ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಿರ್ದೇಶಕ ಚರಿತ್ ದೇಸಾಯಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯ ಬಗ್ಗೆ ಮೊದಲ ಬಾರಿ ಪರಿಣೀತಿ ತುಟಿ ಎರಡು ಮಾಡಿದ್ದಾರೆ. 

ಬಡವರಾಗಿ ಹಸಿದರೂ ಓಕೆ, ಸೃಜನಶೀಲರಾಗಿರುವುದೇ ಬೆಸ್ಟ್!

ಪರಿಣೀತಿ - ಚರಿತ್ ದೇಸಾಯಿ ಬಗ್ಗೆ ಮೀಡಿಯಾಗಳು ಸಾಕಷ್ಟು ಬರೆದರೂ, ಸುದ್ದಿ ಪ್ರಸಾರ ಮಾಡಿದರೂ ಪರಿಣೀತಿ ಮಾತ್ರ ಹುಂ ಅಂದಿರಲೂ ಇಲ್ಲ, ಊಹೂಂ ಅಂದಿರಲೂ ಇಲ್ಲ.

‘ನಾನು ಇದನ್ನು ಒಪ್ಪುವುದೂ ಇಲ್ಲ. ತಳ್ಳಿ ಹಾಕುವುದೂ ಇಲ್ಲ. ನನ್ನ ಕುಟುಂಬದವರು, ನನ್ನ ಫ್ರೆಂಡ್ಸ್ ಗಳಿಗೆ ಸತ್ಯ ಗೊತ್ತಿದೆ. ನಾನೇ ಹೇಳಲಿ ಎಂದು ಮೀಡಿಯಾಗಳು ನಿರೀಕ್ಷಿಸುತ್ತಿರಬಹುದು. ಆದರೆ ಇದು ನನ್ನ ಪರ್ಸನಲ್ ಲೈಫ್. ನಾನು ಒಪ್ಪುವುದೂ ಇಲ್ಲ, ತಳ್ಳಿ ಹಾಕುವುದೂ ಇಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.