ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ನಂತರ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರನೇ ದಿನದ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲು ಅಧಿಕಾರಿಗಳು ದರ್ಶನ್ ಮತ್ತು ಅವರ ತಂಡದ ಮೇಲೆ ಹದ್ದಿನ ಕಣ್ಣಿಟ್ಟಿದ್ದು, 

ಬೆಂಗಳೂರು (ಆ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರನೇ ದಿನದ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಮತ್ತು ಸಹಚರರ ತಂಡದ ಮೇಲೆ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸಾಮಾನ್ಯ ವಿಚಾರಣಾಧೀನ ಖೈದಿಯಂತೆಯೇ ದರ್ಶನ್ ಮತ್ತು ತಂಡವು ಜೈಲಿನ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿದ್ದು, ದಿನದ ಬಹುತೇಕ ಸಮಯವನ್ನು ನಾಲ್ಕು ಗೋಡೆಗಳ ಮಧ್ಯೆ ಕಳೆಯುತ್ತಿದ್ದಾರೆ.

ಇಂದು ದರ್ಶನ್ ಜೈಲಿನ ಮೆನುವಿನಂತೆ ಪಲಾವ್ ಸೇವಿಸಿದ್ದು, ಊಟಕ್ಕೆ ಮುಂಚೆ ಬಿಸಿನೀರು ಕುಡಿದಿದ್ದಾರೆ. ದಿನಪತ್ರಿಕೆಗಳನ್ನು ಓದುವ ಮೂಲಕ ಸಮಯ ಕಳೆಯುತ್ತಿರುವ ದರ್ಶನ್, ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಸಹ ಆರೋಪಿ ಪವಿತ್ರಾ ಗೌಡ ಸಹಖೈದಿಗಳ ಜೊತೆ ಬೆರೆಯುತ್ತಿದ್ದು, ಜೈಲಿನ ಉಪಹಾರವನ್ನು ಸೇವಿಸಿದ್ದಾರೆ. ಆದರೆ ದರ್ಶನ್ ಮತ್ತು ತಂಡವನ್ನು ಇತರ ವಿಚಾರಣಾಧೀನ ಖೈದಿಗಳಿಂದ ದೂರವಿಡಲಾಗಿದೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಸೌಲಭ್ಯವಿಲ್ಲ, ಕೇವಲ ಪುಸ್ತಕ ಓದಲು ಅಥವಾ ಖಾಲಿ ಕುಳಿತಿರಲು ಮಾತ್ರ ಅವಕಾಶವಿದೆ. 

ಜೈಲು ಸಿಬ್ಬಂದಿಗಳಿಗೆ ದರ್ಶನ್ ತಂಡದೊಂದಿಗೆ ಮಾತನಾಡುವ ಅನುಮತಿಯಿಲ್ಲ. ಊಟ-ತಿಂಡಿಯನ್ನು ಕೊಠಡಿಗೆ ಪೂರೈಸಲಾಗುತ್ತಿದ್ದು, ಕಾರಿಡಾರ್‌ನಲ್ಲಿ ಕೇವಲ ಒಂದು ಗಂಟೆ ವಾಕಿಂಗ್‌ಗೆ ಅವಕಾಶವಿದೆ. ಸುಪ್ರೀಂ ಕೋರ್ಟ್‌ನ ಚಾಟಿ ತೀರ್ಪಿನ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ದರ್ಶನ್ ಮತ್ತು ಗ್ಯಾಂಗ್ ಮೇಲೆ ನಿರಂತರ ನಿಗಾ ಇಡಲಾಗಿದೆ.