ಮುಸ್ಲಿಮರಿಗೆ ಸಂಪತ್ತು ಹಂಚಿಕೆ ಹೇಳಿಕೆ ವಿವಾದ ಬೆನ್ನಲ್ಲೇ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದಿಂದ ಮುಸ್ಲಿಮರಿಗೆ ಆಗಿರುವ ಲಾಭಗಳ ಕುರಿತು ಉಲ್ಲೇಖಿಸಿ ಕಾಂಗ್ರೆಸ್ ಕುಟುಕಿದ್ದಾರೆ. ಹಜ್ ಯಾತ್ರೆ ಸೇರಿದಂತೆ ಹಲವು ಯೋಜನೆಗಳನ್ನು ಉಲ್ಲೇಖಿಸಿದ ಮೋದಿ, ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಆಲಿಘಡ(ಏ.22) ಈ ದೇಶದ ಸಂಪತ್ತಿನ ಮೊದಲ ಅಧಿಕಾರಿ ಮುಸ್ಲಿಮರಿಗೆ ಅನ್ನೋ ಮನ್‌ಮೋಹನ್ ಸಿಂಗ್ ಹೇಳಿಕೆಯನ್ನು ಮೂಲವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಸಂಪತ್ತು ಹಂಚಿಕೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದೆ. ಮೋದಿ ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ. ಪ್ರಧಾನಿಯಾಗಿ ಈ ಮಾತು ಸಲ್ಲದು ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಹಜ್ ಕೋಟಾ ಹೆಚ್ಚಳ, ಮುಸ್ಲಿಮ್ ಮಹಿಳೆಯರಿಗೆ ಸುಲಭವಾಗಿ ಹಜ್ ಯಾತ್ರೆ, ವೀಸಾ ಸರಳೀಕರಣ ಸೇರಿದಂತೆ ಹಲವು ಕೊಡುಗೆಯನ್ನು ಬಿಜೆಪಿ ಮುಸ್ಲಿಮರಿಗೆ ನೀಡಿದೆ ಎಂದು ಮೋದಿ ಹೇಳಿದ್ದಾರೆ.
ಅಲಿಘಡದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ವಿಪಕ್ಷಗಳ ಆರೋಪ, ಟೀಕೆಗಳಿಗೆ ಉತ್ತರಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಮುಸ್ಲಿಮ್ ಸಮುದಾಯಕ್ಕೆ ಅಗತ್ಯ ಹಾಗೂ ಅನಿವಾರ್ಯವಾಗಿ ಬೇಕಿದ್ದ ಮೂಲಭೂತ ಸೌಕರ್ಯಗಳನ್ನು ನೀಡಿದೆ. ತ್ರಿವಳಿ ತಲಾಕ್ ನಿಷೇಧಿಸುವ ಮೂಲಕ ಮುಸ್ಲಿಮ್ ಹೆಣ್ಣುಮಕ್ಕಳ ಜೀವನವನ್ನು ಹಸನಾಗಿಸುವ ಕೆಲಸ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
Narendra Modi: ಕರ್ನಾಟಕಕ್ಕೆ ಈಗಾಗಲೇ 900 ಕೋಟಿ ಹಣ ನೀಡಲಾಗಿದ್ದು, ಇದು ರಾಜಕೀಯ ಮಾಡೋ ವಿಷಯವಲ್ಲ: ಮೋದಿ
ಹಿಂದೆ ಹಜ್ ಯಾತ್ರೆ ತೆರಳುವುದು ಎಲ್ಲಾ ಮುಸ್ಲಿಮರಿಗೆ ಅಸಾಧ್ಯದ ಮಾತಾಗಿತ್ತು. ಕೇವಲ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತಿತ್ತು. ಹಜ್ ಯಾತ್ರೆಗೆ ತೆರಳಲು ಲಂಚ ನೀಡಬೇಕಿತ್ತು. ಇಷ್ಟೇ ಅಲ್ಲ ಕೆಲವೇ ಕೆಲವು ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಸೌದಿ ಅರೆಬಿಯಾ ಪ್ರಿನ್ಸ್ ಜೊತೆಗಿನ ಮಾತುಕತೆಯಲ್ಲಿ ಭಾರತೀಯರ ಹಜ್ ಕೋಟಾವನ್ನು ಹೆಚ್ಚಳಕ್ಕೆ ಮನವಿ ಮಾಡಿದ್ದೆ. ಇದರ ಪರಿಣಾಮ ಭಾರತೀಯರ ಹಜ್ ಕೋಟಾ ಹೆಚ್ಚಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಕೇವಲ ಕೋಟಾ ಮಾತ್ರವಲ್ಲ, ವೀಸಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಹಿಂದೆ ಮುಸ್ಲಿಮ್ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಇದಕ್ಕೆ ಅವಕಾಶವಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಮೆಹ್ರಮ್ ಇಲ್ಲದೆ ಮುಸ್ಲಿಮ್ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.
ಹಿಂದೆ 400 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ನಿಂದ ಈಗ ಕನಿಷ್ಠ 300 ಸೀಟಲ್ಲಿ ಸ್ಪರ್ಧಿಸಲೂ ಪರದಾಟ: ಮೋದಿ
ಮುಸ್ಲಿಮ್ ಹೆಣ್ಣಮಕ್ಕಳನ್ನು ತ್ರಿವಳಿ ತಲಾಖ್‌ನಿಂದ ರಕ್ಷಣೆ, ಹಜ್ ಯಾತ್ರೆ ಸೇರಿದಂತೆ ಮುಸ್ಲಿಮ್ ಸಮುದಾಯವನ್ನು ಮೇಲಕ್ಕೆತ್ತಲು ಬಿಜೆಪಿ ಸರ್ಕಾರ ಮಾಡಿದ ಯೋಜನೆಗಳಿಂದ ನನಗೆ ಹಲವು ಮುಸ್ಲಿಮ್ ಸಹೋದರಿಯರು ಆಶೀರ್ವಾದ ಮಾಡಿದ್ದಾರೆ. ಶುಭ ಹಾರೈಕೆಯನ್ನು ಕಳುಹಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
