MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Men's Day : ಪುರುಷರು ಹೇಳೋ ಈ ವಿಷ್ಯಗಳು ಪುರುಷರಿಗಷ್ಟೇ ಅರ್ಥ ಆಗತ್ತೆ… ಹೆಣ್ಮಕ್ಳು ಅರ್ಥಾನೆ ಮಾಡ್ಕೊಳಲ್ಲ!

Men's Day : ಪುರುಷರು ಹೇಳೋ ಈ ವಿಷ್ಯಗಳು ಪುರುಷರಿಗಷ್ಟೇ ಅರ್ಥ ಆಗತ್ತೆ… ಹೆಣ್ಮಕ್ಳು ಅರ್ಥಾನೆ ಮಾಡ್ಕೊಳಲ್ಲ!

ಹುಡುಗರನ್ನು ಅರ್ಥ ಮಾಡಿಕೊಳ್ಳೋದು ಹುಡುಗಿಯರಿಗೆ ಕಷ್ಟ. ಯಾಕಂದ್ರೆ ಹುಡುಗರ ಸಮಸ್ಯೆಯನ್ನು ಹುಡುಗಿಯರು ಅರ್ಥ ಮಾಡಿಕೊಳ್ಳೋದೇ ಇಲ್ಲ. ಆದರೆ ಒಬ್ಬ ಹುಡುಗ ಇನ್ನೊಬ್ಬ ಅಪರಿಚಿತ ಹುಡುಗನ ಭಾವನೆಗಳನ್ನು ಏನೂ ಹೇಳದೆಯೂ ಅರ್ಥಮಾಡಿಕೊಳ್ಳುತ್ತಾನೆ. ಏಕೆಂದರೆ ಪ್ರಪಂಚದಾದ್ಯಂತದ ಹುಡುಗರ ಸಾಮಾನ್ಯ ಸಮಸ್ಯೆ ಒಂದೇ ಆಗಿರುತ್ತೆ.   

3 Min read
Author : Pavna Das
| Updated : Nov 20 2024, 07:19 AM IST
Share this Photo Gallery
  • FB
  • TW
  • Linkdin
  • Whatsapp
17

ನನ್ನ ಟೆನ್ಶನ್ ನಿನಗೆ ಅರ್ಥ ಆಗಲ್ಲ ಬಿಡು ಈ ವಾಕ್ಯವನ್ನು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಬಳಸಿರುತ್ತಾನೆ. ವಿಶೇಷವಾಗಿ ಹುಡುಗರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಯಾಕಂದ್ರೆ ಹುಡುಗರು ಮತ್ತು ಹುಡುಗಿಯರು ನಿಜವಾಗಿಯೂ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಜೀವನ ನಡೆಸೋ ರೀತಿ ಕೂಡ ವಿಭಿನ್ನವಾಗಿರುತ್ತೆ. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಪುರುಷರ ಮನಸ್ಸನ್ನು, ಅವರು ಹೇಳುವ ಕೆಲವು ಮಾತುಗಳನ್ನು ಮಹಿಳೆಯರಿಗೆ ಕೆಲವೊಮ್ಮೆ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ ಇಲ್ಲ. ಆದರೆ ಇನ್ನೊಬ್ಬ ಪುರುಷನ ಮಾತನ್ನ ಮತ್ತೊಬ್ಬ ಪುರುಷ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬಲ್ಲನು. ಆತ ಹೇಳದೆಯೇ ಆತನ ಮನಸ್ಸಿನ ಭಾವನೆಗಳನ್ನು ಅರ್ಥೈಸಬಲ್ಲನು. ಪದಗಳನ್ನು ಬಳಸುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ಪುರುಷರು ಇತರ ವ್ಯಕ್ತಿಯ ಪರಿಸ್ಥಿತಿಯನ್ನು ಕೇವಲ ಕಣ್ಣಿನ ಸನ್ನೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ಕೆಲವೊಂದು ವಿಷಯಗಳನ್ನ ಹೇಳ್ತೀವಿ, ಅವುಗಳು ಪುರುಷರ ಮನಸ್ಸಿನ ಮಾತುಗಳು, ಅವುಗಳನ್ನ ಗಂಡಸರಷ್ಟೇ ಅರ್ಥ ಮಾಡಿಕೊಳ್ತಾರೆ. 

37

ಮನೆಯ ಜವಾಬ್ದಾರಿ ತೆಗೆದುಕೊಳ್ಳಲೇಬೇಕು
ಈ ಸತ್ಯವು ಎಲ್ಲರಿಗೂ ತಿಳಿದಿದೆ, ಇಂದಿಗೂ ಭಾರತೀಯ ಮನೆಗಳಲ್ಲಿ, ಹುಡುಗಿಯರಿಗೆ ಚಿಕ್ಕ ವಯಸ್ಸಿನಿಂದಲೇ ಮನೆಯನ್ನು ನಿರ್ವಹಿಸಲು ಕಲಿಸಲಾಗುತ್ತದೆ. ಅದೇ ಸಮಯದಲ್ಲಿ, ಹುಡುಗರನ್ನು ಮನೆಕೆಲಸಗಳಿಂದ ದೂರವಿಡೋದು ಕೂಡ ಸಾಮಾನ್ಯವಾಗಿದೆ. ಆದರೆ ಹುಡುಗರು ಬಾಲ್ಯದಿಂದಲೇ ಮನೆಯನ್ನು ಹೇಗೆ ನಿರ್ವಹಿಸಬೇಕು ಅನ್ನೋದನ್ನ ಕಲಿಯುತ್ತಾರೆ. ಹಣ ಸಂಪಾದಿಸುವುದು, ಸಾಲ ತೆಗೆದುಕೊಳ್ಳುವುದು, ಕುಟುಂಬದ ಬೇಡಿಕೆಗಳನ್ನು ಪೂರೈಸುವುದು, ಆಸ್ಪತ್ರೆ ಅಥವಾ ಚಿಕಿತ್ಸೆಗೆ ಖರ್ಚು ಮಾಡುವುದು, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳು ಇತ್ಯಾದಿ ಜವಾಬ್ಧಾರಿಗಳು ಮುಖ್ಯವಾಗಿ ಪುರುಷರಿಗೆ ಬರುತ್ತವೆ. ಅವರು ಈ ಜವಾಬ್ದಾರಿಗಳಿಂದ (responsibility) ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಮನೆಯ ಪುರುಷರಾಗಿ, ಜವಾಬ್ದಾರಿ ಅವರ ಮೇಲೆ ಮಾತ್ರ ಹೆಚ್ಚಾಗಿ ಇರುತ್ತದೆ. ಒಮ್ಮೆ ಮನೆಯ ಮಗಳು ಅಥವಾ ಮಹಿಳೆ ತನ್ನ ಕೆಲಸವನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬಹುದು, ಆದರೆ ಪುರುಷನಿಗೆ ಹಾಗೆ ಯೋಚಿಸುವುದು ಕೂಡ ಅಸಾಧ್ಯ.

47

ಹುಡುಗಿಗೆ ಸಹಾಯ ಮಾಡಲು ಎಲ್ಲರೂ ಮುಂದಿರುತ್ತಾರೆ, ಆದ್ರೆ ಹುಡುಗ ಯಾವಾಗಲೂ ಎರಡನೇ ಆಯ್ಕೆಯಾಗಿರ್ತಾನೆ

ಹುಡುಗರು ಏನಾದ್ರೂ ಮಾಡೋದಕ್ಕೆ ಯೋಚನೆ ಮಾಡಿದ್ರೆ, ಅದನ್ನ ತಾನೇ ಮಾಡಬೇಕು. ಬೇರೆಯವರಿಂದ ಸಹಾಯ ನಿರೀಕ್ಷೆ ಮಾಡೋದು ಕಷ್ಟ. ಯಾಕಂದ್ರೆ ಯಾರೂ ಕೂಡ ಅವರ ಸಹಾಯಕ್ಕೆ ಬರೋದಿಲ್ಲ. ಉದಾಹರಣೆ ಕೊಟ್ಟು ಹೇಳೋದಾದ್ರೆ  ಹುಡುಗ-ಹುಡುಗಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಆಕ್ಸಿಡೆಂಟ್ ಆದ್ರೆ, ಹುಡುಗಿಯ ಆರೈಕೆಗೆ ಎಲ್ಲರೂ ಮುಂದೆ ಬರುತ್ತಾರೆ. ಆಕೆಗೆ ಚಿಕಿತ್ಸೆ ನೀಡೋದು, ನೀರು ಕುಡಿಸೋದು ಎಲ್ಲವನ್ನು ಮೊದಲು ಮಾಡ್ತಾರೆ, ಆದರೆ ಹುಡುಗನಿಗೆ, ಸಣ್ಣ ಏಟು ತಾನೆ, ನೀನು ಹುಷಾರಾಗಿದ್ಯಲ್ವಾ? ಗಾಡಿ ಓಡಿಸೋಕೆ ಆಗುತ್ತಲ್ವಾ? ಅಷ್ಟೇ ಕೇಳ್ತಾರೆ. ಯಾಕಂದ್ರೆ ಪುರುಷರು ಇತರರಿಗೆ ಸಹಾಯ ಮಾಡೋರು, ಅವರಿಗೂ ಸಹಾಯ ಬೇಕು ಅಂತ ಯಾರಿಗೂ ಅನಿಸೋದೆ ಇಲ್ಲ. 

