಲ್ಮೆಟ್ ಬಳಸಿದ್ದರು. ಮತ್ತೊಂದೆಡೆ ರಸ್ತೆಗಿಳಿಯುವವರಿಗೆ ಅರತಿಯನ್ನೂ ಬೆಳಗಿದ್ದರು. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಲಾಬಿ ನೀಡಿ ಸತ್ಕರಿಸಿದ್ದರು. ಹೀಗಿರುವಾಗ ಮಹಾರಾಷ್ಟ್ರ ಪೊಲೀಸರರೀಗ ವಿಭಿನ್ನ ಪ್ರಯೋಗ ನಡೆಸಿದ್ದಾರೆ.
Scroll to load tweet…
ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಚಿಕ್ಕಂದಿನಲ್ಲಿ ಹಾಡುತ್ತಿದ್ದ ಜಾನಿ ಜಾನಿ ಎಸ್ ಪಾಪಾ ಎಂಬ ಚಿಣ್ಣರ ಗೀತೆಗೆ ಕೊಂಚ ಟ್ವಿಸ್ಟ್ ಕೊಟ್ಟು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗಿದೆ. ಪೊಲೀಸರ ಈ ಮನವಿ ನೆಟ್ಟಿಗರ ಮನ ಗೆದ್ದಿದ್ದು ಭಾರೀ ವೈರಲ್ ಆಗಿದೆ. ಇನ್ನು ಈ ಗೀತೆ ಮೂಲಕ ಕೈ ಚೆನ್ನಾಗಿ ತೊಳೆಯುವ, ಸಂದೇಶಗಳನ್ನು ಕಣ್ಮುಚ್ಚಿ ಫಾರ್ವರ್ಡ್ ಮಾಡಬೇಡಿ ಹಾಗೂ ಹೊರಗೆ ಹೋಗದೆ ಮನೆಯಲ್ಲೇ ಸೇಫಾಗಿರಿ ಎಂಬ ಸಂದೇಶವನ್ನೂ ನೀಡಿದ್ದಾರೆ.ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
