Asianet Suvarna News Asianet Suvarna News

ಸುರೇಶ್ ಕುಮಾರ್ ಗೆ ಕೈ - ತೆನೆ ಫೈಟ್

ಬೆಂಗಳೂರಿನಲ್ಲಿ ಐತಿಹಾಸಿಕ ಮಹತ್ವ ಪಡೆದಿರುವ ಕ್ಷೇತ್ರ ರಾಜಾಜಿನಗರ. ಪಶ್ಚಿಮ ಭಾಗದಲ್ಲಿ ಬರುವ ಈ ಬಡಾವಣೆ, ಬೆಂಗಳೂರು ನಗರದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಭಾಗದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಾಲು-ಸಾಲು ದೇವಾಲಯಗಳಿವೆ. 

Suresh Kumar Contest From Rajajinagar

ಬೆಂಗಳೂರು : ಬೆಂಗಳೂರಿನಲ್ಲಿ ಐತಿಹಾಸಿಕ ಮಹತ್ವ ಪಡೆದಿರುವ ಕ್ಷೇತ್ರ ರಾಜಾಜಿನಗರ. ಪಶ್ಚಿಮ ಭಾಗದಲ್ಲಿ ಬರುವ ಈ ಬಡಾವಣೆ, ಬೆಂಗಳೂರು ನಗರದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಭಾಗದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಾಲು-ಸಾಲು ದೇವಾಲಯಗಳಿವೆ.

ರಾಜಾಜಿನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಬಿಜೆಪಿಯ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ‘ಕೈ’ ಅಭ್ಯರ್ಥಿ ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕರಾಗಿರುವ ಎಸ್. ಸುರೇಶ್ ಕುಮಾರ್ ಅವರೇ ಅಭ್ಯರ್ಥಿ ಯಾಗಿದ್ದಾರೆ. 
2008 ರಲ್ಲಿ ಸುರೇಶ್ ಕುಮಾರ್ ವಿರುದ್ಧ ಪರಭಾವ ಗೊಂಡಿದ್ದ ಮಾಜಿ ಮೇಯರ್ ಜಿ.ಪದ್ಮಾವತಿ ಕಾಂಗ್ರೆಸ್ ಹುರಿಯಾಳು. ಇನ್ನು ಜೆಡಿಎಸ್ ಎಚ್.ಎಂ.ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ಅವರಿಗೆ ಈ ಬಾರಿ ಟಿಕೆಟ್ ನೀಡಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾರ್ಡ್‌ಗಳಿದ್ದು, ದಯಾನಂದ ಸಾಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ ಕಾಮಾಕ್ಷಿಪಾಳ್ಯ, ಶಿವನಗರ ಮತ್ತು ಶ್ರೀ ರಾಮಮಂದಿರ ವಾರ್ಡ್‌ಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. 
ಈ ಪೈಕಿ ನಾಲ್ಕು ವಾರ್ಡ್‌ಗಳಲ್ಲಿ ಬಿಜೆಪಿ ಪಾಲಿಕೆ ಸದಸ್ಯರಿದ್ದು, ಉಳಿದ ಮೂರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದಾರೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 1994,  1998 ರಲ್ಲಿ ಸುರೇಶ್ ಕುಮಾರ್ ಸತತ 2 ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2004 ರಲ್ಲಿ ಕಾಂಗ್ರೆಸ್‌ನ ನೆ.ಲ.ನರೇಂದ್ರ ಬಾಬು ಗೆಲುವು ಸಾಧಿಸುವ ಮೂಲಕ ಸುರೇಶ್ ಕುಮಾರ್‌ಗೆ ಸೋಲಿನ ರುಚಿ ತೋರಿಸಿದ್ದರು.
2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ಸುರೇಶ್ ಮತ್ತೊಮ್ಮೆ ಆರಿಸಿ ಬಂದು, ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು.

