ಭಾರತಕ್ಕೆ ಹೋದರೆ ಎಚ್ಚರವಾಗಿರಿ: ಪ್ರಜೆಗಳಿಗೆ ಇಂಗ್ಲೆಂಡ್, ಅಮೆರಿಕ ಪ್ರವಾಸ ಸಲಹೆ!

By Suvarna NewsFirst Published Dec 7, 2019, 8:52 PM IST
Highlights

ಭಾರತದಲ್ಲಿ ಹೆಚ್ಚಾದ ಮಹಿಳೆಯರ ವಿರುದ್ಧದ ದೌರ್ಜನ್ಯ| ಹೈದರಾಬಾದ್ ಪಶುವೈದ್ಯೆ ಹತ್ಯಾಚಾರ ಪ್ರಕರಣ| ಉನ್ನಾವೋ ಯುವತಿ ಅತ್ಯಚಾರ, ಹತ್ಯೆ ಪ್ರಕರಣ| ಜಾಗತಿಕವಾಗಿ ಭಾರತದ ಮಾನ ಹರಾಜು?| ತಮ್ಮ ಪ್ರಜೆಗಳಿಗೆ ಪ್ರವಾಸ ಸಲಹೆ ಬಿಡುಗಡೆ ಮಾಡಿದ ಇಂಗ್ಲೆಂಡ್ ಹಾಗೂ ಅಮೆರಿಕ| ತನ್ನ ಪ್ರವಾಸ ಸಲಹೆಗಳನ್ನು ಪಾಲಿಸುವಂತೆ ಪ್ರಜೆಗಳಿಗೆ ಮನವಿ| ಒಂಟಿ ಮಹಿಳಾ ಯಾತ್ರಿಗಳಿಗೆ ವಿಶೇಷ ಸಲಹಾ ಪಟ್ಟಿ ಬಿಡುಗಡೆ ಮಾಡಿದ ಇಂಗ್ಲೆಂಡ್| ಕಳೆದ ಮಾರ್ಚ್‌ನಲ್ಲೇ ತನ್ನ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ನೀಡಿರುವ ಅಮೆರಿಕ|

ಇಂಗ್ಲೆಂಡ್(ಡಿ.07): ಹೈದರಾಬಾದ್ ಪಶುವೈದ್ಯೆ ಅತ್ಯಚಾರ, ಉನ್ನಾವೋ ಯುವತಿ ಅತ್ಯಾಚಾರ ಪ್ರಕರಣಗಳಿಂದ ಜಾಗತಿಕವಾಗಿ ಭಾರತದ ಮಾನ ಹರಾಜಾಗಿರುವ ಅನುಮಾನ ವ್ಯಕ್ತವಾಗಿದೆ.

ಭಾರತದಲ್ಲಿ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಎಚ್ಚೆತ್ತಿರುವ ಇಂಗ್ಲೆಂಡ್ ಹಾಗೂ ಅಮೆರಿಕ, ಭಾರತಕ್ಕೆ ಭೇಟಿ ನೀಡುವ ತಮ್ಮ ಪ್ರಜೆಗಳಿಗೆ ಪ್ರವಾಸ ಸಲಹೆ ಬಿಡುಗಡೆ ಮಾಡಿವೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಎಚ್ಚರದಿಂದ ಇರುವಂತೆ ಇಂಗ್ಲೆಂಡ್ ಮತ್ತು ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ತನ್ನ ಪ್ರವಾಸ ಸಲಹೆಗಳನ್ನು ಪಾಲಿಸುವಂತೆಯೂ ಇವರೆಡೂ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಮನವಿ ಮಾಡಿದೆ.

ಈ ಕುರಿತು ಇಂಗ್ಲೆಂಡ್ ಸರ್ಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲಹಾ ಪಟ್ಟಿ ಬಿಡುಗಡೆ ಮಾಡಿದ್ದು, ವಿಶೇಷವಾಗಿ ಮಹಿಳಾ ಯಾತ್ರಿಗಳು ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ.

ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್

ಒಂಟಿ ಮಹಿಳಾ ಯಾತ್ರಿಗಳು ಪ್ರವಾಸದ ವೇಳೆ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಧಿರಿಸು ಧರಿಸುವುದು ಒಳ್ಳೆಯದು ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಗುಂಪು ಪ್ರವಾಸದ ವೇಳೆಯೂ ಮಹಿಳಾ ಯಾತ್ರಿಗಳು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ಸೂಚನೆ ನೀಡಲಾಗಿದೆ.

11 ತಿಂಗಳಲ್ಲಿ 86 ಅತ್ಯಾಚಾರ: ಯುಪಿಯ ಉನ್ನಾವ್ ಈಗ 'ರೇಪ್ ರಾಜಧಾನಿ'!

ಇದಕ್ಕೆ ಪೂರಕವಾಗಿ ಗೋವಾ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಬ್ರಿಟಿಷ್ ಮಹಿಳಾ ಪ್ರಜೆಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಬ್ರಿಟಿಷ್ ಸರ್ಕಾರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

ಬದುಕಲಿಲ್ಲ ಉನ್ನಾವ್ ಅತ್ಯಾಚಾರ ಸಂತ್ರಸ್ತೆ

ಕಳೆದ ಮಾರ್ಚ್‌ನಲ್ಲೇ ಅಮೆರಿಕ ಕೂಡ ತನ್ನ ಪ್ರಜೆಗಳಿಗೆ ಇಂತದ್ದೇ ಸೂಚನೆ ನೀಡಿದ್ದು, ಭಾರತದಲ್ಲಿ ಮಹಿಳೆಯರು ಅಸುರಕ್ಷಿತವಾಗಿದ್ದು, ಪ್ರವಾಸದ ವೇಳೆ ತಮ್ಮ ಮಾನ ಮತ್ತು ಪ್ರಾಣದ ರಕ್ಷಣೆ ಕುರಿತು ಎಚ್ಚರದಿಂದ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

click me!