ನಾಸಾದ ಅತ್ಯಂತ ಪ್ರತಿಭಾವಂತ ಗಗನಯಾತ್ರಿಗಳಲ್ಲಿ ಒಬ್ಬರಾಗಿ ಸುನಿತಾ ಅವರ ಸ್ಥಾನವನ್ನು ಭದ್ರಪಡಿಸುತ್ತದೆ. ಇಂತಹ ಅದ್ಭುತ ವೃತ್ತಿಜೀವನವನ್ನು ಹೊಂದಿರುವ ಸುನಿತಾ ವಿಲಿಯಮ್ಸ್ ಬಗ್ಗೆ ಅನೇಕರಿಗೆ ಒಂದು ವಿಷಯದ ಬಗ್ಗೆ ಆಶ್ಚರ್ಯವಿರಬಹುದು.
ಕ್ಯಾಲಿಫೋರ್ನಿಯಾ: ಅನಿರೀಕ್ಷಿತವಾಗಿ ದೀರ್ಘ ಗಗನಯಾನದ ನಂತರ, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ತಮ್ಮ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ ಭೂಮಿಗೆ ಮರಳಲು ಸಿದ್ಧರಾಗುತ್ತಿದ್ದಾರೆ. ಯುಎಸ್ ನೌಕಾಪಡೆಯ ಮಾಜಿ ಅಧಿಕಾರಿ ಮತ್ತು ಅನುಭವಿ ಗಗನಯಾತ್ರಿಯಾಗಿರುವ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಪರಿಶೋಧನೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇದು ನಾಸಾದ ಅತ್ಯಂತ ಪ್ರತಿಭಾವಂತ ಗಗನಯಾತ್ರಿಗಳಲ್ಲಿ ಒಬ್ಬರಾಗಿ ಸುನಿತಾ ಅವರ ಸ್ಥಾನವನ್ನು ಭದ್ರಪಡಿಸುತ್ತದೆ. ಇಂತಹ ಅದ್ಭುತ ವೃತ್ತಿಜೀವನವನ್ನು ಹೊಂದಿರುವ ಸುನಿತಾ ವಿಲಿಯಮ್ಸ್ ಬಗ್ಗೆ ಅನೇಕರಿಗೆ ಒಂದು ವಿಷಯದ ಬಗ್ಗೆ ಆಶ್ಚರ್ಯವಿರಬಹುದು. ಸುನಿತಾ ವಿಲಿಯಮ್ಸ್ ಎಷ್ಟು ಸಂಬಳ ಪಡೆಯುತ್ತಾರೆ ಎಂಬುದು ಆ ವಿಷಯ. ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಸುನಿತಾ ವಿಲಿಯಮ್ಸ್‌ಗೆ ಸಂಬಳ ಹೊರತುಪಡಿಸಿ ಯಾವುದೇ ಓವರ್ ಟೈಮ್ ಭತ್ಯೆಗಳು ಸಿಗಲ್ಲ ಎಂದು ವರದಿಯಾಗಿದೆ.
ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತ NASA ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಕಾರ, ಗಗನಯಾತ್ರಿಗಳಿಗೆ ವಿಶೇಷ ಓವರ್‌ಟೈಮ್ ಸಂಬಳ ಸಿಗುವುದಿಲ್ಲ. ಗಗನಯಾತ್ರಿಗಳು ಪಡೆಯುವ ಏಕೈಕ ಹೆಚ್ಚುವರಿ ಪರಿಹಾರವೆಂದರೆ ದೈನಂದಿನ ಸ್ಟೈಫಂಡ್ ಎಂದು ದಿನಕ್ಕೆ ಕೇವಲ $4 (₹347) ಮಾತ್ರ ಪಡೆಯುತ್ತಾರೆ. ಇನ್ನುಳಿದಂತೆ ಸಂಪೂರ್ಣ ಸಂಬಳವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಯುಎಸ್ ಸರ್ಕಾರದ ಸಂಬಳದ ಸ್ಕೇಲ್ ಪ್ರಕಾರ, ನಾಸಾ ಗಗನಯಾತ್ರಿಗಳಿಗೆ ಅವರ ಅನುಭವ ಮತ್ತು ಶ್ರೇಣಿಯ ಆಧಾರದ ಮೇಲೆ ಸಂಬಳ ನೀಡುತ್ತದೆ. ನಾಸಾ ಅಡಿಯಲ್ಲಿ ಕೆಲಸ ಮಾಡುವ ಗಗನಯಾತ್ರಿಗಳು ಸಾಮಾನ್ಯವಾಗಿ GS-12 ರಿಂದ GS-15 ರವರೆಗಿನ ಗ್ರೇಡ್ ಪ್ರಕಾರ ಸಂಬಳವನ್ನು ಪಡೆಯುತ್ತಾರೆ. GS 12 ಗ್ರೇಡ್ ಗಗನಯಾತ್ರಿಯ ಮೂಲ ವೇತನ ಸುಮಾರು 66,167 ಡಾಲರ್. ಇದು ವಾರ್ಷಿಕವಾಗಿ ಸುಮಾರು 55 ಲಕ್ಷ ಭಾರತೀಯ ರೂಪಾಯಿಗಳಿಗೆ ಸಮಾನವಾಗಿರುತ್ತದೆ. ಅನುಭವಿ ಗಗನಯಾತ್ರಿಗಳು GS 13 ಅಥವಾ GS 14 ವರ್ಗಕ್ಕೆ ಸೇರುತ್ತಾರೆ. ಅವರ ಸಂಬಳ ಸುಮಾರು 90,000 ಡಾಲರ್‌ನಿಂದ 140,000 ಡಾಲರ್ ವರೆಗೆ ಇರಬಹುದು, ಅಂದರೆ ವಾರ್ಷಿಕವಾಗಿ ಸುಮಾರು 75 ಲಕ್ಷದಿಂದ 1.1 ಕೋಟಿ ಭಾರತೀಯ ರೂಪಾಯಿಗಳವರೆಗೆ.
