ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ನಂತರ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರನೇ ದಿನದ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲು ಅಧಿಕಾರಿಗಳು ದರ್ಶನ್ ಮತ್ತು ಅವರ ತಂಡದ ಮೇಲೆ ಹದ್ದಿನ ಕಣ್ಣಿಟ್ಟಿದ್ದು,
- Home
- News
- State
- Karnataka News Live: ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿ ಮೂರನೇ ದಿನ, ಡೆವಿಲ್‌ಗೆ ಸ್ಟ್ರಿಕ್ಟ್ ರೂಲ್ಸ್, ಟಿವಿ ಇಲ್ಲ, ಓದಬೇಕು, ಇಲ್ಲವೇ ಖಾಲಿ ಕೊಠಡಿಯಲ್ಲಿ ಕೂರಬೇಕು
Karnataka News Live: ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿ ಮೂರನೇ ದಿನ, ಡೆವಿಲ್‌ಗೆ ಸ್ಟ್ರಿಕ್ಟ್ ರೂಲ್ಸ್, ಟಿವಿ ಇಲ್ಲ, ಓದಬೇಕು, ಇಲ್ಲವೇ ಖಾಲಿ ಕೊಠಡಿಯಲ್ಲಿ ಕೂರಬೇಕು

ಬೆಂಗಳೂರು: ಸೋಮವಾರ ಉತ್ಖನನ ಕಾರ್ಯ ಮುಂದುವರಿಕೆ ಕುರಿತು ಎಸ್ಐಟಿ ಯಾವುದೇ ಮಾಹಿತಿ ನೀಡಿಲ್ಲ. ಇದು ಉತ್ಖನನಕ್ಕೆ ಬ್ರೇಕ್ ಬಿದ್ದಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.ಈ ನಡುವೆ ಅಸ್ಥಿ ಪತ್ತೆಗಾಗಿ ಗುಂಡಿ ಅಗೆದ ಕಾರ್ಮಿಕರನ್ನು ಎಸ್ಐಟಿ ಅಧಿಕಾರಿಗಳು ಠಾಣೆಗೆ ಕರೆಸಿಕೊಂಡು ಅವರಿಂದ ದಾಖಲೆ ಸಂಗ್ರಹಿಸಿದ್ದಾರೆ. ಜೊತೆಗೆ ದೂರುದಾರನನ್ನೂ 4 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಶಾಪದಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸರ್ವನಾಶ ಆಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಮತಗಳ್ಳತನ (ವೋಟ್ ಚೋರಿ) ದ ಕುರಿತಂತೆ ಜನರಲ್ಲಿ ಅರಿವು ಮೂಡಿ ಸುವ ಉದ್ದೇಶದೊಂದಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ನೇತೃತ್ವ ದಲ್ಲಿ ಸ್ಟಾಪ್ ವೋಟ್ ಚೋರಿ ಸ್ಟಿಕ್ಕರ್ ಅಭಿಯಾನ ನಡೆಸಿದರು. ಈ ಮೂಲಕ ಕಾಂಗ್ರೆಸ್ ವಿನೂತನ ಅಭಿಯಾನವನ್ನು ಆರಂಭಿಸಿದೆ. ಮತ್ತೊಂದೆಡೆ ಮತಪಟ್ಟಿ ದೋಷ ಸರಿಪಡಿಸಲು ಸಿದ್ಧ ಎಂದು ಚುನಾವಣಾ ಆಯೋಗ ಹೇಳಿಕೆಯನ್ನು ನೀಡಿದೆ.
Karnataka News Live 17 August 2025ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿ ಮೂರನೇ ದಿನ, ಡೆವಿಲ್‌ಗೆ ಸ್ಟ್ರಿಕ್ಟ್ ರೂಲ್ಸ್, ಟಿವಿ ಇಲ್ಲ, ಓದಬೇಕು, ಇಲ್ಲವೇ ಖಾಲಿ ಕೊಠಡಿಯಲ್ಲಿ ಕೂರಬೇಕು
Karnataka News Live 17 August 2025ಕರ್ನಾಟಕ ಮಳೆ ಆರ್ಭಟ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ 5 ಜಿಲ್ಲೆಗಳು!
ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ ಶುರುವಾಗಲಿದ್ದು, 5 ಜಿಲ್ಲೆಗಳಿಗೆ ರೆಡ್, 6 ಜಿಲ್ಲೆಗಳು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಯಾವ ಜಿಲ್ಲೆಗಳು ಎಂಬ ಮಾಹಿತಿ ಇಲ್ಲಿದೆ ನೋಡಿ.
