ಜಮೀರ್‌ ವಿಚಾರಣೆಗೆ ಮುನ್ನವೇ ಸಿಸಿಬಿ ಮುಂದೆ ಹಾಜರಾದ 'ಆಪ್ತ'!

ಡ್ರಗ್ಸ್ ಮಾಫಿಯಾ ತನಿಖೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಪ್ರಭಾವಿಗಳ ಹೆಸರು ಬಹಿರಂಗಗೊಳ್ಳುತ್ತಿದೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ರವರ ಆಪ್ತ ಮುಜಾಹಿದ್ ಪಾಷಾ ಸಿಸಿಬಿ ಕಚೇರಿಗೆ ತೆರಳಿದ್ದಾರೆ.

First Published Sep 12, 2020, 4:08 PM IST | Last Updated Sep 12, 2020, 4:22 PM IST

ಬೆಂಗಳೂರು(ಸೆ.12): ಡ್ರಗ್ಸ್ ಮಾಫಿಯಾ ತನಿಖೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಪ್ರಭಾವಿಗಳ ಹೆಸರು ಬಹಿರಂಗಗೊಳ್ಳುತ್ತಿದೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ರವರ ಆಪ್ತ ಮುಜಾಹಿದ್ ಪಾಷಾ ಸಿಸಿಬಿ ಕಚೇರಿಗೆ ತೆರಳಿದ್ದಾರೆ.

ಜಮೀರ್ ಆಪ್ತ ಸಿಸಿಬಿ ಪೊಲೀಸರಿಗೆ ಕೆಲ ದಾಖಲೆಗಳನ್ನೂ ತೋರಿಸಿದ್ದಾರೆ. ಭೇಟಿ ಸಂಬಂಧ ಪ್ರತಿಕ್ರಿಯಿಸಿರುವ ಮುಜಾಹಿದ್ ತಾನು ಸ್ವಯಂ ಪ್ರೇರಿತನಾಗಿ ಸಿಸಿಬಿ ಕಚೇರಿಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. 

ಇವರ ಭೇಟಿ ಬೆನ್ನಲ್ಲೇ ಆಪ್ತ ಮುಜಾಹಿದ್, ಜಮೀರ್ ವಿರುದ್ಧ ದಾಖಲೆಗಳನ್ನು ನೀಡಿದ್ದಾರೆಂಬ ಮಾತಗಳೂ ಜೋರಾಗಿವೆ.