ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಏನೀ ವೀಡಿಯೋನ ಸತ್ಯಾಸತ್ಯತೆ?

ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ವಿಡಿಯೋಗಳಲ್ಲಿ ಹಣ್ಣು ಮಾರುವ ವ್ಯಕ್ತಿ, ಬಸ್ಕಿ ಹೊಡೆಯುತ್ತಾ, ‘ನನ್ನಿಂದ ತಪ್ಪಾಗಿದೆ. ನಾನು ಬಡವ, ನನಗೆ ಹೃದಯ ಸಮಸ್ಯೆ ಇದೆ’ ಎಂದು ಬೇಡಿಕೊಳ್ಳುವ ಮತ್ತು ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಿರುವ ವ್ಯಕ್ತಿ ಬಾಟಲಿಯಲ್ಲಿ ಮೂತ್ರ ಮಾಡಿ ಹಣ್ಣಿನ ಮೇಲೆ ಚಿಮುಕಿಸಿದ್ದೀಯ ಎಂದು ಹೇಳುವ ಧ್ವನಿ ಇದೆ. ಈ ವಿಡಿಯೋವನ್ನು ಬಿಜೆಪಿ ಮಾಧ್ಯಮ ವಕ್ತಾರ ರೋಹಿತ್‌ ಚಾಹಲ್‌ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೀಗ ವೈರಲ್‌ ಆಗುತ್ತಿದೆ.

Scroll to load tweet…

ಆದರೆ ವಿಡಿಯೋ ಹಿಂದಿನ ಸತ್ಯಾಸತ್ಯ ಬಯಲಿಗೆಳೆದು ಇದು ಕೋಮು ದ್ವೇಷ ಹರಡುವ ಸುಳ್ಳುಸುದ್ದಿ ಎನ್ನುವುದನ್ನು ಸಾಬೀತುಪಡಿಸಿದೆ. ವಿಡಿಯೋದಲ್ಲಿರುವ ‘ಬಿಜ್ನೋರ್‌’ ಎಂಬ ಧ್ವನಿಯ ಜಾಡು ಹಿಡಿದು ಅಲ್ಲಿನ ಪೊಲೀಸ್‌ ಇಲಾಖೆ ಸಂಪರ್ಕಿಸಿದಾಗ ವಾಸ್ತವ ಬಯಲಾಗಿದೆ.

Scroll to load tweet…
Scroll to load tweet…

ಏ.20 ರಂದು ಹಣ್ಣು ವ್ಯಾಪಾರಿಯೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸಿ, ಗಾಡಿಯಲ್ಲಿದ್ದ ನೀರಿನ ಬಾಟಲಿಯಿಂದ ಕೈ ತೊಳೆದುಕೊಂಡಿದ್ದಾರೆ. ಬಳಿಕ ಅದೇ ನೀರನ್ನು ಹಣ್ಣಿನ ಮೇಲೂ ಚಿಮುಕಿಸಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಹಣ್ಣಿನ ಮೇಲೆ ಚೆಲ್ಲಿದ್ದಾರೆ ಎಂದು ಆರೋಪ ಮಾಡಿದ್ದರು.

ಇದೇ ಕಾರಣದಿಂದ ಹಣ್ಣು ವ್ಯಾಪಾರಿಯನ್ನು ಮೊದಲು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಡಿಯೋವನ್ನು ಹರಿಬಿಟ್ಟು ಸುಳ್ಳುಸುದ್ದಿ ಹರಡಿದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.