ಕಾಸರಗೋಡು[ಫೆ.17] ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಕಾಸರಗೋಡಿನ ಪೆರಿಯ ಸಮೀಪ ಕೃಪೇಶ್ ಮತ್ತು ಶರತ್ ಲಾಲ್ ಎಂಬಿಬ್ಬರು ಯುವ ಕಾಂಗ್ರೆಸ್ ನಾಯಕರ ಹತ್ಯೆ ಆಗಿದೆ.

ಭಾನುವಾರ ಸಂಜೆ 6.30ರ ಸುಮಾರಿಗೆ ಮೂರು ಜನರ ಗುಂಪು ಯುವ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿದೆ. ಮೋಟಾರು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪೆರಿಯಾ ಬಳಿ ದಾಳಿ ಮಾಡಿದ್ದಾರೆ.

ಪಾಕ್‌ಗೆ ಬೊಟ್ಟು ಮಾಡಿ ಭಾರತದ ಧ್ವಜ ಹಿಡಿದರೆ ಉಪಯೋಗವಿಲ್ಲ: ಕರ್ನಾಟಕದ ಕೈ ನಾಯಕ

ಯುವ ನಾಯಕರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ ಕೃಪೇಶ್ ಸ್ಥಳದಲ್ಲೆ ಹತ್ಯೆಯಾಗಿದ್ದಾರೆ. ಶರೆತ್ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. 

ಈ ದಾಳಿಯ ಹಿಂದೆ ಸಿಪಿಐಎಂ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಯುಡಿಎಫ್ ಕಾಸರಗೋಡು ಸೋಮವಾರ ಹರತಾಳಕ್ಕೆ ಕರೆ ಕೊಟ್ಟಿದೆ.