ಕನ್ನಡ ಧ್ವಜ ಬಣ್ಣದ ಪಾತರಗಿತ್ತಿಗೆ ‘ರಾಜ್ಯ ಚಿಟ್ಟೆ’ ಗೌರವ!
ನಮ್ಮ ದೇಶದ ಅತಿ ದೊಡ್ಡ ಚಿಟ್ಟೆಯಾಗಿರುವ ಸದರ್ನ್ ಬಡ್ ವಿರ್ಂಗ್ (ಟ್ರ್ಯೋಡೆಸ್ ಮಿನೂಸ್) ಅನ್ನು ಕರ್ನಾಟಕದ ‘ರಾಜ್ಯ ಚಿಟ್ಟೆ’ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ‘ರಾಜ್ಯ ಚಿಟ್ಟೆ’ಯನ್ನು ಘೋಷಿಸಿದ ದೇಶದ 2ನೇ ರಾಜ್ಯ ಕರ್ನಾಟಕವಾಗಿದೆ. ಮಹಾರಾಷ್ಟ್ರವು ‘ಬ್ಲೂ ಮೊರ್ಮನ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಈಗಾಗಲೇ ಘೋಷಿಸಿದೆ.
ಉಡುಪಿ(ಆ.23): ನಮ್ಮ ದೇಶದ ಅತಿ ದೊಡ್ಡ ಚಿಟ್ಟೆಯಾಗಿರುವ ಸದರ್ನ್ ಬಡ್ ವಿರ್ಂಗ್ (ಟ್ರ್ಯೋಡೆಸ್ ಮಿನೂಸ್) ಅನ್ನು ಕರ್ನಾಟಕದ ‘ರಾಜ್ಯ ಚಿಟ್ಟೆ’ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ‘ರಾಜ್ಯ ಚಿಟ್ಟೆ’ಯನ್ನು ಘೋಷಿಸಿದ ದೇಶದ 2ನೇ ರಾಜ್ಯ ಕರ್ನಾಟಕವಾಗಿದೆ. ಮಹಾರಾಷ್ಟ್ರವು ‘ಬ್ಲೂ ಮೊರ್ಮನ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಈಗಾಗಲೇ ಘೋಷಿಸಿದೆ.
ದೇಶದ ಲಾಂಛನಗಳಾಗಿ ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಹೂವು ಇತ್ಯಾದಿಗಳಿರುವಂತೆ ರಾಜ್ಯಕ್ಕೂ ಒಂದೊಂದು ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳನ್ನು ಘೋಷಿಸುವ ಪದ್ಧತಿ ಇದೆ. ಇದು ಕಡ್ಡಾಯವಲ್ಲದಿದ್ದರೂ ಆಯಾ ರಾಜ್ಯ ಸರ್ಕಾರಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿವೆ. ಕರ್ನಾಟಕದಲ್ಲಿ ಚಿಟ್ಟೆ ಪ್ರಿಯರು ಹಲವು ವರ್ಷಗಳಿಂದ ರಾಜ್ಯದ ಚಿಟ್ಟೆಯೊಂದನ್ನು ಅಧಿಕೃತವಾಗಿ ಘೋಷಿಸುವ ಬೇಡಿಕೆಯನ್ನಿಟ್ಟಿದ್ದರು. ಅದರಂತೆ 2016ರ ಆಗಸ್ಟ್‌ನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಈ ‘ಸದರ್ನ್ ಬರ್ಡ್‌ವಿಂಗ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆ ಎಂದು ಘೋಷಿಸಲು ನಿರ್ಣಯ ಕೈಗೊಂಡಿತ್ತು. ಅದಕ್ಕೀಗ ರಾಜ್ಯಪಾಲರ ಆದೇಶದ ರೂಪದಲ್ಲಿ ಅಧಿಕೃತ ಮುದ್ರೆಯನ್ನೊತ್ತಲಾಗಿದೆ. ಇದೀಗ ಅರಣ್ಯ ಇಲಾಖೆ ಈ ಆದೇಶವನ್ನು ಎಲ್ಲಾ ಜಿಲ್ಲಾ, ವಲಯ ಅರಣ್ಯಾಧಿಕಾರಿಗಳಿಗೆ, ವನ್ಯ ಜೀವಿ ಸಂರಕ್ಷಣಾಧಿಕಾರಿಗಳಿಗೆ ಅಧಿಕೃತ ಮಾಹಿತಿಗಾಗಿ ಕಳುಹಿಸಿದೆ.
