Shubha Poonja: 'ಮೊಗ್ಗಿನ ಮನಸು' ಹುಡುಗಿ ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್

ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜ ದೀರ್ಘಕಾಲದ ಗೆಳೆಯ ಉದ್ಯಮಿ ಸುಮಂತ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಾ ಹಾಗೂ ಸುಮಂತ್ ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಮದುವೆಯ ವಿಡಿಯೋವನ್ನು ಶುಭಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Suvarna News  | Published: Jan 23, 2022, 1:34 PM IST

ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜ (Shubha Poonja) ದೀರ್ಘಕಾಲದ ಗೆಳೆಯ ಉದ್ಯಮಿ ಸುಮಂತ್ (Sumanth) ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಸುಮಂತ್ ಉದ್ಯಮಿಯಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆ ಕಾರ್ಯಕ್ರಮದಲ್ಲಿ ಶುಭಾ ಅವರನ್ನು ಭೇಟಿ ಆಗಿದ್ದು ಎನ್ನಲಾಗಿದೆ. ಶುಭಾ ಹಾಗೂ ಸುಮಂತ್ ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದರು. ಮಂಗಳೂರಿನ ಮಜಲಬೆಟ್ಟು ಬೀಡುವಿನಲ್ಲಿ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. 

ಮಗಳಿಗೆ ಅಆಇಈ ಹೇಳಿಕೊಡುತ್ತಿರುವ ಕೆಜಿಎಫ್ ನಟ Yash, ವಿಡಿಯೋ ವೈರಲ್!

ಇದೀಗ ಮದುವೆಯ ವಿಡಿಯೋವನ್ನು (Marriage Video) ಶುಭಾ ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಶುಭಾ ಮದುವೆಯಲ್ಲಿ ಬಿಗ್ ಬಾಸ್ ವಿನ್ನರ್​ ಮಂಜು ಪಾವಗಡ ಸಖತ್​ ಆಗಿ ಮಿಂಚಿದ್ದಾರೆ. ಹಾಗಾದರೆ, ಶುಭಾ ಮದುವೆ ಹೇಗಿತ್ತು ಎನ್ನುವುದು ವಿಡಿಯೋದಲ್ಲಿದೆ ನೋಡಿ. ಇನ್ನು ಬಿಗ್ ಬಾಸ್‌ ಸೀಸನ್‌ 8 ರಿಂದ ಹೊರ ಬಂದಾಗಿನಿಂದಲೂ ಶುಭಾ ಮದುವೆ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದರು. ಡಿಸೆಂಬರ್‌ ತಿಂಗಳಲ್ಲಿ ದಿನಾಂಕವೂ ಫಿಕ್ಸ್ ಮಾಡಿದ್ದರು. ಆದರೆ ಎಲ್ಲರಿಗೂ ಸರ್ಪ್ರೈಸ್‌ ಕೊಟ್ಟು, ಹೊಸ ವರ್ಷದ ಮೊದಲ ವಾರದಲ್ಲಿಯೇ ಹಸೆಮಣೆ ಏರಿದ್ದಾರೆ. ಹಲವು ವರ್ಷಗಳಿಂದ ಸುಮಂತ್ ಮತ್ತು ಶುಭಾ ಪೂಂಜಾ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Read More...