ಕೋರ್ಟ್‌ ಆವರಣದಲ್ಲೆ ಹತ್ಯೆಗೆ ನಡೆದಿತ್ತು ಡೆಡ್ಲಿ ಪ್ಲಾನ್: ಬೆಚ್ಚಿ ಬೀಳಿಸಿದೆ ರೌಡಿ ಶೀಟರ್‌ ಹಾಕಿದ್ದ ಹತ್ಯೆ ಸ್ಕೆಚ್..!

ಹೈದರ್‌ ಹಂತಕರನ್ನೆ ಮುಗಿಸೋದಕ್ಕೆ ಗೆಳೆಯನ ಸ್ಕೆಚ್..!
ಖಾಕಿ ಕೈಗೆ ತಗಲಾಕಿಕೊಂಡು ಇಡೀ‌ ಪ್ಲ್ಯಾನೇ ಫ್ಲಾಪ್..!
ಪ್ಲ್ಯಾನ್‌ ಎಕ್ಸಿಕ್ಯೂಟ್‌ಗೂ ಮುನ್ನವೇ ಲೀಕ್‌ ಆಯ್ತು ವಿಡಿಯೋ

First Published Jun 16, 2023, 11:25 AM IST | Last Updated Jun 16, 2023, 11:25 AM IST

ವಿಜಯಪುರ ಜಿಲ್ಲೆ ಅಂದಾಕ್ಷಣ ನಿಮಗೆಲ್ಲ ನೆನಪಿಗೆ ಬರೋದು ಭೀಮಾತೀರದ ರಕ್ತಚರಿತ್ರೆ. ಇಲ್ಲಿ ನಡೆಯೋ ಗ್ಯಾಂಗ್‌ ವಾರ್ ಗಳಲ್ಲಿ ಲಾಂಗ್‌-ಮಚ್ಚುಗಳಿಗಿಂತ ಕಂಟ್ರಿಮೇಡ್ ಗನ್‌ಗಳಿಂದ ಹಾರುವ ಗುಂಡುಗಳೆ ಮಾತನಾಡೋದು ಹೆಚ್ಚು. ಕ್ರೈಂ ಕೃತ್ಯಗಳಿಂದಲೇ ಕುಖ್ಯಾತಿ ಪಡೆದಿರುವ ವಿಜಯಪುರದಲ್ಲಿ ನಡೆಯಬಹುದಾಗಿದ್ದ ಮತ್ತೊಂದು ಅನಾಹುತವನ್ನ ಪೊಲೀಸರು ತಡೆದಿದ್ದಾರೆ. ಹಂತಕ ಬಾಗಪ್ಪನ ಮೇಲೆ ಕೋರ್ಟ್‌ ಆವರಣದಲ್ಲಿ ನಡೆದಿದ್ದ ಶೂಟೌಟ್‌ ರೀತಿಯಲ್ಲೆ ರೆಡಿಯಾಗಿದ್ದ ಖತರ್ನಾಕ್‌ ಸ್ಕೆಚ್‌ ಕೂದಲೆಳೆಯಲ್ಲೆ ಮಿಸ್‌ ಆಗಿದೆ. ಕ್ರೈಂಗಳನ್ನ ಮಾಡುವಲ್ಲಿ  ಪಳಗಿದವರು, ಡೆಡ್ಲಿ ಹಂತಕರು ತಾವು ನಡೆಸೋ ಕ್ರೈಂಗೂ ಮುನ್ನವೇ ಒಂದು ಸ್ಕೆಚ್‌ ಮಾಡಿಕೊಂಡಿರ್ತಾರೆ. ಇದೆ ರೀತಿ ಹೇಗೆಲ್ಲ ಕೃತ್ಯ ಎಸಗಬೇಕು ಅನ್ನೋ ಪಕ್ಕಾ ಪ್ಲಾನ್‌ ಮಾಡಿಕೊಂಡಿರ್ತಾರೆ. ಹಾಗೇ ಹತ್ಯೆಯಾದ ಡಾನ್‌ ಹೈದರ್‌ ನದಾಫ್‌ ನ ಖಾಸಾ ಗೆಳೆಯ ಗುಂಡ್ಯಾ ಸಹ ಇಂಥದ್ದೆ ಒಂದು ಪ್ಲಾನ್‌ ಹಾಕಿಕೊಂಡಿದ್ದ. ಹೈದರ್‌ ಎದೆಗೆ ಬುಲೆಟ್‌ ನುಗ್ಗಿಸಿ ಹತ್ಯೆ ಮಾಡಿದ್ದ ಶೇಖ್‌ ಮೋದಿ, ವಕೀಲ ಖಾದ್ರಿಯನ್ನ ಮುಗಿಸೋಕೆ ಪ್ಲಾನ್‌ ಮಾಡಿಕೊಂಡಿದ್ದ. ಅದ್ರಲ್ಲು ಹಂತಕರು ಕೋರ್ಟ್‌ ಗೆ ಹಾಜರಾಗಲು ಬಂದಾಗಲೇ ಕೆಲಸ ಮುಗಿಸಿ ಬಿಡೋ ನಿರ್ಧಾರಕ್ಕೆ ಬಂದಿದ್ದ. ಈ ಬಗ್ಗೆ ಒಂದು ವಿಡಿಯೋ ಸಹ ಮಾಡಿಟ್ಟುಕೊಂಡಿದ್ದ ಈ ಗುಂಡ್ಯಾ.

ಇದನ್ನೂ ವೀಕ್ಷಿಸಿ: 30 ದಿನದಲ್ಲಿ ಜಾರಿಯಾಗುತ್ತಾ ನೂತನ ಕಾನೂನು!?: ಏನಿದು ಯುಸಿಸಿ..? ನೀವೂ ಹೇಳಬಹುದಾ ನಿರ್ಧಾರ..?

Read More...