Karnataka News Live 17 August 2025ಸೂಟ್‌ಕೇಸ್‌ಗೆ ₹30 ಶುಲ್ಕ ಪಾವತಿಸಿದ ಪ್ರಯಾಣಿಕ; ಬೆಂಗಳೂರು ಜನ ಮೆಟ್ರೋ ಬಳಸೋದನ್ನೇ ಬಿಟ್ಟುಬಿಡ್ತಾರೆ ಎಂದಿದ್ಯಾಕೆ?
ಬೆಂಗಳೂರು ಮೆಟ್ರೋದಲ್ಲಿ ಹೆಚ್ಚುವರಿ ಲಗೇಜ್‌ಗೆ ₹30 ಶುಲ್ಕ ವಿಧಿಸಿರುವುದನ್ನು ಪ್ರಯಾಣಿಕ ಖಂಡಿಸಿದ್ದಾರೆ. ಈಗಾಗಲೇ ದುಬಾರಿ ಮೆಟ್ರೋ ಶುಲ್ಕದ ಜೊತೆಗೆ ಹೆಚ್ಚುವರಿ ಹೊರೆ ಹೇರುವುದು ಸರಿಯಲ್ಲ ಎಂಬ ವಾದವಿದೆ. ಲಗೇಜ್ ನೀತಿಯ ಅಸ್ಪಷ್ಟತೆ, ಸ್ಕ್ಯಾನರ್ ಗಾತ್ರ ಮಿತಿ, ತೂಕ ಮಿತಿ ಬಗ್ಗೆ ಚರ್ಚೆ ನಡೆಯುತ್ತಿದೆ.
Karnataka News Live 17 August 2025ಮೋನಿಕಾ ಮೋನಿಕಾ..ಕೂಲಿ ಸಿನಿಮಾ ಮೂಲಕ ಅಬ್ಬರಿಸಿದ ಸೌಬಿನ್ ಹೊಸ BMW ಕಾರು ಖರೀದಿ
ಮೋನಿಕಾ ಮೋನಿಕಾ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ 'ಕೂಲಿ ಸಿನಿಮಾ ನಟ ಸೌಬಿನ್ ಸಾಹೀರ್ ಇದೀಗ ಹೊಚ್ಚ ಹೊಸ ದುಬಾರಿ ಕಾರುು ಖರೀದಿಸಿದ್ದಾರೆ.
Karnataka News Live 17 August 2025ಅಟೋ ಹೆಚ್ಚು ಚಾರ್ಜ್ ಮಾಡುತ್ತಿದೆಯಾ? ಬೆಂಗ್ಳೂರು ಟೆಕ್ಕಿಗಳ ಮೀಟರ್ ಹಾಕಿ ಆ್ಯಪ್‌ನಲ್ಲಿ ಚೆಕ್ ಮಾಡಿ
ಆ್ಯಪ್ ಆಧಾರಿತ ಆಟೋ ರಿಕ್ಷಾ ಸೇವೆ ಪಡೆಯುವಾಗ ಹೆಚ್ಚುವರಿ ಚಾರ್ಜ್ ಮಾಡಿದ ಅನುಮಾನ ಕಾಡುತ್ತಿದೆಯಾ? ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗಿ ಬಂದಿದೆಯಾ? ಇದೀಗ ಬೆಂಗಳೂರಿನ ಟೆಕ್ಕಿಗಳಿಬ್ಬರು ಮೀಟರ್ ಹಾಕಿ ಸಾಫ್ಟ್‌ವೇರ್ ಅಭಿವದ್ಧಿಪಡಿಸಿದ್ದಾರೆ. ಇದು ನಿಖರ ದರ ತಿಳಿಸುತ್ತದೆ.
Karnataka News Live 17 August 2025ಮೆತ್ತನೆಯ ಹಾಗೂ ಎಣ್ಣೆ ಹೀರಿಕೊಳ್ಳದಂತೆ ಗರಿ-ಗರಿಯಾದ ಪೂರಿ ಮಾಡೋದು ಹೇಗೆ?
ಪೂರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ಆದ್ರೆ ಪೂರಿ ಸರಿಯಾಗಿ ಉಬ್ಬಲ್ಲ, ಜಾಸ್ತಿ ಎಣ್ಣೆ ಹೀರಿಕೊಳ್ಳುತ್ತೆ ಅಂತ ತಲೆಕೆಡಿಸಿಕೊಳ್ಳುವವರೇ ಜಾಸ್ತಿ. ಮೆತ್ತನೆಯ, ಕಡಿಮೆ ಎಣ್ಣೆಯ ಪೂರಿ ಮಾಡೋದು ಹೇಗೆ ಅಂತ ಈಗ ನೋಡೋಣ.
