Asianet Suvarna News Asianet Suvarna News

Bigg Boss season 10: ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ಗೆ 50 ಲಕ್ಷದ ಜೊತೆಗೆ ಆ 2 ಗಿಫ್ಟ್..!

ಎಲ್ಲರ ಮನಸಲ್ಲೂ ಒಂದೇ ವಿಚಾರ ಸದ್ಯಕ್ಕೆ ಬಿಗ್ ಬಾಸ್.ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು..? ಕಪ್ ಗೆಲ್ಲೋದ್ ಯಾರು ಅನ್ನೋ ಆಲೋಚನೆ ಒಂದಾದರೆ ಮತ್ತೊಂದ್ ಕಡೆ. ಕಪ್ ಗೆದ್ದೋರ್‌ಗೆ ಏನೆಲ್ಲ ಸಿಗುತ್ತೆ ಅನ್ನೋ ಲೆಕ್ಕಾಚಾರ. ಪ್ರತಿ ಬಾರಿಯಂತೆ ಈ ಬಾರಿಯೂ 50 ಲಕ್ಷ ಹಣ ಸಿಗೋದು ನಿಜ. ಜೊತೆಗೆ ಇನ್ನೂ 2 ದೊಡ್ಡ ಉಡುಗೊರೆಗಳು ಕೂಡ ಸಿಕ್ತಿವೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಸದ್ಯ ಆರು ಸ್ಪರ್ಧಿಗಳು ರೇಸ್‌ನಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರು ರನ್ನರ್ ಅಪ್ ಆಗಲಿದ್ದು ಮತ್ತೊಬ್ಬರು ಕಪ್ ಎತ್ತುತ್ತಾರೆ. ‘ಬಿಗ್ ಬಾಸ್’(Bigg Boss) ವಿನ್ನರ್‌ಗೆ(Winner) ಈ ಬಾರಿ ಬಂಪರ್ ಆಫರ್ ಸಿಕ್ಕಿದೆ. 50 ಲಕ್ಷ ರೂಪಾಯಿಯ ಜೊತೆಗೆ ಇನ್ನೂ ಎರಡು ಉಡುಗೊರೆ ನೀಡುವುದಾಗಿ ಸುದೀಪ್(Sudeep) ಈ ಮೊದಲೇ ಘೋಷಣೆ ಮಾಡಿದ್ದಾರೆ. ಅಷ್ಟೆ ಅಲ್ಲ ವಿನ್ನರ್ ಜೊತೆಗೆ ರನ್ನರ್ ಅಪ್‌ಗೂ ಬಾರೀ ಉಡುಗೊರೆಗಳಿವೆ. ಈ ಬಾರಿ ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು, ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ರನ್ನರ್ ಅಪ್‌ಗೂ ಹಣದ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ ಅನ್ನೋದು ವಿಶೇಷ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರು ಮಂದಿ ಉಳಿದುಕೊಂಡಿದ್ದಾರೆ. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಸ್ಪರ್ಧೆ ಮುಂದುವರಿದಿದೆ. ವಿನಯ್, ಕಾರ್ತಿಕ್, ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಟಾಪ್ ಐದರಲ್ಲಿ ಇರೋದು ಖಚಿತ ಎಂದು ಹೇಳಲಾಗುತ್ತಿದೆ. ನವರಿ 27 ಹಾಗೂ 28ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ.

ಇದನ್ನೂ ವೀಕ್ಷಿಸಿ:  Chikkanna: ಚಿಕ್ಕಣ್ಣನ ಉಪಾಧ್ಯಕ್ಷ ಯಾಕೆ ನೋಡಬೇಕು..? ಸಿನಿಮಾ ನೋಡಲು ಐದು ಕಾರಣಗಳು ಇಲ್ಲಿವೆ ನೋಡಿ..!

Video Top Stories