ಸುನಿತಾ ವಿಲಿಯಮ್ಸ್ ಅವರ ಅನುಭವ ಮತ್ತು ಸ್ಥಾನವನ್ನು ಪರಿಗಣಿಸಿದರೆ, ಅವರ ಸಂಬಳ GS 14 ಅಥವಾ GS 15 ಗ್ರೇಡ್ ಪ್ರಕಾರ ಇರಬಹುದು ಎಂದು ಅಂದಾಜಿಸಲಾಗಿದೆ. ಅವರ ವಾರ್ಷಿಕ ಸಂಬಳ ಸುಮಾರು 152,258 ಡಾಲರ್ (1.26 ಕೋಟಿ ರೂಪಾಯಿ) ಎಂದು ಹಲವಾರು ಸುದ್ದಿ ವರದಿಗಳು ಹೇಳುತ್ತವೆ. ಸಂಬಳದ ಜೊತೆಗೆ, ನಾಸಾದ ಗಗನಯಾತ್ರಿಗಳು ಸಮಗ್ರ ಆರೋಗ್ಯ ವಿಮೆ, ಮುಂದುವರಿದ ಮಿಷನ್ ತರಬೇತಿ, ಮಾನಸಿಕ ಬೆಂಬಲ ಮತ್ತು ಪ್ರಯಾಣ ಭತ್ಯೆಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ: ಸುನಿತಾ ಆಗಮನ ಸನ್ನಿಹಿತ: 9 ತಿಂಗಳ ಬಳಿಕ ಕೂಡಿಬಂತು ಭೂಮಿಗೆ ಮರಳುವ ಯೋಗ!
ಫೆಡರಲ್ ಮಾರ್ಷಲ್ ಆಗಿರುವ ಪತಿ ಮೈಕಲ್ ಜೆ ವಿಲಿಯಮ್ಸ್ ಜೊತೆಗೆ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ವಾಸಿಸುವ ಸುನಿತಾ ವಿಲಿಯಮ್ಸ್ ಅವರ ಆಸ್ತಿ ಸುಮಾರು ಐದು ಮಿಲಿಯನ್ ಡಾಲರ್ ಎಂದು ಮಾರ್ಕ್ ಡಾಟ್ ಕಾಮ್ ವರದಿ ಮಾಡಿದೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆದಿದ್ದು, ಸುನಿತಾ ಅವರ ಬಾಹ್ಯಾಕಾಶ ಸಂಶೋಧನೆಯಲ್ಲಿನ ಬದ್ಧತೆಯನ್ನು ತೋರಿಸುತ್ತದೆ.
ಜೂನ್ 5, 2024 ರಿಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ವಾಸಿಸುತ್ತಿದ್ದಾರೆ. ಇಬ್ಬರೂ ಪ್ರಯಾಣಿಸಿದ ಬೋಯಿಂಗ್ ಬಾಹ್ಯಾಕಾಶ ನೌಕೆಗೆ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ನಿಲ್ದಾಣದಲ್ಲಿ 9 ತಿಂಗಳಿಗಿಂತ ಹೆಚ್ಚು ಕಾಲ ತಂಗಬೇಕಾಯಿತು. ಸುನಿತಾ ಮತ್ತು ಬುಚ್ ಅವರನ್ನು ಕರೆತರಲು ನಾಸಾ ಸ್ಪೇಸ್ ಎಕ್ಸ್‌ನೊಂದಿಗೆ ಸೇರಿ ಉಡಾಯಿಸಿದ ಕ್ರೂ ಡ್ರಾಗನ್ ಕ್ಯಾಪ್ಸುಲ್ ISS ತಲುಪಿದೆ. ಸುನಿತಾ ಮತ್ತು ಬುಚ್ ಮಾರ್ಚ್ 19 ರಂದು ಭೂಮಿಗೆ ಮರಳುವ ನಿರೀಕ್ಷೆಯಿದೆ. ವಾಪಸಾತಿ ಪ್ರಯಾಣದಲ್ಲಿ, ಕ್ರೂ-9 ಮಿಷನ್‌ನ ಇತರ ಸದಸ್ಯರಾದ ನಾಸಾದ ನಿಕ್ ಹೇಗ್ ಮತ್ತು ರೋಸ್‌ಕಾಸ್ಮೊಸ್‌ನ ಅಲೆಕ್ಸಾಂಡರ್ ಗೋರ್ಬನೋವ್ ಸಹ ಅದೇ ದಿನ ಡ್ರಾಗನ್ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ.
ಇದನ್ನೂ ಓದಿ: ಕ್ರೂ-10 ತಂಡದ ಸದಸ್ಯರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತಿಸಿಕೊಂಡ ಸುನಿತಾ ವಿಲಿಯಮ್ಸ್