ಸೆರಗು ಇಳಿಬಿಟ್ಟು ಕಣ್ಮನ ಸೆಳೆದ ತಾಂಡವ್ ರಿಯಲ್ ಪತ್ನಿ ಸಂಗೀತಾ: ಸೌಂದರ್ಯದ ರತಿ ದೇವತೆ ಎಂದ ಫ್ಯಾನ್ಸ್!
ನಟಿ ಸಂಗೀತಾ ಭಟ್ ಕೇವಲ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಈಕೆ ಸಿನಿಮಾ ಜೊತೆಗೆ ಸೀರಿಯಲ್ನಲ್ಲಿಯೂ ಮಿಂಚಿದ್ದು, ಇದೀಗ ಹೊಸ ಫೋಟೋಶೂಟ್ನಲ್ಲಿ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ.
ಸಂಗೀತಾ ಭಟ್ ಸ್ಯಾಂಡಲ್ವುಡ್ ಮತ್ತು ಕಿರುತೆರೆಯಲ್ಲಿ ಪರಿಚಿತ ಹೆಸರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿಯೂ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ.
ಸಂಗೀತಾ ಭಟ್ ಬ್ಲ್ಯಾಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಬೂದಿ ಬಣ್ಣದ ಸೀರೆ ಉಟ್ಟಿದ್ದಾರೆ. ಜೊತೆಗೆ ಸೆರಗನ್ನು ಇಳಿಬಿಟ್ಟುಕೊಂಡು ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅವರ ಲುಕ್ ಆಕರ್ಷಕವಾಗಿ ಕಂಡುಬಂದಿದೆ.
ಕೈಗೆ ಒಂದು ಬಳೆ ಮತ್ತು ಮೂಗುತಿ ಮಾತ್ರ ಧರಿಸಿದ್ದ ಸಂಗೀತಾ ಅವರ ನೋಟ ಸಖತ್ ಹಾಟ್ ಆಗಿತ್ತು. ಜೊತೆಗೆ ಅವರು ಧರಿಸಿದ್ದ ಆಕ್ಸೆಡೈಸ್ಡ್ ಜ್ಯುವೆಲ್ಲರಿ ತುಂಬಾ ಸಿಂಪಲ್ಲಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ವಿಶೇಷವಾಗಿ ಹೆಣ್ಣು ಎಷ್ಟು ಪ್ಲೇನ್ ಆಗಿದ್ದರೂ ಸರಿ, ಆದರೆ ಸತ್ಯ ಮತ್ತು ಪ್ರಾಮಾಣಿಕತೆ ಆಕೆ ಮುಖದಲ್ಲಿದ್ದರೆ ಆಕೆ ಸುಂದರವಾಗಿರುತ್ತಾಳೆ ಎಂದು ಅವರು ಫೋಟೋಗೆ ಕ್ಯಾಪ್ಶನ್ ಬರೆದಿದ್ದಾರೆ.
ಸಂಗೀತಾ ಭಟ್ ಸ್ಲಿಮ್ ಆಗಿದ್ದಾರೆ. ಸ್ಟ್ರಿಕ್ಟ್ ಡಯೆಟ್ ಮತ್ತು ವರ್ಕೌಟ್ ಮೂಲಕ ಇದನ್ನ ಸಾಧಿಸಿದ್ದಾರೆ. ಮುಖದ ಕಾಂತಿ ಕೂಡ ಅದ್ಭುತವಾಗಿಯೇ ಇದೆ. ಸಂಗೀತಾ ಅವರ ಪ್ರತಿ ಫೋಟೋಗಳೂ ಇಲ್ಲಿ ವಿಶೇಷವಾಗಿ ಗಮನ ಸೆಳೆದಿದೆ.
ಸಂಗೀತಾ ಅವರ ಫೋಟೋಗೆ ಭರ್ಜರಿಯಾಗಿ ಲೈಕ್ಸ್ ಹರಿದುಬಂದಿವೆ. ಸೌಂದರ್ಯದ ಗಣಿ ನೀವು, ನಿನ್ನ ನೋಟದಲ್ಲೇ ನಾನು ಸೋತುಹೋದೆ, ರತಿ ದೇವತೆ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳಲ್ಲಿ ಸಂಗೀತಾ ಭಟ್ ನಟಿಸಿ ಜನರಿಂದ ಮೆಚ್ಚುಗೆ ಗಳಿಸಿದ್ದಾರೆ.
ಇನ್ನು ಸಂಗೀತಾ ಭಟ್ ಪತಿ ಸುದರ್ಶನ್ ರಂಗಪ್ರಸಾದ್ ನಿಮ್ಮೆಲ್ಲರಿಗೂ ಗೊತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಪಾತ್ರದಲ್ಲಿ ಸುದರ್ಶನ್ ನಟಿಸುತ್ತಿದ್ದಾರೆ.