Puneetha Parva; ಅದ್ದೂರಿ ಸಮಾರಂಭಕ್ಕೆ ವೇದಿಕೆ ಸಿದ್ಧ, ಹೇಗಿದೆ ತಯಾರಿ ನೋಡಿ?
ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್ ಅದ್ದೂರಿ ಸಮಾರಂಭಕ್ಕೆ ಸಜ್ಜಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್ ಅದ್ದೂರಿ ಸಮಾರಂಭಕ್ಕೆ ಸಜ್ಜಾಗಿದೆ. ಕಳೆದ ಒಂದು ವಾರದಿಂದನೇ ತಯಾರಿ ನಡೆಯುತ್ತಿದೆ. ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಮುಂದೆ ನಿಂತು ಎಲ್ಲಾ ಸಿದ್ಧತೆ ಮಾಡಿಸುತ್ತಿದ್ದಾರೆ. ಇಂದು (ಅಕ್ಟೋಬರ್ 21) ನಡೆಯುವ ಅದ್ದೂರಿ ಸಮಾರಂಭಕ್ಕೆ ಸೌತ್ ಸಿನಿರಂಗದ ಅನೇಕ ಗಣ್ಯರು ಹಾಜರಾಗುತ್ತಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸ್ಟಾರ್ ಗಂಧದ ಗುಡಿ ಈವೆಂಟ್ ನಲ್ಲಿ ಭಾಗಿಯಾಗುತ್ತಿದ್ದಾರೆ.