Food
ಆವಕಾಡೊ, ಬಟರ್ ಪ್ರೂಟ್ ಅಥವಾ ಬೆಣ್ಣೆ ಹಣ್ಣು ಎಂದೆಲ್ಲಾ ಕರೆಯಲ್ಪಡುವ ಈ ಹಣ್ಣಿನ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ,
ವಿಟಮಿನ್ ಸಿ, ಇ, ಕೆ, ಪೊಟ್ಯಾಶಿಯಂ, ಮೆಗ್ನೀಷಿಯಂ, ಆರೋಗ್ಯಕರ ಕೊಬ್ಬುಗಳು ಮುಂತಾದ ಅಗತ್ಯ ಪೋಷಕಾಂಶಗಳು ಆವಕಾಡೊದಲ್ಲಿ ಹೇರಳವಾಗಿವೆ.
ಆವಕಾಡೊ ಸೇವನೆಯು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೆಚ್‌ಡಿಎಲ್ (ಒಳ್ಳೆಯ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆವಕಾಡೊದಲ್ಲಿ ಪೊಟ್ಯಾಶಿಯಂ ಇದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆವಕಾಡೊದಲ್ಲಿರುವ ಫೈಬರ್ ಹಸಿವು ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
ಆವಕಾಡೊದಲ್ಲಿ ಫೈಬರ್ ಇರುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ. ಆರೋಗ್ಯಕರ ಕರುಳಿನ ಮೈಕ್ರೋಬಯೋಮ್ ಮತ್ತು ಒಟ್ಟು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಆವಕಾಡೊ ಕಣ್ಣುಗಳನ್ನು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಿಂದ ರಕ್ಷಿಸುತ್ತದೆ.
ಹಾಲಲ್ಲಷ್ಟೇ ಅಲ್ಲ, ಕಾಫಿಯಲ್ಲೂ ಅರಿಶಿನ ಬೆರೆಸಿ ಕುಡಿದರೆ ಎಷ್ಟೆಲ್ಲ ಲಾಭಗಳಿವೆ!
ಭಾರತಕ್ಕೆ ಜಿಲೇಬಿ ತಂದವರು ಯಾರು? 10 ವಿಧ ಜಿಲೇಬಿಗಳು
ಅನ್ನ, ರೊಟ್ಟಿಗೆ ಅದ್ಭುತ ರುಚಿ ನೀಡುವ ಮಹಾರಾಷ್ಟ್ರೀಯನ್ ಜವಸ್ ರೆಸಿಪಿ
ಈ 4 ದಿನಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನಬೇಡಿ.. ಯಾಕೆ ಗೊತ್ತಾ..?