Asianet Suvarna News Asianet Suvarna News

ಗೋಣಿ ಚೀಲದಲ್ಲಿ ಪತ್ನಿ ಮೃತದೇಹ: ಕೊಲೆ ಮಾಡಿ ಪತಿ ಪರಾರಿ!

ಸುಳ್ಯ ನಗರದ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹವೊಂದು ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Wife dead body in a gunny bag Husband escaped
Author
First Published Nov 22, 2022, 10:18 PM IST

ಸುಳ್ಯ (ನ.22):  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹವೊಂದು ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುಳ್ಯದ ರೆಸ್ಟೋರೆಂಟ್ ಒಂದರಲ್ಲಿ ಅಡಿಗೆಯವನಾಗಿ (Cook) ಆಗಿ ಕೆಲಸ  ಮಾಡುತ್ತಿದ್ದ ಪಶ್ಚಿಮ ಬಂಗಾಳದ (West Bengal) ಮೂಲದ ಇಮ್ರಾನ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಆದರೆ, ವಾಸವಿದ್ದ ಅಸಾಮಿ ಇಮ್ರಾನ್‌ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾನೆ. ಕಳೆದ ಐದಾರು ತಿಂಗಳಿನಿಂದ ಸುಳ್ಯದ ರೆಸ್ಟೋರೆಂಟ್ (Restorant)ನಲ್ಲಿ ಕೆಲಸ ಮಾಡುತ್ತಿದ್ದು, ನಗರದ ಹೊರ ವಲಯದ  ವಸತಿ ಸಮುಚ್ಛಯದ ಮನೆಯೊಂದನ್ನು ಬಾಡಿಗೆಗೆ (Rent) ಪಡೆದು ವಾಸಿಸುತ್ತಿದ್ದನು. ಕಳೆದ ಎರಡು ತಿಂಗಳ ಹಿಂದೆ ಮದುವೆ (Marriage) ಎಂದು ಊರಿಗೆ ಹೋದವ ತನ್ನ ಪತ್ನಿ ಎಂದು ವಿಕಲ ಚೇತನಳಾದ ಯುವತಿಯೊಂದಿಗೆ ಮರಳಿ ಬಂದಿದ್ದನು.

ಸಂಶಯದಿಂದ 6 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಕಿತಾ'ಪತಿ'

ಗೋಣಿ ಚೀಲದಲ್ಲಿ ಮೃತದೇಹ: ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ರೆಸ್ಟೋರೆಂಟ್ ಮಾಲಕರಲ್ಲಿ ಹೇಳಿ ಊರಿಗೆ ತೆರಳಿದ್ದಾನೆ. ಮಂಗಳವಾರ ಈತನ ಪಕ್ಕದ ಕೋಣೆಯವರಿಗೆ ವಾಸನೆ (Bad smell) ಬಂದಾಗ ಮನೆಯಲ್ಲಿ ಏನೋ ನಡೆದಿರುವ ಸಂಶಯ ಮೂಡಿತು. ಆದರೆ, ಇಮ್ರಾನ್‌ ಊರಿಗೆ ಹೋಗುವಾಗ ಅವನ ಪತ್ನಿಯನ್ನು (Wife) ಕರೆದುಕೊಂಡು ಹೋಗಿರಲಿಲ್ಲ. ಮೊನ್ನೆ ಮನೆಯಲ್ಲಿ ಕಿರುಚುವ ಶಬ್ದ (screaming sound) ಕೇಳಿಸಿತ್ತು ಎಂದು ನೆರೆಹೊರೆಯವರು (Neighbours) ತಿಳಿಸಿದ ಮಾಹಿತಿಯನ್ನು ಹೊಟೇಲ್ ಮಾಲೀಕ ಪೋಲಿಸರಿಗೆ (Police) ತಿಳಿಸಿದ್ದಾರೆ. ಮಂಗಳವಾರ ಸಂಜೆ ಬಾಡಿಗೆ ಮನೆಗೆ ಹೋಗಿ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಮನೆಯೊಳಗೆ ಗೋಣಿ ಚೀಲ (sack)ದಲ್ಲಿ ಮಹಿಳೆಯ ಮೃತದೇಹ (Dead Body) ಪತ್ತೆಯಾಗಿದೆ.

ಕೊಲೆಯ ಬೆನ್ನಲ್ಲೇ ಪರಾರಿ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಇಮ್ರಾನ್ ಕುರಿತ ಮಾಹಿತಿ (Information) ಕಲೆ ಹಾಕಿದರು. ಇದರ ಆಧಾರದಲ್ಲಿ ಆತನ ಪತ್ತೆಗೆ (detection) ಬಲೆ ಬೀಸಲಾಗಿದೆ. ಆತ ಹೋದ ಕ್ಷಣದಿಂದ ಆತನ ಚಲನ ವಲನಗಳ ಮಾಹಿತಿ ಪಡೆಯಲಾಗುತ್ತಿದೆ. ಎರಡು ದಿನಗಳ ಹಿಂದೆ ರಾತ್ರಿ ವೇಳೆಗೆ ಆತ ಮನೆಯಿಂದ ಬ್ಯಾಗ್ ಹಿಡಿದು ಒಬ್ಬನೇ ರಿಕ್ಷಾದಲ್ಲಿ ಪೇಟೆ ಕಡೆಗೆ ಹೋಗಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅಲ್ಲಿಂದ ಮಂಗಳೂರಿಗೆ (Mangalore) ಹೋಗಿ ರೈಲಿನಲ್ಲಿ ತೆರಳಿರಬೇಕೆಂದು ಶಂಕಿಸಲಾಗುತ್ತಿದೆ. ಈ ಕುರಿತ ಎಲ್ಲ ಮಾಹಿತಿಗಳನ್ನೂ ಪೊಲೀಸರು ಕಲೆ ಹಾಕುತ್ತಿದ್ದಾರೆ. ಆಹಾರ ಸಂಸ್ಥೆಯೊಂದರಲ್ಲಿ ಅಡಿಗೆ ಮಾಡಿಕೊಂಡಿದ್ದ ಇಮ್ರಾನ್ ತನ್ನ ಸ್ನೇಹಿತನೊಬ್ಬನ ಪರಿಚಯದಲ್ಲಿ ಸುಳ್ಯದ ಈ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ್ದ ಎಂದು ತಿಳಿದುಬಂದಿದೆ. ಕೊಲೆಗೀಡಾದ ಯುವತಿಯ ಗುರುತು ಈವರೆಗೆ ಪತ್ತೆಯಾಗಿಲ್ಲ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Follow Us:
Download App:
  • android
  • ios