57

ತುಂಬಾನೆ ದಣಿದಿದ್ದರೂ ಸಹ, ಯಾರಿಂದಲೂ ಕರುಣೆಯನ್ನ ನಿರೀಕ್ಷಿಸಬೇಡಿ
ಬಸ್, ಮೆಟ್ರೋ, ಇತ್ಯಾದಿಗಳಲ್ಲಿ ಒಬ್ಬ ಹುಡುಗಿ ಅಥವಾ ಹುಡುಗ ಇನ್ನೊಬ್ಬ ಹುಡುಗನಿಗೆ ಸೀಟ್ ಬಿಟ್ಟು ಕೊಡುವುದನ್ನು ನೀವು ಎಷ್ಟು ಬಾರಿ ನೋಡಿದ್ದೀರಿ? ಖಂಡಿತಾ ಇಲ್ಲ ಅಲ್ವಾ? ಸತ್ಯವೇನೆಂದರೆ, ಹುಡುಗರು ತಾವು ಎಷ್ಟೇ ದಣಿದಿದ್ದರೂ, ತಾವು ನಿಲ್ಲುವ ಸ್ಥಿತಿಯಲ್ಲಿಯೂ ಇಲ್ಲದಿದ್ದರೂ, ತಮಗೆ ಯಾರಾದರು ಸೀಟ್ ಬಿಟ್ಟುಕೊಡುತ್ತಾರೆ ಎಂದು ನಿರೀಕ್ಷೆ ಮಾಡಬಾರದು. ಇದು ಕೇವಲ ಒಂದು ಸಣ್ಣ ಉದಾಹರಣೆ ಅಷ್ಟೇ. ಪುರುಷರ ಆಯಾಸ ಅಥವಾ ಅನಾರೋಗ್ಯವನ್ನು ನಿರ್ಲಕ್ಷಿಸುವ ಇಂತಹ ಅನೇಕ ಸಂದರ್ಭಗಳಿವೆ. ಯಾಕಂದರೆ ನಾವೆಲ್ಲಾ ಅಂದುಕೊಂಡಿದ್ದೇವೆ ಅವರು ಪುರುಷರು ಅವರಿಗೇನು ಆಗೋದಿಲ್ಲ ಅಂತ. 

