Asianet Suvarna News Asianet Suvarna News

ಸಿದ್ದರಾಮಯ್ಯ ಸರ್ಕಾರಕ್ಕೆ ಬಂಡೆಯ ಶ್ರೀರಕ್ಷೆ, ದಳಪತಿ-ಕಮಲಾಧಿಪತಿಗಳಿಗೆ ಬಿಗ್ ಶಾಕ್ ಕೊಟ್ಟ ಸಿಎಂ-ಡಿಸಿಎಂ?

ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ. ಈ ಇಬ್ಬರ ನಡುವೆ ಆರಂಭವಾಗಿರೋ ಮೈಸೂರು ಮಹಾಯುದ್ಧ, ಮೂರೂ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿ, ಸತ್ವ ಪರೀಕ್ಷೆಯಾಗಿ ಬದಲಾಗಿದೆ. ಅದು ಹೇಗೆ ಅನ್ನೋದು ಗೊತ್ತಾಗಬೇಕಿದ್ರೆ, ನೀವು ಈ ರಿಪೋರ್ಟ್ ನೋಡ್ಲೇಬೇಕು..

First Published Aug 10, 2024, 1:18 PM IST | Last Updated Aug 10, 2024, 1:17 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ ಶಿವಕುಮಾರ್ ಕಡೆಯಿಂದ ಬಂಡೆಯಂಥಾ ಕವಚ ಸಿಕ್ಕಂತಾಗಿದೆ. ಈ ಇಬ್ಬರೂ ಅತಿರಥರು ಸೇರಿ, ಎದುರು ತಿರುಗಿರೋ ದೋಸ್ತಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ದೋಸ್ತಿ ಪಾಳಯದ ಪಾದಯಾತ್ರೆ ಅಸ್ತ್ರಕ್ಕೆ. ಸಮಾವೇಶ ಅನ್ನೋ ಪ್ರತ್ಯಸ್ತ್ರ ಹೂಡಿದ್ದಾರೆ. ಈ ಎರಡೂ ಉಭಯ ಪಡೆಗಳ ಅಟ್ಟಹಾಸಕ್ಕೆ ಮೈಸೂರು ರಣಾಂಗಣವಾಗಿ ಬದಲಾಗಿದೆ. ಅಂದ ಹಾಗೆ, ಕಮಲದಳದ ಮೇಲೆ ನಡೆದಿರೋ ಹಸ್ತ  ಪ್ರಯೋಗದಲ್ಲಿ ಗೆಲ್ಲೋದ್ಯಾರು?

Video Top Stories