ಮಕ್ಕಳ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ ಯಶ್- ರಾಧಿಕಾ; ಫೋಟೋ ವೈರಲ್
ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ಕಪಲ್. ಮಕ್ಕಳಿರುವುದು ನೋಡಿ ಖುಷಿ ಪಟ್ಟ ನೆಟ್ಟಿಗರು....

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಪ್ರತಿ ವರ್ಷವೂ ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
'ವ್ಯಾಲೆಂಟೈನ್ಸ್ ಲಂಚ್ ವಿತ್ ಫಾರ್‌ಎವರ್ ವ್ಯಾಲೆಂಟೈನ್ಸ್' ಎಂದು ರಾಧಿಕಾ ಪಂಡಿತ್ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ಸಿಜ್ಲರ್ ಕೇಕ್ ವಿತ್ ಐಸ್ ಕ್ರೀಂನ ಮಕ್ಕಳ ಐರಾ ಮತ್ತು ಯಥರ್ವ್ ಸಖತ್ ಎಂಜಾಯ್ ಮಾಡಿಕೊಂಡು ತಿನ್ನುತ್ತಿರುವುದು ಫೋಟೋದಲ್ಲಿ ನೋಡಬಹುದು.
ಸಿಂಪಲ್ ಕ್ರೀಮ್ ಬಣ್ಣದ ಔಟ್‌ಫಿಟ್‌ನಲ್ಲಿ ರಾಧಿಕಾ, ಗ್ರೇ ಬಣ್ಣದ ಶರ್ಟ್‌ನಲ್ಲಿ ಯಶ್ ಮಿಂಚಿದ್ದಾರೆ. ಮಕ್ಕಳಿಬ್ಬರು ಕಲರ್‌ಪುಲ್ ಔಟ್‌ಫಿಟ್ ಧರಿಸಿದ್ದಾರೆ.
'You are the high I need” Happy Valentine’s' ಎಂದು ಯಶ್ ತಬ್ಬಿಕೊಂಡಿರುವ ಫೋಟೋಗೆ ರಾಧಿಕಾ ಹೀಗೆ ಬರೆದುಕೊಂಡಿದ್ದಾರೆ.
'The ‘Happy’ hour begins when my Valentine shows up!!' ಎಂದು ಲೈಟ್‌ಗಳಿಂದ ಅಲಂಕಾರ ಮಾಡಿರುವ ಟೇಬಲ್ ಮೇಲೆ ರಾಧಿಕಾ ಕುಳಿತು ಪೋಸ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.