Ramya Divya Spandana: ನಾಳೆ ಬೆಳಗ್ಗೆ 11.15ಕ್ಕೆ ಗುಡ್ ನ್ಯೂಸ್ ಕೊಡಲಿರುವ ರಮ್ಯಾ!
ಗಣೇಶ್ ಹಬ್ಬದ ದಿನ ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಳ್ಳಲಿರುವ ರಮ್ಯಾ. ಏನಿದು ಕ್ಯೂರಿಯಾಸಿಟಿ?
ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಗೌರಿ ಹಬ್ಬದ ದಿನ ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲದೆ ಕುತೂಹಲ ಹೆಚ್ಚಿಸಿದ್ದಾರೆ.
'About time i take the plunge, don't you think? ನಿಮ್ಮೆಲ್ಲರ ಜೊತೆ ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಮುಂದಾಗಿರುವೆ' ಎಂದು ರಮ್ಯಾ ಬರೆದುಕೊಂಡಿದ್ದಾರೆ.
'ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ. ಅದು ಅಫೀಶಿಯಲ್ ವಿಚಾರ' ಎಂದಿದ್ದಾರೆ ರಮ್ಯಾ. ಹೀಗಾಗಿ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಲಿದೆ.
ಸಿನಿಮಾ ರಂಗದಿಂದ ದೂರ ಉಳಿದಿರುವ ಕಮ್ ಬ್ಯಾಕ್ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ವಿಚಾರನೂ ಇರಬಹುದು ಅಂದುಕೊಂಡಿದ್ದಾರೆ.
39 ವರ್ಷದ ರಮ್ಯಾ ಮದುವೆ ಅಗಿಲ್ಲ ಅನ್ನೋ ಕೊರಗು ಅನೇಕರಿಗಿದೆ. ರಮ್ಯಾ ಮದುವೆ ವಿಚಾರ ಅನೌನ್ಸ್ ಮಾಡುತ್ತಾರಾ ಅಥವಾ ಕುತೂಹಲ ಕೂಡ ಇದೆ.
ರಮ್ಯಾ ಶೆಟ್ಟಿ ಗ್ಯಾಂಗ್ ಜೊತೆ ಕ್ಲೋಸ್ ಇರುವ ಕಾರಣ ರಕ್ಷಿತ್, ರಿಷಬ್ ಮತ್ತು ರಾಜ್ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಾರೆ ಅನ್ನೋ ಸುಳಿವು ಇದೆ.