ಕೇಜ್ರಿ ಗೆಲ್ಲಿಸಿದ್ದು ಪ್ರಶಾಂತ್‌ ಕಿಶೋರ್‌ ಸೀಕ್ರೆಟ್‌ ಫಾರ್ಮುಲಾ!| ಕೆಲಸ ಮಾಡಿತು ಪ್ರಶಾಂತ್‌ ಕಿಶೋರ್‌ ನೀಡಿದ್ದ ಸಲಹೆ

ನವದೆಹಲಿ[ಫೆ.12]: ಪ್ರಧಾನಿ ನರೇಂದ್ರ ಮೋದಿ ಜತೆ ಸಂಘರ್ಷಕ್ಕೆ ಇಳಿದಿದ್ದ ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ಇತ್ತೀಚೆಗೆ ತಣ್ಣಗಾಗಿ ಕೇವಲ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತ್ರ ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತಿದ್ದರು. ಇದೇ ಇವರ ಜಯಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

Add Asianetnews Kannada as a Preferred SourcegooglePreferred

ಆಪ್‌ಗೆ ಚುನಾವಣಾ ರಣನೀತಿ ರೂಪಿಸಲು ಸಲಹೆ ನೀಡಿದ್ದ ಚುನಾವಣಾ ರಣನೀತಿ ನಿರೂಪಕ ಪ್ರಶಾಂತ್‌ ಕಿಶೋರ್‌, ‘ಸಂಘರ್ಷದ ರಾಜಕೀಯ ಬಿಡಿ. ಇದರ ಬದಲು ನಿಮ್ಮನ್ನು ನೀವು ಅಭಿವೃದ್ಧಿ ಮನುಷ್ಯ ಬಿಂಬಿಸಿಕೊಳ್ಳಿ’ ಎಂದಿದ್ದರು ಎಂದು ಮೂಲಗಳು ತಿಳಿಸಿವೆ.

ದೇಶ ಗೆದ್ದ ಬಿಜೆಪಿಗೆ ದಿಲ್ಲಿ ಇನ್ನೂ ಮರೀಚಿಕೆ!

ಹೀಗಾಗಿ ಕೇಜ್ರಿವಾಲ್‌ ಇತ್ತೀಚೆಗೆ ದಿಲ್ಲಿಯಲ್ಲಿ ಉಚಿತ ಬಸ್‌ ಪ್ರಯಾಣ, ಸಿಸಿಟೀವಿ ಅಳವಡಿಕೆ, ಮೊಹಲ್ಲಾ ಕ್ಲಿನಿಕ್‌, ಶಾಲಾ ಅಭಿವೃದ್ಧಿ, ಉಚಿತ ನೀರು, ವಿದ್ಯುತ್‌- ಮುಂತಾದ ಅಭಿವೃದ್ಧಿ ವಿಷಯಗಳತ್ತ ಗಮನ ಹರಿಸಿದರು. ಇದು ಜಯಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ.

2014ರಲ್ಲಿ ಸ್ವತಃ ಮೋದಿ ಅವರ ಚುನಾವಣಾ ಪ್ರಚಾರ ರಣತಂತ್ರ ರೂಪಿಸಿದ್ದ ಪ್ರಶಾಂತ್‌ ಕಿಶೋರ್‌, ಬಳಿಕದ ವರ್ಷಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ವಿರೋಧ ಪಕ್ಷಗಳ ಜೊತೆಯಲ್ಲೇ ಜೈಜೋಡಿಸಿದ್ದಾರೆ.

ಭಾರತ ಮಾತೆಯ ಜಯ: ದೆಹಲಿ ಅಭಿವೃದ್ಧಿಗೆ ಕೇಜ್ರಿವಾಲ್ ಅಭಯ!