67

ಹುಡುಗರು ಇಮೋಷನ್’ಲೆಸ್ ಆಗಿರ್ತಾರೆ
ಹುಡುಗರಿಗೆ ಭಾವನೆಗಳಿವೆ, ಆದರೆ ಅದನ್ನು ನಿಗ್ರಹಿಸಲು ಅವರು ಮೊದಲಿನಿಂದಲೂ ಕಲಿತಿರುತ್ತಾರೆ ಯಾಕಂದ್ರೆ ಹುಡುಗರು ಅತ್ತರೆ, ಅವರನ್ನ ದುರ್ಬಲ ಅಂತಾರೆ,  ಎಷ್ಟೇ ಕೆಟ್ಟ ಸಮಯ ಬಂದರೂ, ದುಃಖದಲ್ಲಿರೂ ಸಹ, ಹುಡುಗರು ವೀಕ್ ಆಗಿ ಕಾಣಿಸಲೇಬಾರದು.  ಉದಾಹರಣೆಗೆ, ಒಬ್ಬ ಹುಡುಗ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾನೆ. ಇದರಿಂದ ಅವನು ಕೂಡ ಕುಸಿದು ಹೋಗಿದ್ದಾನೆ, ಆದ್ರೆ ಆತನಿಗೆ ಅಲ್ಲಿ ಸೇರಿದ ಜನ ಹೇಳೋದು ಏನು? ನೀನು ಗಂಡು ಮಗ ಅಳಬೇಡ, ನೀನು ಅತ್ತರೆ ಮನೆಯವರನ್ನ ಸಮಾಧಾನ ಮಾಡುವವರು ಯಾರು? ಅಂತಾರೆ. ಇದನ್ನೆ ಬೆಳೆಸಿಕೊಂಡು ಆತ ಭಾವನೆಗಳನ್ನು ತೋರಿಸದೇ ಇದ್ದಾಗ, ಆತನನ್ನು ಇಮೋಷನ್’ಲೆಸ್ (emotionless) ಎನ್ನುತ್ತಾರೆ. 

77

ಒಬ್ಬ ಹುಡುಗನಿಗೆ ಸಮಸ್ಯೆ ಬಂದಾಗ ಮತ್ತೊಬ್ಬ ಹುಡುಗ ತನ್ನ ಜೀವ ನೀಡೋದಕ್ಕು ರೆಡಿಯಾಗಿರ್ತಾನೆ
ಇದು ಕೂಡ 100% ನಿಜಾ. ಹುಡುಗರು ಹೆಚ್ಚಾಗಿ ಏನಾದರು ನಿರ್ಧಾರ ತೆಗೆದುಕೊಳ್ಳುವಾಗ ನನ್ನ ಫ್ರೆಂಡ್ ಹೀಗೆ ಹೇಳಿದ, ನಾನು ಹಾಗೆ ಮಾಡ್ತೇನೆ ಎನ್ನುತ್ತಾರೆ. ಆದರೆ ಹುಡುಗಿಯರು ಎಲ್ಲಾ ವಿಷ್ಯಗಳನ್ನು ಇನ್ನೊಬ್ಬರು ಹೇಳಿದ್ದಾರೆ ಎಂದು ಮಾಡೋ ಬದಲು ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನು ಹುಡುಗರ ಅಭ್ಯಾಸ ಏನಂದ್ರೆ, ಅವರು ಸ್ನೇಹಿತರಾಗಿದ್ರೆ ಮತ್ತೊಬ್ಬ ಸ್ನೇಹಿತನಿಗಾಗಿ ಪೆಟ್ಟು ತಿನ್ನೋದಕ್ಕು ರೆಡಿಯಾಗಿರ್ತಾರೆ, ಜಗಳ ಮಾಡೋದಕ್ಕೂ ರೆಡಿ, ಜೀವ ಕೊಡೋದಕ್ಕೂ ರೆಡಿಯಾಗಿರ್ತಾರೆ. ಆದರೆ ಹುಡುಗಿಯರಲ್ಲಿ ಈ ರೀತಿಯ ವರ್ತನೆ ನೋಡೋದಕ್ಕೆ ಸಾಧ್ಯಾನೆ ಇಲ್ಲ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಬಂಧಗಳು
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ 2ನೇ ಮದುವೆ, ಪತ್ರಕರ್ತೆ ಕೈಹಿಡಿದ ಮುಖ್ಯಮಂತ್ರಿ
Recommended image2
ಪಲಾಶ್ ಮುಚ್ಚಲ್‌ಗೆ ಮತ್ತೊಂದು ಸಂಕಷ್ಟ? ಸ್ಮೃತಿ ಮಂಧನಾ ಮಾಜಿ ಬಾಯ್‌ಫ್ರೆಂಡ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆಂದ ಬಾಲ್ಯದ ಗೆಳೆಯ
Recommended image3
ಅಪ್ಪನ ಕನಸು ನನಸು ಮಾಡಲು 13ರ ಹರೆಯದಲ್ಲೇ ಪಣ ತೊಟ್ಟ ಮಗಳು! ಒಂದು ಟಿ-ಶರ್ಟ್ ಹಿಂದೆ ಇದೆ ಕಣ್ಣೀರ ಕಥೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved