ಚಿತ್ರರಂಗಕ್ಕೆ ರೀಎಂಟ್ರಿ ಬಗ್ಗೆ ಮಾಹಿತಿ ನೀಡಿದ್ರು ರಾಧಿಕಾ ಪಂಡಿತ್; ಏನಂದ್ರು ನೋಡಿ
ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎಂದೆ ಖ್ಯಾತಿ ಪಡೆದ ನಟಿ ರಾಧಿಕಾ ಪಂಡಿತ್, ಸದ್ಯ ಕೆಲವರ್ಷಗಳಿಂದ ಸಿನಿಮಾರಂಗದಿಂದ ನಟನೆಯಿಂದ ಸಂಪೂರ್ಣವಾಗಿ ಬ್ರೇಕ್ ಪಡೆದು, ತಮ್ಮ ಸಂಸಾರ, ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎಂದೆ ಖ್ಯಾತಿ ಪಡೆದ ನಟಿ ರಾಧಿಕಾ ಪಂಡಿತ್ (Radhika Pandith), ಸದ್ಯ ಕೆಲವರ್ಷಗಳಿಂದ ಸಿನಿಮಾರಂಗದಿಂದ ನಟನೆಯಿಂದ ಸಂಪೂರ್ಣವಾಗಿ ಬ್ರೇಕ್ ಪಡೆದು, ತಮ್ಮ ಸಂಸಾರ, ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್ವುಡ್ ನ ಬಹುಬೇಡಿಕೆಯ ನಟಿ ರಾಧಿಕಾ ಪಂಡಿತ್, ಕನ್ನಡ ಚಿತ್ರರಂಗಕ್ಕೆ ಹಿಟ್ ಚಿತ್ರಗಳನ್ನು ನೀಡಿರುವ ರಾಧಿಕಾ ಮದುವೆಯಾಗಿ, ಪ್ರೆಗ್ನೆಂಟ್ ಆದ ಬಳಿಕ ನಟನೆಗೆ ಬ್ರೇಕ್ ಕೊಡಲು ನಿರ್ಧರಿಸಿದ್ದರು, ಸದ್ಯ ತಮ್ಮ ಮಕ್ಕಳೊಡನೆ ಆಟವಾಡುತ್ತಾ, ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ ಈ ಚೆಲುವೆ.
ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾಯ್ತ ಇರೋದು ಸುಳ್ಳಲ್ಲ. ನಿನ್ನೆ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮಿ ಎನಿಥಿಂಗ್ ಎನ್ನುವ ಸೆಷನ್ ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಓಪನ್ ಆಗಿ ಉತ್ತರ ನೀಡಿದ್ದಾರೆ.
ಅಭಿಮಾನಿಯೊಬ್ಬರು ಮೇಡಂ ನೀವು ಮತ್ತೆ ಯಾವಾಗ ಸಿಮಿಮಾಗೆ ಎಂಟ್ರಿ ಕೊಡುತ್ತೀರಿ. ನಿಮ್ಮ ಎಲ್ಲಾ ಅಭಿಮಾನಿಗಳು ನಿಮ್ಮನ್ನು ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಕಾಯ್ತಾ ಇದ್ದೇವೆ ಅಂದಿದ್ದಾರೆ. ಅದಕ್ಕೆ ಉತ್ತರಿಸಿದ ರಾಧಿಕಾ ಸರಿಯಾದ ಸಮಯ ಬಂದಾಗ (When Time is Right) ಎಂದು ಉತ್ತರಿಸಿದ್ದಾರೆ.
ಇನ್ನು ರಾಧಿಕಾ ಅವರು ಬೇರೆ ಬೇರೆ ಪ್ರಶ್ನೆಗಳಿಗೂ ಸಹ ಉತ್ತರ ನೀಡಿದ್ದಾರೆ. ಒಬ್ಬರು ಐರಾ ಮತ್ತು ಯಥರ್ವ್ ಯಾರ ರೀತಿ? ನಿಮ್ಮ ಹಾಗೆಯೇ? ಬಾಸ್ ರೀತಿ ಇದ್ದಾರೆಯೇ ಎನ್ನುವ ಪ್ರಶ್ನೆಗೆ ರಾಧಿಕಾ ಐರಾ, ಯಥರ್ವ್ (Ayra and yatharv) ತುಂಬಾ ಬೇಗ ಬೆಳೆಯುತ್ತಿದ್ದಾರೆ. ಅವರು ತಮ್ಮದೇ ಆದ ವೈಯಕ್ತಿಕ ವ್ಯಕ್ತಿತ್ವಗಳ ರೂಪಿಸಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರ ಬೆಳವಣಿಗೆ ನಮಗೆ ಹೆಮ್ಮೆ ತಂದಿದೆ ಎಂದು ಉತ್ತರಿಸಿದ್ದಾರೆ.
ಇನ್ನು ರಾಧಿಕಾ ಪಂಡಿತ್ ಕೈಯಲ್ಲಿರುವ ವೈಟ್ ಗೋಲ್ಡ್ ಬಗ್ಗೆ ಒಬ್ಬರು ಪ್ರಶ್ನಿಸಿದ್ದು, ಅದಕ್ಕೂ ಕೂಡ ನಟಿ ಮಾಹಿತಿ ನೀಡಿದ್ದು ಈ ಉಂಗುರ ನನಗೆ ತುಂಬಾನೆ ವಿಶೇಷವಾದುದು, ನಾನು ನನ್ನ ಮೊದಲನೇ ವೇತನದಲ್ಲಿ (first salary) ತೆಗೆದುಕೊಂಡಂತಹ ಉಂಗುರ ಇದಾಗಿದೆ ಎಂದು ಹೇಳಿದ್ದಾರೆ.
radhika pandit
ಇನ್ನು ನಿಮಗೆ ನಿಮ್ಮ ಅಮ್ಮ ಮಾಡಿದ, ಯಾವ ಆಹಾರ ಇಷ್ಟ, ಅದೇ ರೀತಿ ನಿಮ್ಮ ಮಕ್ಕಳಿಗೆ ನಿಮ್ಮ ಕೈರುಚಿಯ ಯಾವ ಆಹಾರ ಇಷ್ಟ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಅಮ್ಮ ಮಾಡುವ ಸಾರಸ್ವತ್, ಗೋವಾ ಶೈಲಿಯ ಆಹಾರಗಳು ನನಗೆ ಇಷ್ಟ. ಇನ್ನು ಐರಾಗೆ ನಾನು ಬೇಕ್ ಮಾಡೊದೆಲ್ಲ ಇಷ್ಟ, ನಾನು ಅಡುಗೆ ಮಾಡೊದನ್ನೆಲ್ಲಾ ಐರಾ ಒಪ್ಪಿಕೊಂಡಿದ್ದಾಳೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.