Karnataka News Live 17 August 2025Best Indian Movies - ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಅತ್ಯುತ್ತಮ ಸಿನಿಮಾಗಳಿವು! ಅದರಲ್ಲಿ ಕನ್ನಡದ್ದೆಷ್ಟು?
ಈ ಕೆಳಗಿನ ಹದಿನೈದು ಸಿನಿಮಾಗಳು ಭಾರತೀಯ ಚಿತ್ರರಂಗಕ್ಕೆ ಹೊಸ ಮೆರುಗು, ಚೈತನ್ಯ ನೀಡಿವೆ. ಅವು ಯಾವುವು?
Karnataka News Live 17 August 2025ಕರ್ನಾಟಕಕ್ಕೆ ಭಾರೀ ಮಳೆ; ಆರೆಂಜ್ ಅಲರ್ಟ್ ಇರುವ ಮತ್ತೆರಡು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ!
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಹಾಗೂ ಆಲೂರು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ತಗ್ಗು ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
Karnataka News Live 17 August 2025ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ, ಯಾರು ಈ ಸಿಪಿ ರಾಧಾಕೃಷ್ಣನ್?
ಉಪರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಭ್ಯರ್ಥಿ ಘೋಷಿಸಿದೆ. ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಸಿಪಿ ರಾಧಾಕೃಷ್ಣನ್ ಹೆಸರನ್ನು ಎನ್‌ಡಿಎ ಘೋಷಿಸಿದೆ
Karnataka News Live 17 August 2025ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ಕೊಹ್ಲಿ ಅನುಷ್ಕಾ ದಂಪತಿ, ವಿದೇಶದಲ್ಲಿ ಸೆಟ್ಲ್
ಟಿ20, ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಪತ್ನಿ ಹಾಗೂ ಮಕ್ಕಳ ಜೊತೆ ಲಂಡನ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಕೊಹ್ಲಿ ಭಾರತಕ್ಕೆ ಮರಳುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಇದೀಗ ಈ ಜೋಡಿ ಲಂಡನ್ ಬೀದಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
Karnataka News Live 17 August 2025ಕರ್ನಾಟಕ ಮಳೆ ಅಬ್ಬರ - ಶಾಲಾ, ಕಾಲೇಜುಗಳಿಗೆ 2 ದಿನ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ
ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳಲ್ಲಿ ಆ.18 ಮತ್ತು ಆ.10 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ರಜೆ ಘೋಷಣೆಯಾಗಿದೆ. ಶೃಂಗೇರಿ ಜಲಾವೃತಗೊಂಡಿದೆ. 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.
Karnataka News Live 17 August 2025ಡಿವೋರ್ಸ್ ಆದ್ರೇನು, ಬಾಯ್‌ಫ್ರೆಂಡ್ ಕೈಕೊಟ್ರೇನು? ನಾನಿನ್ನೂ...ಎನ್ನುತ್ತಲೇ ಶಾಕಿಂಗ್ ಹೇಳಿಕೆ ಕೊಟ್ಟ ಮಲೈಕಾ!
ಅರ್ಬಾಜ್ ಖಾನ್ರಿಂದ ಡಿವೋರ್ಸ್ ಪಡೆದು, ಅರ್ಜುನ್ ಕಪೂರ್ ಜೊತೆಗಿನ ಸುದೀರ್ಘ ರಿಲೇಷನ್ ಬ್ರೇಕ್ ಅಪ್ ಮಾಡಿಕೊಂಡ ಬಳಿಕವೂ ಪ್ರಣಯದ ಬಗ್ಗೆ ನಟಿ ಮಲೈಕಾ ಅರೋರಾ ಹೇಳಿದ್ದೇನು?
Karnataka News Live 17 August 2025ರಾಹುಲ್ ಗಾಂಧಿಗೆ 7 ದಿನದ ಡೆಡ್‌ಲೈನ್, ಕ್ಷಮೆ ಕೇಳ್ತಾರಾ, ಅಫಿಡವಿತ್ ಸಲ್ಲಿಕೆ ಮಾಡ್ತಾರಾ?
ಚುನಾವಣಾ ಆಯೋಗ ಇದೀಗ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದೆ, 7 ದಿನದಲ್ಲಿ ಅಫಿದವಿತ್ ಸಲ್ಲಿಕೆ ಮಾಡಿ, ಅಥವಾ ಕ್ಷಮೆ ಕೇಳಿ. ಮೂರನೇ ಆಯ್ಕೆ ಇಲ್ಲ ಎಂದಿದೆ.
Karnataka News Live 17 August 2025ತನಗಿಂತ 20 ವರ್ಷ ಚಿಕ್ಕ ಹುಡುಗನ ಪ್ರೀತಿಗಾಗಿ, ಗಂಡನಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ 53 ವರ್ಷದ ಆಂಟಿ!
ಚಿಕ್ಕಮಗಳೂರಿನಲ್ಲಿ 53 ವರ್ಷದ ಮೀನಾಕ್ಷಿ, 33 ವರ್ಷದ ಪ್ರಿಯಕರ ಪ್ರದೀಪ್ ಜೊತೆ ಸೇರಿ ಗಂಡ ಸುಬ್ರಹ್ಮಣ್ಯನನ್ನು ಕೊಲೆಗೈದಿದ್ದಾಳೆ. ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದ ಎಂಬ ಕಾರಣಕ್ಕೆ ಕೊಲೆ ನಡೆದಿದೆ. ಮೇ 31 ರಂದು ಕೊಲೆಗೈದು ಶವ ಸುಟ್ಟು, ನಂತರ ಕಾಣೆಯಾದ ಬಗ್ಗೆ ದೂರು ನೀಡಿದ್ದಳು. ನಾಲ್ವರ ಬಂಧನ.
Karnataka News Live 17 August 2025Dodda Patre - ದಿನಕ್ಕೊಂದು ಎಲೆ ತಿನ್ನಿ- ಹತ್ತಾರು ಮಾತ್ರೆಗಳಿಗೆ ಹೇಳಿ ಗುಡ್ಬೈ... ವೈದ್ಯರ ಮಾತು ಕೇಳಿ..
ದಿನನಿತ್ಯ ಕಾಡುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಹತ್ತಾರು ರೀತಿ ಮಾತ್ರೆ ತಿಂದು ಇನ್ನಷ್ಟು ಅನಾರೋಗ್ಯ ಬರಿಸಿಕೊಳ್ಳುವ ಬದಲು ಈ ಎಲೆಯನ್ನು ತಿಂದು ನೋಡಿ...
Karnataka News Live 17 August 2025ರಾಜ್ಯದ 36 ಸಾವಿರ ದೇಗುಲಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಳಕೆ ನಿಷೇಧ - ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ!
ಕರ್ನಾಟಕದ 36,000 ಮುಜರಾಯಿ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನಕ್ಕೆ ಆಗಸ್ಟ್ 17 ರಂದು ಚಾಲನೆ ದೊರಕಿದೆ. ಪ್ರಸಾದ ವಿತರಣೆ ಸೇರಿದಂತೆ ಯಾವುದೇ ಉದ್ದೇಶಕ್ಕೂ ಪ್ಲಾಸ್ಟಿಕ್ ಬಳಕೆ ನಿಷಿದ್ಧ. ಪರ್ಯಾಯ ಪರಿಸರ ಸ್ನೇಹಿ ವಸ್ತುಗಳ ಬಳಕೆ ಕಡ್ಡಾಯ. ನಿಯಮ ಉಲ್ಲಂಘಿಸುವ ದೇವಾಲಯಗಳ ವಿರುದ್ಧ ಕ್ರಮ.
Karnataka News Live 17 August 2025ಕಾಂಗ್ರೆಸ್‌ನಂತಹ ಅಯೋಗ್ಯರು ಹುಡುಕಿದರೂ ಸಿಗಲ್ಲ. ಇವರು ಆಳಲಿಕ್ಕೆ ಲಾಯಕ್ ಇಲ್ಲ; ಪ್ರಹ್ಲಾದ್ ಜೋಶಿ
Karnataka News Live 17 August 2025ಶಾಂತಿಗಿದೆ ದುಬಾರಿ ಬೆಲೆ - ಪುಟಿನ್ ತಂತ್ರಕ್ಕೆ ಉಕ್ರೇನ್ ಕಳೆದುಕೊಳ್ಳಲಿದೆಯೇ ನೆಲೆ?
Karnataka News Live 17 August 2025ತ್ರಿಕೋನ ಪ್ರೇಮದ ಕರಾಳ ಮುಖ,ಯುವತಿಯಿಂದ ಲವರ್ ಬದಲಾವಣೆ ಮಾಜಿ ಪ್ರೇಮಿಗೆ ಚಾಕು ಇರಿದ ಭಗ್ನ ಪ್ರೇಮಿ
Karnataka News Live 17 August 2025ಕರ್ನಾಟಕದ ಹಲೆವೆಡೆ ಭಾರಿ ಮಳೆ, ಈ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. 5 ಜಿಲ್ಲೆಗಳಿಗೆ ನಾಳೆ ರೆಡ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆ, ಗುಡ್ಡ ಕುಸಿತಗಳ ಪರಿಣಾಮ ಈ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.