ಕೆನಡಾ[ಸೆ.04]: ಕಚೇರಿಗೆ ಸಭ್ಯ ಉಡುಪು ಧರಿಸಿ ಬರುವಂತೆ ಹೇಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಬ್ರಾ ಧರಿಸಿಲ್ಲ ಎಂಬ ಕಾರಣಕ್ಕೆ ಕೆನಡಾದ ಮಹಿಳೆಯೊಬ್ಬಳು ಕೆಲಸ ಕಳೆದುಕೊಂಡಿದ್ದಾಳೆ. 

ಅಷ್ಟಕ್ಕೂ ಆಗಿದ್ದೇನೆಂದರೆ, ಓಸೋಯೋಸ್ ಗಾಲ್ಫ್ ಕ್ಲಬ್‌ನಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಕ್ರಿಸ್ಟಿನಾ ಸ್ಕೆಲ್ ಎಂಬಾಕೆ ಬ್ರಾ ಧರಿಸುತ್ತಿಲ್ಲ ಎಂದು ಗ್ರಾಹಕರು ದೂರು ನೀಡಿದ್ದರು.

ಹೀಗಾಗಿ ಕಂಪನಿಯ ಮ್ಯಾನೇಜರ್ ವಸ್ತ್ರ ಸಂಹಿತೆ ಜಾರಿ ಮಾಡಿದ್ದರು. ಆದರೆ, ಸ್ಕೆಲ್ ಮಾತ್ರ ತನ್ನ ಹಳೆಯ ಚಾಳಿ ಮುಂದುವರಿಸಿದ್ದರಿಂದ ಕೆಲಸದಿಂದ ತೆಗೆಯಲಾಗಿತ್ತು. ಹೀಗಾಗಿ ಆಕೆ ತನ್ನ ಮಾಜಿ ಬಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.