ಚುನಾವಣಾ ಆಯೋಗ ಇದೀಗ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದೆ, 7 ದಿನದಲ್ಲಿ ಅಫಿದವಿತ್ ಸಲ್ಲಿಕೆ ಮಾಡಿ, ಅಥವಾ ಕ್ಷಮೆ ಕೇಳಿ. ಮೂರನೇ ಆಯ್ಕೆ ಇಲ್ಲ ಎಂದಿದೆ.
ನವದೆಹಲಿ (ಆ.17) ರಾಹುಲ್ ಗಾಂಧಿ ಹಾಗೂ ಚುನಾವಣಾ ಆಯೋಗದ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ. ಚುನಾವಣಾ ಆಯೋಗದ ವಿರುದ್ದ ಮತಗಳ್ಳತನ ಆರೋಪ ಮಾಡಿದ ರಾಹುಲ್ ಗಾಂಧಿಗೆ ಇಂದು ಚುನಾವಣಾ ಆಯೋಗ ಮುಖ್ಯಸ್ತ ಜ್ಞಾನೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವಾರ್ನಿಂಗ್ ನೀಡಿದ್ದಾರೆ. ರಾಹುಲ್ ಗಾಂಧಿ 7 ದಿನಗಳ ಒಳಗೆ ತಮ್ಮ ಆರೋಪಗಳು, ದೂರುಗಳ ಕುರಿತು ಅಫಿದವಿತ್ ಸಲ್ಲಿಕೆ ಮಾಡಬೇಕು. ಇಲ್ಲದಿದ್ದರೆ ಕ್ಷಮೆ ಯಾಚಿಸಬೇಕು. ಇದರ ಹೊರತಾಗಿ ಮೂರನೇ ಆಯ್ಕೆ ಇಲ್ಲಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಆಯೋಗದ ವಾರ್ನಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಹಾಗಾದರೆ ಬಿಜೆಪಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ದಾಖಲೆ ಸಹಿತ ಅಫಿಡವಿತ್ ಸಲ್ಲಿಕೆ ಮಾಡಿ
ಚುನಾವಣಾ ಆಯೋಗ ಸಾಮಾನ್ಯವಾಗಿ ಚುನಾವಣೆ ಸಂದರ್ಭ, ದಿನಾಂಕ ಘೋಷಣೆ, ಕೋಡ್ ಆಫ್ ಕಂಡಕ್ಟ್ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ಸುದ್ದಿಗೋಷ್ಠಿ ನಡೆಸುತ್ತದೆ. ಆದರೆ ಈ ಬಾರಿ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿ ಮೂಲಕ ಉತ್ತರ ನೀಡಿತ್ತು. ಈ ವೇಳೆ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಸಾಕ್ಷಿ ಮೂಲಕ ಅಫಿದವಿತ್ ಸಲ್ಲಿಕೆ ಮಾಡಬೇಕು, ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಚುನಾವಣಾ ಆಯೋಗ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
7 ದಿನದಲ್ಲಿ ಅಫಿಡವಿತ್ ಸಲ್ಲಿಸಲಿದ್ದರೆ ಆರೋಪ ಆಧಾರರಹಿತ
ರಾಹುಲ್ ಗಾಂಧಿ 7 ದಿನದಲ್ಲಿ ಅಫಿಡವಿತ್ ಸಲ್ಲಿಕೆ ಮಾಡದಿದ್ದರೆ, ಆರೋಪಗಳು ಆಧಾರ ರಹಿತ ಎಂದು ಖಚಿತಗೊಳ್ಳಲಿದೆ. ಸದ್ಯ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಆಧಾರವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾರರನ್ನು ರಾಹುಲ್ ಗಾಂಧಿ ಸುಳ್ಳುಗಾರ ಎಂದಿದ್ದಾರೆ. ಪಾರದರ್ಶಕವಾಗಿ ನಡೆಯುವ ಮತದಾನ ಪ್ರಕ್ರಿಯೆ ಮೇಲೆ ಆರೋಪ ಮಾಡಿದ್ದಾರೆ. ಮತಗಳ್ಳತನ ಎಂದು ಆರೋಪಿಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಆಯೋಗ ಹೇಳಿದೆ
ವೋಟ್ ಅಧಿಕಾರಿಯಾತ್ರೆಯಲ್ಲಿ ಆಯೋಗದ ವಿರುದ್ಧ ರಾಹುಲ್ ಕಿಡಿ
ಬಿಹಾರದಲ್ಲಿ ವೋಟ್ ಅಧಿಕಾರಿ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ವಿರುದ್ದ ಮತ್ತೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರಿಂದ ಯಾವುದೇ ಅಫಿಡವಿತ್ ಕೇಳಿಲ್ಲ, ಇದೀಗ ನನ್ನಿಂದ ಅಫಿಡವಿತ್ ಕೇಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತಗಳು ಕಳ್ಳತನ ಆಗಿದೆ. ಇದು ಸತ್ಯ ಎಂದು ರಾಹುಲ್ ಗಾಂಧಿ ಮತ್ತೆ ಆರೋಪಿಸಿದ್ದಾರೆ.
