ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ, ಕಾರಣ ನಿಗೂಢ!
ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ/ ಟಿಎಂಸಿ ಕೈವಾಡ ಎಂದು ಆರೋಪಿಸಿದ ಬಿಜೆಪಿ/ ಕೌನ್ಸಿಲರ್ ಆಗಿದ್ದ ಮನೀಶ್ ಶುಕ್ಲಾ ಹತ್ಯೆ/ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಟ್ಟು ಕೊಂದರು
ಕೋಲ್ಕತ್ತಾ(ಅ. 05) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯರೊಬ್ಬರ ಹತ್ಯೆಯಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಮುಖಂಡ ಮನೀಶ್ ಶುಕ್ಲಾ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ತಿತಾಘರ್ ಸಮೀಪ ಉತ್ತರ 24 ಪರಗಣ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸ್ಥಳೀಯ ಕೌನ್ಸಿಲರ್ ಮನೀಶ್ ಶುಕ್ಲಾ ಎಂಬುವವರನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಿ ಟಿ ರಸ್ತೆ ಬಳಿ ಭಾನುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಿದರೂ ಬದುಕಿ ಉಳಿಯಲಿಲ್ಲ.
ಬೆಂಗಳೂರಿಗರೆ ಹುಷಾರ್, ದರೋಡೆಗೆ ಇಳಿದಿದೆ ಪಲ್ಸರ್ ತಂಡ!
ಈ ಘಟನೆ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದಾರೆ. ಆದರೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪ ತಳ್ಳಿಹಾಕಿದೆ.
ಟಿಎಂಸಿ ನಾಯಕರು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಮೇಲೆಯೂ ನಮಗೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಒತ್ತಾಯಿಸಿದ್ದಾರೆ.
ಈ ಘಟನೆ ಬಿಟಿ ರಸ್ತೆಯಲ್ಲಿ ನಡೆದಿದೆ. ಶುಕ್ಲಾ ಬಿಜೆಪಿಯ ಕೌನ್ಸಿಲರ್ ಆಗಿದ್ದರು. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೂಡ ಶುಕ್ಲಾ ಅವರ ಹತ್ಯೆಗೆ ಟಿಎಂಸಿ ಹೊಣೆ ಎಂದಿದ್ದಾರೆ. ಶುಕ್ಲಾ ಅರ್ಜುನ್ ಸಿಂಗ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹತ್ಯೆ ಪರಿಣಾಮ ಬರಕ್ ಪೋರ್ ಏರಿಯಾದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ.