ಲೆಹೆಂಗಾ ಡ್ರೆಸ್ ತೊಟ್ಟು ಹಾಟ್ ಲುಕ್ ಕೊಟ್ಟ ರಾಗಿಣಿ ದ್ವಿವೇದಿ: ತುಪ್ಪದ ಬೆಡಗಿ ಮುಖ ನೋಡಿ ನೆಟ್ಟಿಗರು ಹೀಗನ್ನೋದಾ!
ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ಅಲ್ಲಿ ಹೊಳೆಯುತ್ತಿದ್ದಾರೆ. ಮೋಹಕ ನೋಟ, ಮಾದಕ ಹೊಳಿಪಿನೊಂದಿಗೆ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೇ ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ನಟನೆ ಜೊತೆಗೆ ಗ್ಲ್ಯಾಮರ್ನಿಂದ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ನಟಿ ರಾಗಿಣಿ ದ್ವಿವೇದಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಛಾಪು ಮೂಡಿಸಿರುವ ಸುಂದರಿ.
ಇತ್ತೀಚೆಗೆ ಬೆಂಗಳೂರು ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದ ರಾಗಿಣಿ ದ್ವಿವೇದಿ, ಹಳದಿ ಟ್ರೆಡಿಷನಲ್ ಔಟ್ಫಿಟ್ ಧರಿಸಿ ಕಾಣಿಸಿಕೊಂಡಿದ್ದು, ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯೆಲ್ಲೋ ಲೆಹೆಂಗಾ ಡ್ರೆಸ್ನಲ್ಲಿ ರಾಗಿಣಿ ದ್ವಿವೇದಿ ಮಿಂಚಿದ್ದು, ಅವರ ಕರ್ಲಿ ಹೇರ್, ಕಿವಿಯೋಲೆ, ನೆಕ್ಲೇಸ್ ಸಖತ್ ಹೈಲೈಟ್ ಆಗಿತ್ತು. ಅಲ್ಲದೇ ಅವರ ಮಾದಕ ಲುಕ್ ಪಡ್ಡೆಹೈಕ್ಳ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.
ರಾಗಿಣಿ ದ್ವಿವೇದಿ ಹಂಚಿಕೊಂಡಿರುವ ಫೋಟೋಗಳಿಗೆ ಈಗಾಗಲೇ ಹದಿನಾಆರು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. ಜೊತೆಗೆ ನೆಟ್ಟಿಗರ, ಸಖತ್ ಹಾಟ್ ನಮ್ ತುಪ್ಪದ ಬೆಡಗಿ, ಕಣ್ಣಲ್ಲೇ ಕೊಲ್ಲುತ್ತೀರಾ, ಹಾಟ್ ಹಾಟ್ ತುಪ್ಪ, ಅಬ್ಬಾ ಸೂಪರ್ ಕ್ವೀನ್ ಅಂತೆಲ್ಲಾ ತರೇಹವಾರಿ ಕಮೆಂಟ್ಗಳನ್ನು ಮಾಡಿದ್ದಾರೆ.
ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಅಭಿಮಾನಿ ಬಳಗ ಸಖತ್ ದೊಡ್ಡದಿದೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ರಾಗಿಣಿ ಅವರ ಫಾಲೋವರ್ಸ್ ಎಲ್ಲಾ ಫೋಟೋಗಳಿಗೆ ಲೈಕ್ ಒತ್ತಿ ಕಾಮೆಂಟ್ ಮಾಡುತ್ತಾ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ.
ಸ್ಯಾಂಡಲ್ವುಡ್ನಲ್ಲಿ ವೀರ ಮದಕರಿ ಸಿನಿಮಾ ಮೂಲಕ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ, ಕೆಂಪೇಗೌಡ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಕಿಚ್ಚ ಸುದೀಪ್ ಅವರ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ಅವರು, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಇನ್ನು ರಾಗಿಣಿ ಸಮಯ ಸಿಕ್ಕಾಗೆಲ್ಲಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವ ರಾಗಿಣಿ ಹೊಸ ರುಚಿಗಳನ್ನು ಪ್ರಯತ್ನಿಸುತ್ತಿರುತ್ತಾರೆ. ರಾಗಿಣಿ ಅಡುಗೆ ಮಾಡುವ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ.
ರಾಗಿಣಿ ಅವರು ಪರಭಾಷೆಗಳಲ್ಲೂ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸಖತ್ ಹೆಚ್ಚುತ್ತಿದೆ. ಕನ್ನಡದಲ್ಲಿ ಜಟ್ಟ ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿಯೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.