ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....

ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ದರಿದ್ರ. ಆದರೆ, ಮತ್ತೆ ಕೆಲವೊಂದು ಮನೆಯಲ್ಲಿದ್ದರೆ ಧನ ವೃದ್ಧಿಯಾಗುತ್ತೆ. ಅಂಥವುಗಳಲ್ಲಿ ಲಕ್ಷ್ಮಿ ವಿಗ್ರಹವೂ ಒಂದು ವಾಸ್ತು ಪ್ರಕಾರ ಲಕ್ಷ್ಮಿಯ ಎಂಥ ವಿಗ್ರಹವಿದ್ದರೆ ಸಮೃದ್ಧಿಯಾಗುತ್ತದೆ?

Significance of Lakshmi idol at home

ಲಕ್ಷ್ಮಿಯನ್ನು ಸುಖ ಮತ್ತು ಐಶ್ವರ್ಯದ ದೇವಿ ಎಂದೇ ಪೂಜಿಸಲಾಗುತ್ತದೆ. ಪ್ರತಿಯೊಬ್ಬರ ತಮ್ಮ ಮನೆಯಲ್ಲಿಯೂ ಲಕ್ಷ್ಮಿ ವಾಸಿಸಬೇಕೆಂದು ಬಯಸುವುದು ಸಹಜ. ಪ್ರತಿಯೊಬ್ಬರೂ ಒಂದಲ್ಲ ಒಂದು ರೂಪದಲ್ಲಿ ಲಕ್ಷ್ಮೀಯನ್ನು ಮನೆಯಲ್ಲಿ ಪೂಜಿಸುತ್ತಾರೆ. ಆದರೆ ಮನೆಯಲ್ಲಿ ಎಂತಹ ಪೂರ್ತಿ ಪೂಜಿಸಬೇಕು ಅನ್ನೋದು ಗೊತ್ತಿರುವುದಿಲ್ಲ. 

ಯಾವ ಮನೆಯಲ್ಲಿ ಚಿನ್ನ ಅಥವಾ ಬೆಳ್ಳಿ ಮಹಾಲಕ್ಷ್ಮಿಯ ಮೂರ್ತಿ ಇರುತ್ತದೋ ಅಲ್ಲಿ ಲಕ್ಷ್ಮೀ ದೇವಿ ಆಶೀರ್ವಾದವಿರುತ್ತದೆ. ಜೊತೆಗೆ ಪ್ರತಿದಿನ ವಿಧಿ ವಿಧಾನದಂತೆ ಚಿನ್ನ ಮತ್ತು ಬೆಳ್ಳಿಯ ಲಕ್ಷ್ಮೀ ದೇವಿಗೆ ಪೂಜಿಸಬೇಕು. ಮೂರ್ತಿಯ ಈ ಧಾತು ಕೂಡ ಶುಭ ಎನ್ನಲಾಗುತ್ತದೆ. ಹೆಚ್ಚಾಗಿ ದೇವಾಲಯದಲ್ಲಿ ಹಿತ್ತಾಳೆ ಪ್ರತಿಮೆಯನ್ನು ಪೂಜಿಸುತ್ತಾರೆ. ಈ ಮೂರ್ತಿಯನ್ನು ಪೂಜಿಸಿದರೆ ಮನೆಯಲ್ಲಿ ಸುಖ-ಶಾಂತಿ ಸಿಗುವಂತೆ ಮಾಡಬಹುದು. 

ಲಕ್ಷ್ಮಿ ದೇವಿ ಮೂರ್ತಿ ಹೀಗಿರಬೇಕು... 

  • ಲಕ್ಷ್ಮೀ ದೇವಿಯ ಮೂರ್ತಿ ಕಮಲದ ಹೂವಿನ ಮೇಲೆ ವಿರಾಜಮಾನವಾಗಿದ್ದರೆ ಉತ್ತಮ. 
  • ಮೂರ್ತಿಯ ಕೈಯಲ್ಲಿ ಧನ ಕಲಶ, ಕಮಲದ ಹೂವು, ಶಂಖ ಮತ್ತು ಒಂದು ಕೈಯಲ್ಲಿ ಆಶೀರ್ವಾದ ಮುದ್ರೆ ಇರಬೇಕು. 
  • ಮೂರ್ತಿಯ ಕೈಯಲ್ಲಿ ದೊಡ್ಡ ಉಂಗುರ ಇರಬೇಕು. 
  • ಲಕ್ಷ್ಮೀ ಮೂರ್ತಿಯ ಜೊತೆಗೆ ಗಣಪತಿ ಮೂರ್ತಿ ಇರುವುದು ಉತ್ತಮ. 
  • ಮನೆಯ ಮಂದಿರದಲ್ಲಿ ಶ್ರೀಯಂತ್ರ ಸ್ಥಾಪಿಸಿ.
Latest Videos
Follow Us:
Download App:
  • android
  • ios