2013ರಲ್ಲಿ ಪುನಃ ಆರಿಸಿ ಬಂದಿದ್ದು, ಇದೀಗ ಗೆಲುವಿನ ನಾಗಲೋಟ ಮುಂದುವರೆಸುವ ಹವಣಿಕೆ ಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸುರೇಶ್ ಕುಮಾರ್ 39 ,291 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್.ಮಂಜುಳಾ ನಾಯ್ಡು 24,524, ಕೆಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ಅವರು 20,909 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.
ಕಳೆದ ಚುನಾವಣೆಯಲ್ಲಿ ಕೆಜೆಪಿಗೆ ಹಂಚಿ ಹೋಗಿದ್ದ ಮತಗಳೆಲ್ಲ ಬಿಜೆಪಿಗೆ ಬೀಳುವ ಮೂಲಕ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಸುರೇಶ್ ಕುಮಾರ್ ಇದ್ದಾರೆ. ಆದರೆ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ಸ್ಥಳೀಯ ಪಾಲಿಕೆ ಸದಸ್ಯರೊಬ್ಬರು ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿರುವುದು ಬಿಜೆಪಿಗೆ ತುಸು ಸಮಸ್ಯೆಯಾಗಿದೆ.

ಇನ್ನು ಮಾಜಿ ಪಾಲಿಕೆ ಸದಸ್ಯ ಪದ್ಮರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಹೋಗಿದ್ದು ಗೌಪ್ಯವಾಗಿ ಉಳಿದಿಲ್ಲ. ಆದರೆ, ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಗಣನೀಯವಾಗಿದ್ದು, ಸುರೇಶ್ ಕುಮಾರ್ ಕ್ಷೇತ್ರದ ಅಭಿವೃದ್ಧಿ ಹಾಗೂ ಬಿಜೆಪಿಯ ಸಂಪ್ರಾದಾಯಿಕ ಮತಗಳನ್ನೇ ನೆಚ್ಚಿಕೊಂಡಿದ್ದಾರೆ.

ಕಳೆದ ಬಾರಿ ಸುರೇಶ್ ಕುಮಾರ್ ವಿರುದ್ಧ ಪರಭಾವಗೊಂಡಿದ್ದ ಮಂಜುಳಾ ನಾಯ್ಡು ಬದಲಿಗೆ ಕಾಂಗ್ರೆಸ್ ಪಕ್ಷ ಮಾಜಿ ಮೇಯರ್ ಜಿ.ಪದ್ಮಾವತಿ ಅವರನ್ನು ಕಣಕ್ಕೆ ಇಳಿಸಿದೆ. ಮೇಯರ್ ಆದ ಬಳಿಕ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಪದ್ಮಾವತಿ ಅವರು ಕ್ಷೇತ್ರದ ಜನತೆಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. 
ಅಲ್ಲದೆ, ರಾಜಾಜಿನಗರದ ಕ್ಷೇತ್ರದಲ್ಲಿನ ಪ್ರಕಾಶ್ ನಗರ ವಾರ್ಡ್ ಸದಸ್ಯರಾಗಿರುವುದು ಮೇಯರ್ ಆಗಿ ಕ್ಷೇತ್ರದಲ್ಲಿನ ಜನತೆ ಜತೆ ಸಂಪರ್ಕ ಹೊಂದಿರುವುದು ನಮ್ಮ ಗೆಲುವು ಸಾಧಿಸಲು ಅನುಕೂಲ ಕರವಾಗಬಹುದು ಎಂದು ಲೆಕ್ಕಹಾಕಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಜೆಡಿಎಸ್‌ನ ಪರ ಒಲವು ಅಷ್ಟಾಗಿ ಕಾಣುತ್ತಿಲ್ಲ. ಕಳೆದ ಬಾರಿ ಎಸ್.ಆನಂದ್ ಅವರನ್ನು ಪಕ್ಷ ನಿಲ್ಲಿಸಿತ್ತಾದರೂ ಈ ಬಾರಿ ಅವರು ಸ್ಪರ್ಧೆಗೆ ಆಸಕ್ತಿ ತೋರದ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ ಅವರ ಹೆಸರು ಕೇಳಿ ಬಂದಿತ್ತು.

ಕೊನೆ ಹಂತದಲ್ಲಿ ಎಚ್.ಎಂ. ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ಅವರಿಗೆ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಾಯಕರ‌್ಯಾರು ತಳವೂರಲು ಸಾಧ್ಯವಾಗುತ್ತಿಲ್ಲ. ಒಕ್ಕಲಿಗೆ ಮತಗಳನ್ನೇ ಜೆಡಿಎಸ್ ನೆಚ್ಚಿಕೊಂಡಿದೆ.

Follow Us:
Download App:
  • android
  • ios