ಕರುನಾಡಲ್ಲೇ ಯಥೇಚ್ಛ: ‘ಸದರ್ನ್ ಬರ್ಡ್ ವಿಂಗ್’ ಅನ್ನು ದೇಶದ ಅತಿ ದೊಡ್ಡ ಚಿಟ್ಟೆ ಎಂದು ಗುರುತಿಸಲಾಗಿದೆ. ಆದರೂ ಇದರ ಮುಖ್ಯ ಆವಾಸ ಸ್ಥಾನ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಈ ಚಿಟ್ಟೆ ಸಾಕಷ್ಟು ಸಂಖ್ಯೆಯಲ್ಲಿದೆ. ಪಶ್ಚಿಮಘಟ್ಟದ ನಿತ್ಯ ಹಸುರಿನ ಕಾಡು, ಕರಾವಳಿ ಮತ್ತು ಬಯಲು ಪ್ರದೇಶಗಳೆಲ್ಲದರಲ್ಲಿ ಈ ಚಿಟ್ಟೆಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ನೋಡಲು ಆಕಷ್ಟಕವಾಗಿರುವ ಈ ಚಿಟ್ಟೆ ಸಾಧಾರಣವಾಗಿ 140-150 ಮಿ.ಮೀ. ಅಗಲವಿರುತ್ತದೆ. 160 ಮಿ.ಮೀ. ಅಗಲ ಬೆಳೆದ ದಾಖಲೆಯೂ ಇದೆ. ಅದಕ್ಕಾಗಿಯೇ ಇದನ್ನು ಬಡ್ ವಿರ್ಂಗ್ ಚಿಟ್ಟೆ (ಹಕ್ಕಿಯ ರೆಕ್ಕೆ) ಎಂದು ಕರೆಯಲಾಗುತ್ತದೆ. ಇದು ಅವಸಾನದ ಅಂಚಿನಲ್ಲಿರುವ ಪ್ರಭೇದವಾಗಿರದಿದ್ದರೂ ಐಯುಸಿಎನ್ (ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆ್ ನೇಚರ್) ಕಾಲಕಾಲಕ್ಕೆ ಅವುಗಳ ಸಂಖ್ಯೆಯನ್ನು ಸದಾ ನಿಗಾ ವಹಿಸಬೇಕಾಗಿರುವ ಚಿಟ್ಟೆ ಎಂಬ ಎಚ್ಚರಿಕೆಯನ್ನು ನೀಡಿದೆ.
ರೆಕ್ಕೆಯಲ್ಲಿದೆ ಕನ್ನಡ ಧ್ವದ ಬಣ್ಣ!
ಕರ್ನಾಟಕ ರಾಜ್ಯ ಈ ಚಿಟ್ಟೆಯನ್ನು ಆರಿಸುವುದಕ್ಕೆ ಮುನ್ನ ಹಲವು ಜಾತಿಯ ಚಿಟ್ಟೆಗಳನ್ನು ಶಿಾರಸು ಮಾಡಲಾಗಿತ್ತು. ಆದರೆ ಸದರ್ನ್ ಬರ್ಡ್‌ವಿಂಗ್ ಚಿಟ್ಟೆಯ ರೆಕ್ಕೆಗಳಲ್ಲಿ ಕೆಂಪು( ಈ ಬಣ್ಣ ರೆಕ್ಕೆಗಳು ಮಡಚಿದ್ದಾಗ ಮಾತ್ರ ಚುಕ್ಕೆಯ ರೀತಿಯಲ್ಲಿದೆ) ಮತ್ತು ಹಳದಿ ಬಣ್ಣ ಇದ್ದು, ಅದು ಕರ್ನಾಟಕ ರಾಜ್ಯದ ಕೆಂಪು ಹಳದಿ ಧ್ವಜವನ್ನು ಹೋಲುತ್ತದೆ. ಇದೇ ಕಾರಣಕ್ಕಾಗಿ ಅದು ನಮ್ಮ ರಾಜ್ಯ ಚಿಟ್ಟೆಯ ಗೌರವವನ್ನು ಪಡೆಯುವುದಕ್ಕೆ ಸಾಧ್ಯವಾಯಿತು ಎಂದು ಹೇಳಲಾಗುತ್ತದೆ.