ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಇದು ಥ್ರಿಲ್ಲಿಂಗ್ ನ್ಯೂಸ್! ಅಬುದಾಬಿ ಫ್ಲೈಟ್ ಹತ್ತಿ ಹೊರಟ ಧ್ರುವನ 'ಕೆಡಿ'!

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ವರ್ಷ ಎರಡು ಬಿಗ್ ಸರ್ಪ್ರೈಸ್‌ಗಳು ಕಾದಿವೆ. ಫಾರ್ ದಿ ಫಸ್ಟ್ ಟೈಂ ಧ್ರುವನ ಎರಡೂ ಸಿನಿಮಾಗಳು ಒಂದೇ ವರ್ಷದಲ್ಲಿ ಬಿಡುಗಡೆ ಆಗುತ್ತಿವೆ. ಒಂದು ಮಾರ್ಟಿನ್ ಸಿನಿಮಾ ಆದ್ರೆ ಮತ್ತೊಂದು ಕೆಡಿ. ಮಾರ್ಟಿನ್ ಸಿನಿಮಾ ಅಕ್ಟೋಬರ್ 11 ರಂದು ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ರಿಲೀಸ್ ಆಗಲಿದೆ. 

First Published Jul 15, 2024, 11:04 AM IST | Last Updated Jul 15, 2024, 11:04 AM IST

ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ (Martin movie) ರಿಲೀಸ್ ಆಗುತ್ತೆ. ಆದ್ರೆ ಅದಕ್ಕೂ ಮೊದಲೇ ಧ್ರುವ ಸರ್ಜಾ(Dhruva sarja) ಫ್ಯಾನ್ಸ್‌ಗೆ ಮತ್ತೊಂದು ಥ್ರಿಲ್ಲಿಂಗ್ ಸುದ್ದಿ ಸಿಗುತ್ತಿದೆ. ಆಕ್ಷನ್ ಪ್ರಿನ್ಸ್ ಅಬುದಾಬಿ ಫ್ಲೈಟ್ ಹತ್ತಲಿದ್ದು, ಧ್ರುವ ನಟನೆಯ ಕೆಡಿ(KD) ಅಬುದಾಬಿಯಲ್ಲಿ ದರ್ಬಾರ್ ಮಾಡಲಿದೆ. ದಿ ಶೋ ಮ್ಯಾನ್ ಜೋಗಿ ನಿರ್ದೇಶನದ ಕೆಡಿ ಸಿನಿಮಾ ಡಿಸೆಂಬರ್ನಲ್ಲಿ ತೆರೆ ಮೇಲೆ ಮರೋದು ನಿಕ್ಕಿ ಆಗಿದೆ. ಇದೀಗ ಕೆಡಿ ಟೀಂ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದೆ. ಅದು ಕೆಡಿ ಟ್ರೈಲರ್(KD Trailer) ವಿಚಾರ. ಕೆಡಿ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಏನಾದ್ರು ಮಾಡಿದ್ರೆ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಸುದ್ದಿ ಆಗ್ಬೇಕು ಅಂತ ಪ್ಲಾನ್ ಮಾಡಿರೋ ಕೆಡಿ ಟೀಂ ಈಗ ಟ್ರೈಲರ್ ರಿಲೀಸ್ ಮಾಡೋ ವಿಷಯಕ್ಕೆ ಧ್ರುವ ಫ್ಯಾನ್ಸ್ ಕಾಲರ್ ಎತ್ತುವಂತೆ ಮಾಡುತ್ತಿದೆ. ಯಾಕಂದ್ರೆ ಕೆಡಿ ಟ್ರೈಲರ್ ರಿಲೀಸ್ ಆಗುತ್ತಿರೋದು ಅಬುದಾಬಿಯಲ್ಲಿ. ಕೆಡಿ ಟೀಸರ್ ಬಂದಾಗಿದೆ. ಟೀಸರ್ ನೋಡಿದವರಿಗೆ ಕೆಡಿ ಮೇಲೆ ಒಂದು ಭರವಸೆ ಹುಟ್ಟಿದೆ. ಈಗ ಕೆಡಿ ಸ್ಪೆಷಲ್ ಟ್ರೈಲರ್ ನೋಡೋ ಟೈಂ. ಟ್ರೈಲರ್ ಬಿಡುಗಡೆಗೆ ಡೇಟ್ ಮತ್ತು ಸ್ಥಳ ನಿಗಧಿ ಆಗಿದೆ. ಸೆಪ್ಟೆಂಬರ್ 6 ರಂದು ಅಬುದಾಬಿಯಲ್ಲಿ(Abu Dhabi) ಟ್ರೈಲರ್ ರಿಲೀಸ್ ಆಗುತ್ತೆ. ಈ ಭಾರಿ ದೇಶದ ಸೆಲೆಬ್ರಿಟಿಗಳೆಲ್ಲಾ ಒಂದೇ ವೇದಿಕೆಯಲ್ಲಿ ಸೇರೋ ಅದ್ಧೂರಿ ಐಫಾ  ಕಾರ್ಯಕ್ರಮ ಅಬುದಾಬಿಯಲ್ಲಿ ನಡೆಯುತ್ತಿದೆ. ಈ ಐಫಾ ಉತ್ಸವದಲ್ಲಿ ಕೆಡಿ ಟ್ರೈಲರ್ ರಿಲೀಸ್ ಆಗಲಿದೆ. ಈ ಮೂಲಕ ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ಅನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲೇ ರಿಲೀಸ್ ಮಾಡಲಿದೆ ಕೆಡಿ ಟೀಂ. 

ಇದನ್ನೂ ವೀಕ್ಷಿಸಿ:  ಶ್ರೀಮಂತ ನಟರ ಪಟ್ಟಿ ಸೇರಿದ ಬಾದ್ ಷಾ ಕಿಚ್ಚ ಸುದೀಪ್ ! ಅಭಿನಯ ಚಕ್ರವರ್ತಿ ಬಳಿ ಇರೋ ಒಟ್ಟು ಆಸ್ತಿ ಎಷ್ಟು ಕೋಟಿ ?

Video Top Stories